ಚಂಡೀಗಢ: ಯುವಕನೊಬ್ಬ ತನ್ನ ಸ್ನೇಹಿತನನ್ನು (Young Man Murdered His Friend) ಕೇವಲ ಎರಡೂವರೆ ಸಾವಿರಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಂಡೀಗಢದ ಸೆಕ್ಟರ್-32ನಲ್ಲಿ (Young Man death in Chandigarh) ನಡೆದಿದೆ.
ಆರೋಪಿಯನ್ನು 20 ವರ್ಷದ ಅಭಿ ಎಂದು ಗುರುತಿಸಲಾಗಿದೆ. ಇಬ್ಬರೂ ಚಂಡೀಗಢ ಸೆಕ್ಟರ್-32ರ ಕಾಲೋನಿ ನಿವಾಸಿಗಳಾಗಿದ್ದರು. ಸಿಕ್ಕಿರುವ ಮಾಹಿತಿ ಪ್ರಕಾರ, 18 ವರ್ಷದ ನಿಖಿಲ್ ತನ್ನ ಬೈಕ್ ಅನ್ನು ಅಭಿಗೆ ಕೆಲ ದಿನಗಳ ಹಿಂದೆ ಮಾರಾಟ ಮಾಡಿದ್ದ. ಆ ಸಮಯದಲ್ಲಿ ನಿಖಿಲ್ಗೆ ಅಭಿ 2500 ರೂಪಾಯಿ ಕಡಿಮೆ ಕೊಟ್ಟಿದ್ದ. ನಿಖಿಲ್ ತನ್ನ ಉಳಿದ ಹಣವನ್ನು ಅಭಿ ಬಳಿ ಕೇಳುತ್ತಿದ್ದ. ಆದರೆ, ಈ ಹಣಕ್ಕೆ ಬದಲಾಗಿ ನಿಖಿಲ್ ಮೋಟಾರ್ ಸೈಕಲ್ನ ಕೆಲವು ದಾಖಲೆಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಅಭಿ ನಿಖಿಲ್ ಬಳಿ ದಾಖಲೆಗಳನ್ನು ಕೇಳುತ್ತಿದ್ದ.
ನಿಖಿಲ್ ತನ್ನ ಸ್ನೇಹಿತ ಅಭಿಗೆ 2500 ರೂಪಾಯಿ ಬಾಕಿ ನೀಡಿದಾಗ ಉಳಿದ ಮೋಟಾರ್‌ಸೈಕಲ್ ಪೇಪರ್‌ಗಳನ್ನು ಸಹ ನೀಡುವುದಾಗಿ ಹೇಳಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಜಗಳದಲ್ಲಿ ನಿಖಿಲ್ಗೆ ಆರೋಪಿ ಅಭಿ ಚಾಕುವಿನಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದಾನೆ.
ರಕ್ತಸ್ರಾವದ ಸ್ಥಿತಿಯಲ್ಲಿದ್ದ ನಿಖಿಲ್ನ್ನು ಜಿಎಂಸಿಎಚ್ 32 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ನಿಖಿಲ್ ಮೃತಪಟ್ಟಿರುವುದಾಗಿ ಘೋಷಿಸಿದರು. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶೋಧ ಆರಂಭಿಸಿದ್ದಾರೆ.