ETV Bharat / bharat

ಫೈನಾನ್ಸ್​ ಸಾಲ ತೀರಿಸಲು 2,000 ರೂ. ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆ - Young man commits Suicide over debt issues

ಸಾಲ ತೀರಿಸಲು 2 ಸಾವಿರ ರೂಪಾಯಿ ಹಣ ನೀಡದೇ ಇದ್ದದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೆಲಂಗಾಣದ ಮೆಡ್ಚಲ್​ ಜಿಲ್ಲೆಯಲ್ಲಿ ಪ್ರಕರಣ ವರದಿಯಾಗಿದೆ.

Young man Suicide for not getting two thousand to pay off debt
ಯುವಕ ಆತ್ಮಹತ್ಯೆ
author img

By

Published : Oct 24, 2021, 5:28 PM IST

ತೆಲಂಗಾಣ/ ಮೆಡ್ಚಲ್​: ಸಾಲ ತೀರಿಸಲು ಕೇವಲ 2 ಸಾವಿರ ರೂ. ಹಣವನ್ನು ಯಾರೂ ಕೊಡದೇ ಹೋಗಿದ್ದಕ್ಕೆ ಬೇಸರಗೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮೆಡ್ಚಲ್​ ಜಿಲ್ಲೆಯ ಶಮೀರ್​ಪೇಟೆ ಮಂಡಲದ ಪೊನ್ನಾಲದಲ್ಲಿ ನಡೆದಿದೆ.

ಮರ್ಯಾಲ ಆನಂದ್(23)​ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ತರ್ಕಪಲ್ಲಿಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. 3 ತಿಂಗಳ ಹಿಂದೆ ಆನಂದ್ ಸಿದ್ದಿಪೇಟೆ ಜಿಲ್ಲೆಯ​ ಗಜವೇಲ್ ಮಂಡಲದ ಕುಂಚೇರುಕಲಿಯಿಂದ (ಮೈಕ್ರೋ ಫೈನಾನ್ಸ್‌) 10,000 ರೂ. ಸಾಲ ಪಡೆದಿದ್ದರು.

ಅ.22 ರಂದು ಆನಂದ್ ಮನೆಗೆ ಫೈನಾನ್ಸ್​​ನ ಓರ್ವ ಮಹಿಳೆ ಮತ್ತು 5 ಮಂದಿ ಇತರರು ಭೇಟಿ ನೀಡಿ ಸಾಲ ನೀಡುವಂತೆ ಆನಂದ್ ಮೇಲೆ ಒತ್ತಡ ಹೇರಿದ್ದರು. ಕನಿಷ್ಠ 2,000 ರೂ. ಪಾವತಿಸಿದರೆ ಹೊಸ ಡಾಕ್ಯುಮೆಂಟ್ ಮಾಡುವುದಾಗಿ ಒತ್ತಾಯಿಸಿದ್ದರು.

ಈ ವೇಳೆ ಆನಂದ್​ ತನಗೆ ಪರಿಚಯವಿರುವ ಎಲ್ಲರ ಬಳಿ ಹಣ ಕೇಳಿದ್ದಾರೆ. ಆದರೆ ಯಾರೂ ಕೊಟ್ಟಿಲ್ಲ. ಇತ್ತ ಫೈನಾನ್ಸ್​ ಕಂಪನಿಯವರು ಹಣ ನೀಡುವವರೆಗೂ ಹೋಗಲ್ಲ ಎಂದು ಆನಂದ್​ ಮನೆಯಲ್ಲೆ ಕುಳಿತಿದ್ದಾರೆ. ಯಾರೋ ಆನಂದ್​ಗೆ 1000 ರೂ ಹಣ ನೀಡಿದ್ದು, ಆ ಹಣದಲ್ಲಿ ಆನಂದ್​ ಫೈನಾನ್ಸ್​ ಕಂಪನಿಯವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.

ನಂತರ ಅವರು ಹೊಸ ಡಾಕ್ಯುಮೆಂಟ್​ ಬರೆದುಕೊಂಡು ತೆರಳಿದ್ದಾರೆ. ಇತ್ತ ಆನಂದ್​ ತನಗೆ ಯಾರೂ 2000 ರೂಪಾಯಿ ನೀಡಲಿಲ್ಲವಲ್ಲ ಎಂದು ಮನನೊಂದು ತನ್ನ ರೂಮಿಗೆ ಬಂದು ಫ್ಯಾನ್​ಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಆನಂದ್​ ಕುಟುಂಬಸ್ಥರು ಶಮೀರ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.