ETV Bharat / bharat

ಭಾರತ್​ ಜೋಡೋ ಯಾತ್ರೆ.. ರಾಹುಲ್​ ಗಾಂಧಿ ಮುಂದೆಯೇ ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ ಯತ್ನ - ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ

ಕೋಟಾದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್​ ಗಾಂಧಿಯನ್ನು ವಿರೋಧಿಸಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Rahul Gandhi Bharat Jodo Yathre
ರಾಹುಲ್​ ಗಾಂಧಿ ಭಾರತ್​ ಜೋಡೋ ಯಾತ್ರೆ
author img

By

Published : Dec 8, 2022, 10:04 AM IST

Updated : Dec 8, 2022, 10:39 AM IST

ಕೋಟಾ(ರಾಜಸ್ಥಾನ): ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಬೆಳಗ್ಗೆ ಭಾರತ್ ಜೋಡೋ ಯಾತ್ರೆ ಹಿನ್ನೆಲೆ ರಾಜೀವ್​ ಗಾಂಧಿ ನಗರದಲ್ಲಿನ ರಾಜೀವ್​ ಗಾಂಧಿ ಪ್ರತಿಮೆಗೆ ಲ್ಯಾಪ್​ಟಾಪ್​ ಸಹಾಯದಿಂದ ಮಾಲಾರ್ಪಣೆ ಮಾಡಲು ಹೋಗುತ್ತಿದ್ದ ವೇಳೆ ವೇದಿಕೆ ಪಕ್ಕದಲ್ಲೇ ಇದ್ದ ಯುವಕನೋರ್ವ ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಈ ವೇಳೆ ಗದ್ದಲ ಉಂಟಾಗಿ ರಾಹುಲ್​ ಗಾಂಧಿ ವೇದಿಕೆಗೆ ಹೋಗುವುದು ಸಾಧ್ಯವಾಗಲಿಲ್ಲ. ರಾಹುಲ್​ ಗಾಂಧಿ ವೇದಿಕೆ ಬಳಿ ಹೋಗುತ್ತಿದ್ದ ವೇಳೆ ಯುವಕ ನಾನು ರಾಹುಲ್​ ಗಾಂಧಿಯನ್ನು ವಿರೋಧಿಸುತ್ತೇನೆ ಎಂದು ಹೇಳಿ ಮುಂದೆ ಬಂದು ಬಟ್ಟೆಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಯುವಕ ಮೂರು ಜೊತೆ ಬಟ್ಟೆ ಧರಿಸಿಕೊಂಡಿದ್ದು, ಪಕ್ಕದಲ್ಲಿವರು ತಕ್ಷಣವೇ ಬೆಂಕಿ ನಂದಿಸಿದ್ದಾರೆ. ಆಂಬ್ಯಲೆನ್ಸ್​ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ಸಿಐಡಿ ಗುಪ್ತಚರ ದಳದವರು ಕೂಡ ಆಸ್ಪತ್ರೆಗೆ ತೆರಳಿದ್ದು, ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ರಾಜಸ್ಥಾನದಲ್ಲಿ ಇಂದು ಐದನೇ ದಿನಕ್ಕೆ ಕಾಲಿಟ್ಟಿರುವ ರಾಹುಲ್​ ಗಾಂಧಿ ಭಾರತ್​ ಜೋಡೋ ಇಂದು ಬೆಳಗ್ಗೆ ಜಾಲಾವರ ರಸ್ತೆಯಲ್ಲಿರುವ ಅನಂತಪುರ ಸ್ವಾಗತ ದ್ವಾರದಿಂದ ಯಾತ್ರೆ ಪ್ರಾರಂಭಿಸಿದೆ. ಕೋಟಾ ನಗರದಿಂದ ಸಾಗಿದ್ದು, ಸಂಜೆ ಯಾತ್ರೆ ಬಳಿಕ ರಾಹುಲ್​ ಗಾಂಧಿ ಸವಾಯಿ ಮಾಧೋಪುರಕ್ಕೆ ತೆರಳಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರಿಗೆ ಫ್ಲೈಯಿಂಗ್ ಕಿಸ್​ ಕೊಟ್ಟ ರಾಹುಲ್​ ಗಾಂಧಿ!

Last Updated : Dec 8, 2022, 10:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.