ಗೋಪಾಲ್ಗಂಜ್(ಬಿಹಾರ): ಗೋಪಾಲ್ಗಂಜ್ನಲ್ಲಿ ಯುವಕನೋರ್ವ ತಮಾಷೆಗೆ ಬಾಯಿಯೊಳಗೆ ಕೃಷಿ ಉಪಕರಣ ಖುರ್ಪಿ ಹಾಕಿಕೊಂಡು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಖುರ್ಪಿ ಯುವಕನ ಬಾಯಿಯೊಳಗೆ ಸಿಲುಕಿಕೊಂಡು, ಸಾವಿನ ದವಡೆಗೆ ತಲುಪಿ, ಬಚಾವಾಗಿದ್ದಾನೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಾಧು ಚೌಕ್ ಪ್ರದೇಶದಲ್ಲಿ ಘಟನೆ ನಡೆದಿದೆ.
ಖುರ್ಪಿ ಬಾಯಿಯೊಳಗೆ ಹಾಕಿಕೊಂಡ ಯುವಕನ ಹೆಸರು ಮಿಥಿಲೇಶ್ ಕುಮಾರ್. ಈ ಯುವಕ ಬಾಯಿಯಲ್ಲೇ ಸಿಲುಕಿಕೊಂಡಿದ್ದ ಖುರ್ಪಿಯನ್ನು ಮೊದಲಿಗೆ ತಾನೇ ತೆಗೆಯಲು ಪ್ರಯತ್ನಿಸಿದ್ದಾನೆ. ಬಾರದೇ ಇದ್ದಾಗ ನೋವಿನಲ್ಲಿ ಕಿರುಚಿದ್ದಾನೆ. ಕೂಗು ಕೇಳಿ ಬಂದ ಸುತ್ತಮುತ್ತಲಿನವರು ಯುವಕನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಕುಟುಂಬಸ್ಥರು ಕೂಡ ಖುರ್ಪಿ ಹೊರೆತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯತ್ನಿಸಿದಷ್ಟೂ ಖುರ್ಪಿ ಹೊರ ಬರುವ ಬದಲು ಯುವಕನ ಪರಿಸ್ಥಿತಿ ಬಿಗಡಾಯಿಸಿತ್ತು.
ನಂತರ ಮನೆಯವರು ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಯುವಕನ ಪರಿಸ್ಥಿತಿ ಕಂಡ ವೈದ್ಯರೂ ಕೂಡ ಆಶ್ಚರ್ಯಗೊಂಡಿದ್ದರು. ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಕಷ್ಟಪಟ್ಟು ಖುರ್ಪಿಯನ್ನು ಹೊರತೆಗೆದಿದ್ದಾರೆ. ಸುಮಾರು ಹೊತ್ತು ಖುರ್ಪಿ ಬಾಯಿಯೊಳಗೆ ಸಿಲುಕಿಕೊಂಡಿದ್ದ ಕಾರಣ ಯುವಕನ ಬಾಯಿಯೊಳಗೆ ಗಾಯಗಳಾಗಿವೆ. ಯುವಕ ಮಾನಸಿಕವಾಗಿ ಕುಗ್ಗಿದ್ದು, ಈ ರೀತಿ ಮಾಡಿಕೊಂಡಿದ್ದಾನೆ ಎಂದು ಸಂಬಂಧಿಕರು ಹೇಳುತ್ತಾರೆ.
ಇದನ್ನೂ ಓದಿ: ಜೀವಂತ ಹಲ್ಲಿಯನ್ನು ಸಲೀಸಾಗಿ ತಿಂದ ಭೂಪ - ವಿಡಿಯೋ ವೈರಲ್