ETV Bharat / bharat

ಮಗಳಿಗೆ ಕಿರುಕುಳ: ಬೈಕ್​ನಲ್ಲಿ ತೆರಳುತ್ತಿದ್ದಾಗಲೇ ಯುವಕನ ಕತ್ತಿಗೆ ಹಿಂಬದಿಯಿಂದ ಇರಿದ ತಂದೆ! ವಿಡಿಯೋ.. - ಹೈದರಾಬಾದ್​ ಅಪರಾಧ ಸುದ್ದಿ

ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬೈಕ್​ನಲ್ಲಿ ತೆರಳುತ್ತಿದ್ದಾಗ ಆತನ ಕತ್ತಿಗೆ ತಂದೆಯೊಬ್ಬ ಚೂರಿ ಹಾಕಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

Young man Murdered, Young man Murdered by A daughter father, Young man Murdered by A daughter father in Hyderabad, Hyderabad crime news,  ಮಗಳಿಗೆ ಕಿರುಕುಳ ನೀಡುತ್ತಿದ್ದವನ ಬೆನ್ನಿಗೆ ಚೂರಿ ಹಾಕಿ ಕೊಲೆಗೈದ ತಂದೆ, ಹೈದರಾಬಾದ್​ನಲ್ಲಿ ಮಗಳಿಗೆ ಕಿರುಕುಳ ನೀಡುತ್ತಿದ್ದವನ ಬೆನ್ನಿಗೆ ಚೂರಿ ಹಾಕಿ ಕೊಲೆಗೈದ ತಂದೆ, ಹೈದರಾಬಾದ್​ ಸುದ್ದಿ, ಹೈದರಾಬಾದ್​ ಅಪರಾಧ ಸುದ್ದಿ,
ಮಗಳಿಗೆ ಕಿರುಕುಳ ನೀಡುತ್ತಿದ್ದವನ ಬೆನ್ನಿಗೆ ಚೂರಿ ಹಾಕಿ ಕೊಲೆಗೈದ ತಂದೆ
author img

By

Published : Jun 7, 2021, 11:34 AM IST

Updated : Jun 7, 2021, 11:56 AM IST

ಹೈದರಾಬಾದ್​: ಬೈಕ್​ ಓಡಿಸುತ್ತಿದ್ದ ಸವಾರನ ಮೇಲೆ ಹಿಂಬದಿ ಕುಳಿತ್ತಿದ್ದ ವ್ಯಕ್ತಿಯೊಬ್ಬ ಕತ್ತಿಗೆ ಚೂರಿ ಹಾಕಿ ಕೊಲೆ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಏನಿದು ಘಟನೆ?

ಮಗಳಿಗೆ ಕಿರುಕುಳ ನೀಡುತ್ತಿದ್ದವನ ಬೆನ್ನಿಗೆ ಚೂರಿ ಹಾಕಿ ಕೊಲೆಗೈದ ತಂದೆ

ಶಾರೂಖ್​ ಎಂಬ ಯುವಕ ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ತಂದೆ ಅನ್ವರ್​ ಫಲಕ್​ನುಮಾ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಶಾರೂಖ್​ ವಿರುದ್ಧ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೂ ಶಾರೂಖ್​ ಬದಲಾಗಲಿಲ್ಲ. ಅನ್ವರ್​ ಮಗಳಿಗೆ ಶಾರೂಖ್​ ಮತ್ತೆ ಕಿರುಕುಳ ನೀಡಲು ಪ್ರಾರಂಭಿಸಿದ.

ನಿನ್ನ ಮಗಳನ್ನು ನಾನು ಮದುವೆ ಮಾಡಿಕೊಳ್ಳುತ್ತೇನೆ. ಸಂಸಾರ ಮಾಡಲು ನನ್ನ ಜೊತೆ ಕಳುಹಿಸಿಕೊಡು ಎಂದು ಅನ್ವರ್​ಗೆ ಶಾರೂಖ್​ ಕಾಟ ನೀಡುತ್ತಿದ್ದನಂತೆ. ಇದರಿಂದ ಅನ್ವರ್​ ಮತ್ತು ಆತನ ಮಗಳು ಬೇಸತ್ತು ಹೋಗಿದ್ದರು. ಹೀಗೆ ಬೇಸತ್ತ ಅನ್ವರ್​ ಶಾರೂಖ್​ನನ್ನು ಮುಗಿಸಲು ತಂತ್ರ ರೂಪಿಸಿದ್ದಾನೆ.

ಹೌದು, ಯೋಜನೆ ಪ್ರಕಾರವೇ ನಿನ್ನ ಜೊತೆ ಮಾತನಾಡುವುದಿದೆ ಮನೆ ಹತ್ತಿರ ಬಾ ಎಂದು ಶಾರೂಖ್​ನನ್ನು ಅನ್ವರ್​ ಕರೆಯಿಸಿಕೊಂಡಿದ್ದಾನೆ. ಶಾರೂಖ್​ ಸಹ ಅನ್ವರ್​ ಇದ್ದ ಸ್ಥಳಕ್ಕೆ ಬಂದಿದ್ದಾನೆ. ಬಳಿಕ ಇಬ್ಬರು ಬೈಕ್​ ಮೇಲೆ ತೆರಳಿದರು. ಬೈಕ್​ ಮೇಲೆ ತೆರಳುತ್ತಿದ್ದಾಗ ಸಮಯ ನೋಡಿ ಅನ್ವರ್​ ತಾನೂ ತಂದಿದ್ದ ಚಾಕುವಿನಿಂದ ಶಾರೂಖ್​ ಕತ್ತಿಗೆ ಚುಚ್ಚಿದ್ದಾನೆ. ತೀವ್ರ ಗಾಯಗೊಂಡಿದ್ದ ಶಾರೂಖ್​ ಫಲಕ್​ನುಮಾ ಬಸ್​ ಡಿಪೋ ಬಳಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ.

ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಪ್ರಕರಣದ ತನಿಖೆ ಮುಂದುವರೆದಿದೆ.

Last Updated : Jun 7, 2021, 11:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.