ತೆಲಂಗಾಣ: ಯುವಕನೊಬ್ಬ ತನ್ನ ಮುದ್ದಿನ ನಾಯಿಮರಿಯೊಂದಿಗೆ ಸೈಕಲ್ ಮೂಲಕ ಹೈದರಾಬಾದಿನಿಂದ ಚೀನಾ ಗಡಿ ಪ್ರಯಾಣ ಆರಂಭಿಸಿದ್ದಾನೆ.
ವಾರಂಗಲ್ ನಗರದ ಕರಿಮಾಬಾದಿನ ಯುವ ಸೈಕ್ಲಿಸ್ಟ್ ರಂಜಿತ್ ದಗಾರ ಎಂಬುವವರು ಪ್ರವಾಸ ಕೈಗೊಂಡಿದ್ದು, ಈತ ಎಂ.ಫಾರ್ಮಸಿ ವ್ಯಾಸಂಗ ಮಾಡಿದ್ದಾರೆ. ಕಳೆದ ವರ್ಷ ಕೊರೊನಾದಿಂದ ರಂಜಿತ್ ಅವರ ತಂದೆ ನಿಧನರಾಗಿದ್ದು, ಇದೆಲ್ಲದರಿಂದ ಬೇಸತ್ತ ಯುವಕ, ತಮ್ಮ ಆರೋಗ್ಯವನ್ನು ಇನ್ನಷ್ಟು ಸುಧಾರಿಸಲು ಮತ್ತು ಸೈಕ್ಲಿಂಗ್ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಈ ಹಿಂದೆ ರಂಜಿತ್, 60 ದಿನಗಳಲ್ಲಿ ಲಡಾಖ್‌ಗೆ ಸೈಕ್ಲಿಂಗ್ ಪ್ರವಾಸ ಹೋಗುವ ಸಲುವಾಗಿ ತಮ್ಮ ಕೆಲಸವನ್ನು ತ್ಯಜಿಸಿದ್ದಾರೆ.ಇವರು 2020ರಲ್ಲಿ ಕನ್ಯಾಕುಮಾರಿ ಪ್ರವಾಸ ಕೂಡ ಮಾಡಿದ್ದಾರೆ. ಇದೀಗ ಚೀನಾ ಪ್ರವಾಸ ಕೈಗೊಂಡಿದ್ದು, ಪ್ರವಾಸದ ಜೊತೆಗೆ ಸೈಕ್ಲಿಂಗ್ ಪ್ರಾಮುಖ್ಯತೆ ಮತ್ತು ಅನುಕೂಲಗಳ ಬಗ್ಗೆಯೂ ಜನರಿಗೆ ಮಾಹಿತಿ ನೀಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ಧರಿಸುವ ಬಗ್ಗೆ ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ನಕಾರ..ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗ