ETV Bharat / bharat

ಬಾಯ್‌ಫ್ರೆಂಡ್​ ಎದುರೇ ಯುವತಿ ಮೇಲೆ ಅತ್ಯಾಚಾರ: ಮೂವರು ಕಾಮುಕರ ಬಂಧನ - ಬಾಯ್ ಫ್ರೆಂಡ್​ ಎದುರೇ ಯುವತಿ ಮೇಲೆ ಅತ್ಯಾಚಾರ

ಬಾಯ್‌ಫ್ರೆಂಡ್​ ಕಣ್ಣೆದುರೇ ಯುವತಿಯ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Young Woman raped in front of boyfriend
Young Woman raped in front of boyfriend
author img

By

Published : Mar 29, 2022, 4:33 PM IST

ಕಡಲೂರು(ತಮಿಳುನಾಡು): ಕಡಲೂರಿನ ಕಮ್ಮಿಯಂಪೆಟ್ಟೈ ಪ್ರದೇಶದಲ್ಲಿ ತಡರಾತ್ರಿ ಇಬ್ಬರು ಲವರ್ಸ್​​ ಮಾತನಾಡುತ್ತಾ ನಿಂತಿದ್ದ ವೇಳೆ ಅಲ್ಲಿಗೆ ಬಂದಿರುವ ಮೂವರು ದುಷ್ಕರ್ಮಿಗಳು, ತಮ್ಮ ಮೊಬೈಲ್​​ನಲ್ಲಿ ಅವರ ಫೋಟೋ ತೆಗೆದು ಬೆದರಿಕೆ ಹಾಕಿದ್ದಾರೆ. ಇದರ ಬೆನ್ನಲ್ಲೇ 21 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮುಂದೆ ಯುವತಿ ತನ್ನ ಮೇಲೆ ನಡೆದಿರುವ ದುಷ್ಕೃತ್ಯದ ಬಗ್ಗೆ ಹೇಳಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಕಡಲೂರು ಹೆಡ್​​ಪೋಸ್ಟ್​ ಆಫೀಸ್​ ಬಳಿಯ ಬಸ್​ ನಿಲ್ದಾಣದಲ್ಲಿ ತನ್ನ ಸ್ನೇಹಿತನೊಂದಿಗೆ ಯುವತಿ ಮಾತನಾಡುತ್ತಾ ನಿಂತಿದ್ದಾಗ ಈ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳ ಪೈಕಿ ಇಬ್ಬರು ಯುವಕನನ್ನು ಬಲವಾಗಿ ಹಿಡಿದುಕೊಂಡಿದ್ದು, ಮತ್ತೋರ್ವ ಅತ್ಯಾಚಾರವೆಸಗಿದ್ದ.

ಇದನ್ನೂ ಓದಿ: ಅಣ್ಣಾಮಲೈ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ: ಕೋರ್ಟ್​​ನಲ್ಲಿ ಎದುರಿಸಲು ಸಿದ್ಧ ಎಂದ ತ.ನಾಡು ಬಿಜೆಪಿ ಅಧ್ಯಕ್ಷ

ಇದರ ಬೆನ್ನಲ್ಲೇ ಘಟನೆ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದು, ಅವರ ಬಳಿಯ ಮೊಬೈಲ್ ಫೋನ್​​ ಕಿತ್ತುಕೊಂಡು ಪರಾರಿಯಾಗಿದ್ದರು. ಬಳಿಕ ಯುವತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯಕೀಯ ಚಿಕಿತ್ಸೆಗೊಳಪಡಿಸಲಾಗಿದೆ.

ಆರೋಪಿಗಳಾದ ಕಿಶೋರ್(19), ಸತೀಶ್​(19) ಹಜಾಗೂ ಆರೀಫ್​(18)ನನ್ನು ಬಂಧನ ಮಾಡಲಾಗಿದ್ದು, ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸ್ ಮಹಾನಿರೀಕ್ಷಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕಾಮುಕರ ವಿಚಾರಣೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.