ETV Bharat / bharat

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 30 ವರ್ಷದ ವ್ಯಕ್ತಿ - ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಮಧ್ಯಪ್ರದೇಶದ ಸತ್ನಾದಲ್ಲಿ 5 ವರ್ಷದ ಬಾಲಕಿಯ ಮೇಲೆ 30 ವರ್ಷದ ದುರುಳನೊಬ್ಬ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತೆಯನ್ನು ರೇವಾ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

rape
ಅತ್ಯಾಚಾರ
author img

By

Published : Aug 18, 2023, 10:51 AM IST

ಸತ್ನಾ( ಮಧ್ಯಪ್ರದೇಶ) : ಸತ್ನಾ ಜಿಲ್ಲೆಯ ಸಿಟಿ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಜಗತ್‌ದೇವ್ ತಲಾಬ್ ಬಳಿ 30 ವರ್ಷದ ವ್ಯಕ್ತಿಯೊಬ್ಬ 5 ವರ್ಷದ ಅಮಾಯಕ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪಿಸಲಾಗಿದೆ. ಅಪ್ರಾಪ್ತೆಯ ಸ್ಥಿತಿ ಗಂಭೀರವಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಜೀವನ್ ಜ್ಯೋತಿ ಕಾಲೋನಿ ನಿವಾಸಿ ರಾಕೇಶ್ ವರ್ಮಾ (30) ಅತ್ಯಾಚಾ ಎಸಗಿದ ಆರೋಪಿ. ಬಾಲಕಿಯನ್ನು ತನ್ನೊಂದಿಗೆ ನಗರದ ಹೊರವಲಯಕ್ಕೆ ಕರೆದೊಯ್ದು ಪ್ರತಿಷ್ಠಿತ ಶಿವ ದೇವಾಲಯದ ಹಿಂದಿನ ದಾರಿ ಬಳಿ ಅತ್ಯಾಚಾರ ಎಸಗಿ ಬಳಿಕ ಮಗುವನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದಾನೆ. ವಿಷಯ ತಿಳಿದ ನಂತರ ಬಾಲಕಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮಗುವಿನ ಸ್ಥಿತಿ ಗಂಭೀರವಾಗಿದ್ದ ಪರಿಣಾಮ ಜಿಲ್ಲಾ ಆಸ್ಪತ್ರೆಯಿಂದ ರೇವಾ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸತ್ನಾ ಎಸ್​ಪಿ ಮಹೇಂದ್ರ ಸಿಂಗ್, "ನಿನ್ನೆ ಸಂಜೆ 5:00 ಗಂಟೆ ಸುಮಾರಿಗೆ ರಾಕೇಶ್ ವರ್ಮಾ ಎಂಬ ವ್ಯಕ್ತಿ 5 ವರ್ಷದ ಅಮಾಯಕ ಬಾಲಕಿಯನ್ನು ತನ್ನ ಕುಟುಂಬ ಸದಸ್ಯರ ಮುಂದೆ ಕರೆದೊಯ್ದಿದ್ದಾನೆ. ನಂತರ ಅತ್ಯಾಚಾರ ಎಸಗಿರುವ ವಿಷಯವನ್ನು ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದು, ಚಿಕಿತ್ಸೆಗಾಗಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದರು. ಕೇಸ್​ಗೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಾಲಕಿಗೆ ಹೆಚ್ಚಿನ ಚಿಕಿತ್ಸೆಗಾಗಿ ರೇವಾ ಮೆಡಿಕಲ್ ಕಾಲೇಜಿಗೆ ರೆಫರ್ ಮಾಡಲಾಗಿದೆ, ಪ್ರಕರಣದ ತನಿಖೆ ಮುಂದುವರೆದಿದೆ ಎಂದರು.

ಇದನ್ನೂ ಓದಿ : ಮಹಿಳೆ ಮೇಲೆ ಅತ್ಯಾಚಾರ, ಹಣ ವಸೂಲಿ ಆರೋಪ: ಸ್ಯಾಂಡಲ್​ವುಡ್​ ನಿರ್ಮಾಪಕನ ಬಂಧನ

ಅತ್ಯಾಚಾರವೆಸಗಿದ ಆರೋಪಿ ಕಾಲಿಗೆ ಗುಂಡೇಟು : ಇನ್ನು ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ಇಂದು ಬೆಳಗ್ಗೆ ಬೆಂಗಳೂರಿನ‌ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ಪೊಲೀಸರ ಮೇಲೆರಗಿ ಪರಾರಿಯಾಗಲು ಯತ್ನಿಸಿದ ಬ್ಯಾಟರಾಯನದೊಡ್ಡಿಯ ಆರೋಪಿ ಸೋಮಶೇಖರ್ ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ. ಸ್ಥಳ ಮಹಜರಿಗೆ ಕರೆದೊಯ್ದಾಗ ಘಟನೆ ಜರುಗಿದೆ.

ಇದನ್ನೂ ಓದಿ : ಬೆಂಗಳೂರು : ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿ ಕಾಲಿಗೆ ಗುಂಡೇಟು

ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ತಂದೆ ಮತ್ತು ಮಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿತ್ತು. ಪೇಟಬಶಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕೊಡಿಸುವುದಾಗಿ ಆಸೆ ತೋರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಶಿವಕುಮಾರ್ (45) ಮತ್ತು ಅವರ ಮಗ ಶ್ಯಾಮೇಲ್ (19) ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಗಮನಿಸಿ ಅತ್ಯಾಚಾರ ಮಾಡಿದ ಆರೋಪಿಗಳು.

ಇದನ್ನೂ ಓದಿ : ಏಳು ವರ್ಷದ ಬಾಲಕಿ ಮೇಲೆ ತಂದೆ ಮಗನಿಂದ ಅತ್ಯಾಚಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.