ETV Bharat / bharat

ಬಾಲಕಿಗೆ ಕಿರುಕುಳ ಆರೋಪ: ಯುವಕನ ಕೈಕಾಲು ಕಟ್ಟಿ ಗುಪ್ತಾಂಗಕ್ಕೆ ಕಾರದ ಪುಡಿ ಹಾಕಿ ಹಿಂಸೆ - ಗುಪ್ತಾಂಗದಲ್ಲಿ ಮೆಣಸಿನಕಾಯಿ ಪುಡಿ

ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನೊಬ್ಬನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಕೈಕಾಲು ಕಟ್ಟಿ ಗುಪ್ತಾಂಗದಲ್ಲಿ ಕಾರದ ಪುಡಿ ಹಾಕಿ ಹಿಂಸೆ ನೀಡಲಾಗಿದೆ.

beaten-put-chili-in-private-part
ಗುಪ್ತಾಂಗಕ್ಕೆ ಕಾರದ ಪುಡಿ ಹಾಕಿ ಹಿಂಸೆ
author img

By

Published : Nov 8, 2022, 9:02 PM IST

ಭಿಲ್ವಾರ್​(ರಾಜಸ್ಥಾನ): ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನನ್ನು ಥಳಿಸಿದ ಜನರು ಕೈಕಾಲು ಕಟ್ಟಿ ಹಾಕಿದ್ದಲ್ಲದೇ, ಗುಪ್ತಾಂಗದಲ್ಲಿ ಮೆಣಸಿನಕಾಯಿ ಪುಡಿಯನ್ನು ಹಾಕಿ ಹಿಂಸಿಸಿದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಬಗ್ಗೆ ಯುವಕನ ತಂದೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಆಗಿದ್ದೇನು?: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಗ್ರಾಮದ 22 ವರ್ಷದ ಯುವಕ ಬಾಲಕಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಎಂಬ ಆಪಾದನೆ ಇತ್ತು. ಇದರಿಂದ ಕೆರಳಿದ ಕೆಲ ಗ್ರಾಮಸ್ಥರು ಯುವಕನನ್ನು ನಿರ್ಜನ ಪ್ರದೇಶದಲ್ಲಿ ಎಳೆದೊಯ್ದು ದೊಣ್ಣೆಗಳಿಂದ ಬಡಿದು, ಬಳಿಕ ವಿವಸ್ತ್ರಗೊಳಿಸಿ ಆತನ ಹಿಂಭಾಗದ ಗುಪ್ತಾಂಗಕ್ಕೆ ಕಾರದ ಪುಡಿ ಹಾಕಲಾಗಿದೆ.

ನೋವಿನಿಂದ ಯುವಕ ಕಿರುಚಾಡಿದರೂ ಬಿಡದ ಜನರು ಆತನ ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ನಿರ್ಜನ ಪ್ರದೇಶದಲ್ಲಿ ದಿನವಿಡೀ ಕೂಡಿ ಹಾಕಿದ್ದಾರೆ. ಇತ್ತ ಯುವಕನ ತಂದೆ ಮಗ ಮನೆಗೆ ವಾಪಸ್​ ಬಾರದೇ ಇದ್ದಾಗ ಹುಡುಕಾಡಿದ್ದಾರೆ. ಬಳಿಕ ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಯುವಕನನ್ನು ರಕ್ಷಿಸಿದ್ದಾರೆ.

ಇನ್ನು ಪುತ್ರನನ್ನು ಗ್ರಾಮಸ್ಥರು ಹಿಂಸಿಸಿದ್ದಾರೆ ಎಂದು ಯುವಕನ ತಂದೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬಾಲಕಿಗೆ ಕಿರುಕುಳ ನೀಡಿದ್ದು ಬಯಲು: ಪೊಲೀಸ್​ ವಿಚಾರಣೆಯ ವೇಳೆ ಯುವಕ ಗ್ರಾಮದ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ್ದು ಗೊತ್ತಾಗಿದೆ. ಈ ಬಗ್ಗೆ 6 ತಿಂಗಳ ಹಿಂದೆಯೇ ದೊಡ್ಡ ಗಲಾಟೆಯೇ ನಡೆದಿತ್ತು. ಆದರೂ ಯುವಕನ ಕೀಟಲೆ ಮುಂದುವರಿದ ಕಾರಣ ಜನರೇ ಆತನಿಗೆ ಕ್ರೂರವಾಗಿ ಶಿಕ್ಷೆ ವಿಧಿಸಿದ್ದಾರೆ. ಎಲ್ಲ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಬೈಕ್ ಡಿಕ್ಕಿ.. ಚಿಕಿತ್ಸೆ ಫಲಕಾರಿಯಾಗದೇ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.