ETV Bharat / bharat

ಯಾವ ವಯಸ್ಸಿನವರು ಎಷ್ಟು ಆಲ್ಕೊಹಾಲ್ ಸೇವಿಸಬಹುದು? ಸಂಶೋಧನಾ ವರದಿ ಇಲ್ಲಿದೆ.. - ಅಲ್ಕೊಹಾಲ್ ಆರೋಗ್ಯ ಲಾಭಗಳು

ಅಲ್ಕೊಹಾಲ್ ಸೇವಿಸದ ವ್ಯಕ್ತಿಯೊಬ್ಬನಿಗೆ ಹೋಲಿಸಿದರೆ ಆರೋಗ್ಯಕ್ಕೆ ಅತಿಯಾದ ಹಾನಿಯಾಗದಂತೆ ವ್ಯಕ್ತಿಯೊಬ್ಬ ಎಷ್ಟು ಪ್ರಮಾಣದ ಆಲ್ಕೊಹಾಲ್ ಸೇವಿಸಬಹುದು ಎಂಬುದನ್ನು ಸಹ ಈ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ. 15 ರಿಂದ 39 ವರ್ಷದೊಳಗಿನವರು ದಿನಕ್ಕೆ 0.136 ಸ್ಟ್ಯಾಂಡರ್ಡ್​ ಡ್ರಿಂಕ್ ಅಂದರೆ ಒಂದು ಸ್ಟ್ಯಾಂಡರ್ಡ್​ ಡ್ರಿಂಕ್​ನ 10ನೇ ಒಂದು ಭಾಗಕ್ಕಿಂತ ಕೊಂಚ ಹೆಚ್ಚಿಗೆ ಆಲ್ಕೊಹಾಲ್ ಸೇವಿಸಬಹುದು.

Young people face higher health risks from alcohol than older adults: Lancet study

author img

By

Published : Jul 15, 2022, 6:40 PM IST

ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನಾ ವರದಿಯೊಂದು ಭೌಗೋಳಿಕ ಪ್ರದೇಶ, ವಯಸ್ಸು, ಲಿಂಗ ಮತ್ತು ವರ್ಷಗಳ ಆಧಾರದ ಮೇಲೆ ಮದ್ಯಪಾನದ ಅಪಾಯವನ್ನು ಅಳತೆ ಮಾಡಿ ತಯಾರಿಸಲಾದ ಪ್ರಥಮ ವರದಿಯಾಗಿದೆ. ಜಾಗತಿಕ ಆಲ್ಕೋಹಾಲ್ ಸೇವನೆಯ ಶಿಫಾರಸುಗಳು ವಯಸ್ಸು ಮತ್ತು ಸ್ಥಳವನ್ನು ಆಧರಿಸಿರಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಜಾಗತಿಕ ಅಲ್ಕೊಹಾಲ್ ಸೇವನೆಯ ಶಿಫಾರಸುಗಳು ವಯಸ್ಸು ಮತ್ತು ಸ್ಥಳಗಳನ್ನು ಆಧರಿಸಿರಬೇಕು ಹಾಗೂ ವಿಶ್ವದಲ್ಲಿ ಅಲ್ಕೊಹಾಲ್ ಸೇವನೆಯ ಅತಿ ಹೆಚ್ಚು ದುಷ್ಪರಿಣಾಮಕ್ಕೆ ಒಳಗಾಗುವ 15 ರಿಂದ 39 ವರ್ಷ ವಯೋಮಾನದ ಪುರುಷರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ವರದಿಯಲ್ಲಿ ತಿಳಿಸಲಾಗಿದೆ.

ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ 40 ವರ್ಷ ಮೇಲ್ಪಟ್ಟವರು ಸಣ್ಣ ಪ್ರಮಾಣದಲ್ಲಿ ಆಲ್ಕೊಹಾಲ್ ಸೇವಿಸಿದರೆ ಅದರಿಂದ ಕೆಲ ಆರೋಗ್ಯಕರ ಲಾಭಗಳಾಗಬಹುದು. ಅಂದರೆ ಅವರು ದಿನಕ್ಕೆ ಒಂದು ಅಥವಾ ಎರಡು ಸ್ಟ್ಯಾಂಡರ್ಡ್​ ಡ್ರಿಂಕ್ಸ್​ ಸೇವಿಸಬಹುದು ಎಂದರ್ಥ. ಹೀಗೆ ಸಣ್ಣ ಪ್ರಮಾಣದಲ್ಲಿ ಆಲ್ಕೊಹಾಲ್ ಸೇವನೆಯಿಂದ ವಯಸ್ಕರಲ್ಲಿ ಹೃದಯರಕ್ತನಾಳದ ಕಾಯಿಲೆ, ಪಾರ್ಶ್ವವಾಯು ಮತ್ತು ಮಧುಮೇಹದ ಸಮಸ್ಯೆಗಳು ಕೆಲ ಮಟ್ಟಿಗೆ ದೂರವಾಗಬಹುದು.

ಅಪಾಯಕಾರಿ ಎನ್ನುವಷ್ಟು ಆಲ್ಕೋಹಾಲ್​ ಕುಡಿದ ಬಿಲಿಯನ್​ ಮಂದಿ: 204 ದೇಶಗಳಲ್ಲಿನ ಅಲ್ಕೊಹಾಲ್ ಸೇವನೆಯ ಪ್ರಮಾಣವನ್ನು ಅಧ್ಯಯನ ಮಾಡಿರುವ ವಿಜ್ಞಾನಿಗಳು, 2020ರಲ್ಲಿ ವಿಶ್ವದ 1.34 ಬಿಲಿಯನ್ ಜನತೆ ಅಪಾಯಕಾರಿ ಪ್ರಮಾಣದಲ್ಲಿ ಅಲ್ಕೊಹಾಲ್ ಸೇವಿಸಿದ್ದಾರೆ ಎಂದು ತಿಳಿಸಿದ್ದಾರೆ. ವಿಶ್ವದ ಯಾವುದೇ ಭಾಗದಲ್ಲಿ ನೋಡಿದರೂ ಅಲ್ಲಿನ 15 ರಿಂದ 39 ವರ್ಷದೊಳಗಿನವರು ಅಸುರಕ್ಷಿತ ಪ್ರಮಾಣದ ಅಲ್ಕೊಹಾಲ್ ಸೇವಿಸಿದ್ದು ಕಂಡು ಬಂದಿದೆ. ಆಲ್ಕೊಹಾಲ್ ಸೇವನೆಯಿಂದ ಈ ವಯೋಮಾನದವರಿಗೆ ಯಾವುದೇ ಆರೋಗ್ಯ ಲಾಭವಾಗುವುದಿಲ್ಲ. ಬದಲಾಗಿ ಹಲವಾರು ಅನಾರೋಗ್ಯಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಆಲ್ಕೊಹಾಲ್ ಸಂಬಂಧಿತ ಸಾವು-ನೋವುಗಳಾದ ವಾಹನ ಅಪಘಾತ, ಆತ್ಮಹತ್ಯೆ, ಕೊಲೆ ಮುಂತಾದ ಅಪರಾಧಗಳು ಈ ವಯೋಮಾನದವರಿಂದಲೇ ಸಂಭವಿಸುತ್ತವೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.

ನಮ್ಮ ಸಂದೇಶ ಸರಳವಾಗಿದೆ: ಯುವಜನತೆ ಕುಡಿಯಬಾರದು. ವಯಸ್ಸಾದವರು ಸಣ್ಣ ಪ್ರಮಾಣದಲ್ಲಿ ಕುಡಿದರೆ ಸ್ವಲ್ಪ ಆರೋಗ್ಯಕ್ಕೆ ಲಾಭವಾಗಬಹುದು ಎನ್ನುತ್ತಾರೆ ಈ ವರದಿ ತಯಾರಿಸಿದ ತಂಡದ ಹಿರಿಯ ಸಂಶೋಧಕಿ ಎಮ್ಮಾನ್ಯುಯೆಲಾ ಗಾಕಿಡೊ. ಇವರು ವಾಷಿಂಗ್ಟನ್​ ಯುನಿವರ್ಸಿಟಿಯ ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್​ ಮೆಟ್ರಿಕ್ಸ್​ ಅಂಡ್ ಎವ್ಯಾಲ್ಯುವೇಶನ್ ನ ಪ್ರಾಧ್ಯಾಪಕಿಯಾಗಿದ್ದಾರೆ.

ಯುವ ವಯಸ್ಕರು ಕುಡಿಯುವುದನ್ನು ಬಿಟ್ಟೇ ಬಿಡುತ್ತಾರೆ ಎಂದು ನಿರೀಕ್ಷಿಸುವುದು ತಪ್ಪಾದೀತು. ಆದರೆ, ಅವರು ಕುಡಿಯುವಾಗ ಕನಿಷ್ಠ ಪಕ್ಷ ತಮ್ಮ ಆರೋಗ್ಯದ ರಕ್ಷಣೆಗೆ ಸೂಕ್ತ ನಿರ್ಧಾರವನ್ನಾದರೂ ಮಾಡಬಹುದು ಎನ್ನುತ್ತಾರೆ ಗಾಕಿಡೊ. ಅಲ್ಕೊಹಾಲ್ ಸೇವನೆಯಿಂದಾಗಬಹುದಾದ 22 ಆರೋಗ್ಯ ಸಂಬಂಧಿ ಪರಿಣಾಮಗಳ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದರು. ಗಾಯ, ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ಮುಂತಾದ ಪರಿಣಾಮಗಳು ಇದರಲ್ಲಿ ಸೇರಿವೆ.

ಆಲ್ಕೊಹಾಲ್ ಸೇವಿಸದ ವ್ಯಕ್ತಿಯೊಬ್ಬನಿಗೆ ಹೋಲಿಸಿದರೆ ಆರೋಗ್ಯಕ್ಕೆ ಅತಿಯಾದ ಹಾನಿಯಾಗದಂತೆ ವ್ಯಕ್ತಿಯೊಬ್ಬ ಎಷ್ಟು ಪ್ರಮಾಣದ ಅಲ್ಕೊಹಾಲ್ ಸೇವಿಸಬಹುದು ಎಂಬುದನ್ನು ಸಹ ಈ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

15 ರಿಂದ 39 ವರ್ಷದೊಳಗಿನವರು ದಿನಕ್ಕೆ 0.136 ಸ್ಟ್ಯಾಂಡರ್ಡ್​ ಡ್ರಿಂಕ್ ಅಂದರೆ ಒಂದು ಸ್ಟ್ಯಾಂಡರ್ಡ್​ ಡ್ರಿಂಕ್​ನ 10ನೇ ಒಂದು ಭಾಗಕ್ಕಿಂತ ಕೊಂಚ ಹೆಚ್ಚಿಗೆ ಆಲ್ಕೊಹಾಲ್ ಸೇವಿಸಬಹುದು. ಮಹಿಳೆಯರಿಗೆ ಈ ಪ್ರಮಾಣ ಒಂಚೂರು ಹೆಚ್ಚಾಗಿದ್ದು, 0.273 ಗೆ ನಿಗದಿಪಡಿಸಲಾಗಿದೆ. ಅಂದರೆ ಒಂದು ಸ್ಟ್ಯಾಂಡರ್ಡ್ ಡ್ರಿಂಕ್​ನ ನಾಲ್ಕನೇ ಒಂದು ಭಾಗದಷ್ಟು.

ಒಂದು ಸ್ಟ್ಯಾಂಡರ್ಡ್​ ಡ್ರಿಂಕ್ ಅಂದರೆ 10 ಗ್ರಾಂ ಶುದ್ಧ ಆಲ್ಕೊಹಾಲ್ ಎಂದು ನಿಗದಿಪಡಿಸಲಾಗಿದೆ. ಇದು 13 ಪರ್ಸೆಂಟ್ ಆಲ್ಕೊಹಾಲ್ ಇರುವ ಒಂದು ಸಣ್ಣ ಗ್ಲಾಸ್​ ರೆಡ್ ವೈನ್​ಗೆ (100 ಎಂಎಲ್) ಸಮ ಅಥವಾ 3.5 ಪರ್ಸೆಂಟ್ ಆಲ್ಕೊಹಾಲ್ ಇರುವ ಒಂದು ಕ್ಯಾನ್ ಅಥವಾ ಬಾಟಲಿ ಬಿಯರ್ (375 ಎಂಎಲ್) ಅಥವಾ 40 ಪರ್ಸೆಂಟ್ ಆಲ್ಕೊಹಾಲ್ ಇರುವ ಒಂದು ಶಾಟ್ ಅಥವಾ 30 ಎಂಎಲ್​ ವಿಸ್ಕಿ ಅಥವಾ ಇನ್ನಾವುದೇ ಸ್ಪಿರಿಟ್​ಗೆ ಸಮನಾಗಿರುತ್ತದೆ.

(ಶಾಸನ ವಿಧಿಸಿದ ಎಚ್ಚರಿಕೆ: ಆಲ್ಕೊಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕರ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.