ETV Bharat / bharat

ಕೋವಿಡ್​​​ ವ್ಯಾಕ್ಸಿನ್​ ಹಾಕಿಸ್ಕೋ ಅಂದಿದ್ದಕ್ಕೆ ವಿಷ ಕುಡಿದು ಪ್ರಾಣ ಬಿಟ್ಟ ಯುವಕ! - Hyderabad news

ಕೊರೊನಾ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದ ಯುವಕನೋರ್ವ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಭಯಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.

A YOUNG MAN COMMITTED SUICIDE AS HIS FAMILY ASKED HIM TO GET VACCINATED
ವ್ಯಾಕ್ಸಿನ್​ ಹಾಕಿಸ್ಕೋ ಅಂದಿದ್ದಕ್ಕೆ ವಿಷ ಕುಡಿದು ಪ್ರಾಣಬಿಟ್ಟ ಯುವಕ
author img

By

Published : Jun 15, 2021, 12:43 PM IST

ಹೈದರಾಬಾದ್​ (ತೆಲಂಗಾಣ): ನೂರು ವರ್ಷ ದಾಟಿದ ವೃದ್ಧರೇ ಧೈರ್ಯದಿಂದ ಕೋವಿಡ್​ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಓದು-ಬರಹ ಗೊತ್ತಿಲ್ಲದ ರಿಮೋಟ್​ ಪ್ರದೇಶದ ಜನರೂ ವ್ಯಾಕ್ಸಿನೇಷನ್​ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇಲ್ಲೊಬ್ಬ 22 ವರ್ಷದ ಯುವಕ ಲಸಿಕೆಗೆ ಹೆದರಿ ಜೀವ ಬಿಟ್ಟಿದ್ದಾನೆ.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಮೂಲದ ಶವಿ ಪ್ರಕಾಶ್​ ಎಂಬ ಯುವಕ ಪೋಷಕರೊಂದಿಗೆ ತೆಲಂಗಾಣದ ಹೈದರಾಬಾದ್​​ಗೆ ಬಂದು ವಾಸವಿದ್ದು, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕೊರೊನಾ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದ ಆತ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಭಯಪಡುತ್ತಿದ್ದ. ಪೋಷಕರು ಲಸಿಕೆ ಪಡೆಯುವಂತೆ ಬಲವಂತ ಮಾಡಿದ್ದು, ಮನೆಯಿಂದ ಹೊರ ಹೋದ ಪ್ರಕಾಶ್​ ಕೀಟಿನಾಶಕ ಸೇವಿಸಿದ್ದಾನೆ.

ಇದನ್ನೂ ಓದಿ: 124 ವರ್ಷದ ಅಜ್ಜಿಗೆ ಕೊರೊನಾ ಲಸಿಕೆ... ಈ ಅಜ್ಜಿಎಲ್ಲಿಯವರು ಅಂತೀರಾ?

ಮೊನ್ನೆ ಶನಿವಾರ ರಾತ್ರಿಯಿಡೀ ಪೋಷಕರು ಮಗನನ್ನು ಹುಡುಕಿದ್ದು, ಭಾನುವಾರ ಬೆಳಗ್ಗೆ ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ತೋಟದ ಮನೆಯಲ್ಲೇ ಲಸಿಕೆ ಕೇಂದ್ರ ಸ್ಥಾಪಿಸಿ 50 ಮಂದಿಗೆ ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿ

ಕೋವಿಡ್​ ವ್ಯಾಕ್ಸಿನೇಷನ್ ಬಗ್ಗೆ ತೆಲಂಗಾಣ ಸರ್ಕಾರ ಮತ್ತು ಅಧಿಕಾರಿಗಳು ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಅನೇಕರು ಹೀಗೆ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.