ಹೈದರಾಬಾದ್(ತೆಲಂಗಾಣ): ಅಪ್ರಾಪ್ತೆಯ ಜೊತೆ ಸ್ನೇಹದ ಹೆಸರಿನಲ್ಲಿ ಒಬ್ಬ, ಪ್ರೀತಿಯ ಹೆಸರಿನಲ್ಲಿ ಇನ್ನೊಬ್ಬ ದೈಹಿಕ ಸಂಪರ್ಕ ಬೆಳೆಸಿದ್ದು, ಇದೀಗ ಬಾಲಕಿ ಗರ್ಭಿಣಿಯಾದ್ದಾಳೆ. ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಘಟನೆ ಏನು?: ತೆಲಂಗಾಣದ ಮೇಡ್ಚಾಲ್ ಜಿಲ್ಲೆಯ ಚೇವೆಲ್ಲಾ ಎಂಬಲ್ಲಿ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತನ್ನ ಮೇಲೆ ಪ್ರಿಯಕರ ಮತ್ತು ಸ್ನೇಹಿತ ಅತ್ಯಾಚಾರವೆಸಗಿದ್ದಾರೆ ಎಂದು ಗರ್ಭಿಣಿಯಾದ ಬಾಲಕಿ ದೂರು ನೀಡಿದ್ದಾಳೆ.
ಬಾಲಕಿಗೆ ಇಬ್ಬರೂ ಅತ್ಯಾಪ್ತರಾಗಿದ್ದರು. ಒಬ್ಬ ತನ್ನನ್ನು ಪ್ರೀತಿಸುವುದಾಗಿ ಅವಳೊಂದಿಗೆ ಅನ್ಯೋನ್ಯವಾಗಿದ್ದ. ಮತ್ತೊಬ್ಬ ಸ್ನೇಹದ ನೆರಳಿನಲ್ಲಿ ಆಕೆಯೊಂದಿಗೆ ಆಪ್ತತೆ ಬೆಳೆಸಿಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು.
ಈ ವೇಳೆ ಆಕೆಯ ಪೋಷಕರು ಅವಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆಯ ಸಂದರ್ಭದಲ್ಲಿ ವೈದ್ಯರು ಬಾಲಕಿ ಗರ್ಭಿಣಿ ಎಂದು ತಿಳಿಸಿದ್ದಾರೆ. ಬಾಲಕಿಯನ್ನು ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ.
ಬಾಲಕಿಯನ್ನು ಪುಸಲಾಯಿಸಿ ಗರ್ಭಿಣಿಯನ್ನಾಗಿ ಮಾಡಿದ ಇಬ್ಬರ ಮೇಲೆ ಪೋಷಕರು ದೂರು ನೀಡಿದ್ದಾರೆ. ಪೊಲೀಸರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಕ್ಕರೆನಾಡಿನಲ್ಲಿ ಮತ್ತೆ ಹರಿದ ನೆತ್ತರು.. ಮನೆಗೆ ಹೊರಟಿದ್ದ ಯುವಕನ ತಡೆದು ಬರ್ಬರ ಕೊಲೆ