ವಿಶಾಖಪಟ್ಟಣ(ಆಂಧ್ರಪ್ರದೇಶ): ಜಲಪಾತದಲ್ಲಿ ಸಾಹಸ ಪ್ರದರ್ಶಿಸುತ್ತಾ ಫೋಟೋಗೆ ಪೋಸ್ ಕೊಡಲು ಹೋಗಿ ಯುವಕನೊಬ್ಬ ಕೊಚ್ಚಿ ಹೋಗಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಆಂಧ್ರಪ್ರದೇಶದ ವಿಶಾಖಪಟ್ಟಣದ ಕೊಯ್ಯೂರು ವಲಯದ ವಲಸಪೇಟ ಬಳಿಯ ಜಲಪಾತವನ್ನು ನೋಡಲು ಯುವಕರ ಗುಂಪೊಂದು ತೆರಳಿತ್ತು. ಈ ವೇಳೆ ಯುವಕನೊಬ್ಬ ಜಲಪಾತದಲ್ಲಿ ಸಾಹಸ ಪ್ರದರ್ಶಿಸುತ್ತಾ ಫೋಟೋಗೆ ಪೋಸ್ ಕೊಡಲು ಹೋಗಿ ಕಾಲು ಜಾರಿ ಜಲಪಾತಕ್ಕೆ ಜಾರಿ ಬಿದ್ದಿದ್ದಾನೆ.
ನೀರಿನ ಹರಿವಿನ ವೇಗಕ್ಕೆ ಆತ ಕೊಚ್ಚಿಹೋಗಿದ್ದಾನೆ. ಯುವಕ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯವನ್ನು ಅಲ್ಲಿದ್ದ ಯುವಕನ ಸ್ನೇಹಿತರು ಸೆರೆ ಹಿಡಿದಿದ್ದಾರೆ. ನಾಪತ್ತೆಯಾದ ಯುವಕನನ್ನು ಕಾತ್ರಲೊಡ್ಡಿಯ ಸದ್ದಾ ರಮಣ ಬಾಬು ಎಂದು ಗುರುತಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನಿಗಾಗಿ ಶೋಧ ನಡೆಸಿದ್ದಾರೆ.
ಇದನ್ನೂ ಓದಿ: VIDEO: ಡ್ಯಾನ್ಸ್ ಬಾರ್ ರಹಸ್ಯ ನೆಲಮಾಳಿಗೆಯಲ್ಲಿ ಅಡಗಿ ಕುಳಿತಿದ್ದ 17 ಬಾರ್ ಗರ್ಲ್ಸ್ ಪತ್ತೆ ಹಚ್ಚಿದ್ದೇ ರೋಚಕ