ಜಮ್ಶೆಡ್‌ಪುರ( ಜಾರ್ಖಂಡ್): ಪ್ರೇಮಿಗಳ ದಿನಕ್ಕೆ ಕೆಲ ದಿನ ಬಾಕಿ ಇರುವಾಗ ಯುವ ಜೋಡಿವೊಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದೆ. ಜಾರ್ಖಂಡ್ನ ಜಮ್ಶೆಡ್‌ಪುರದ ಕೊಲಜೋರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮರದ ಕೊಂಬೆಗೆ ಮೃತದೇಹ ನೇತಾಡುತ್ತಿರುವುದನ್ನ ನೋಡಿರುವ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವಗಳನ್ನ ವಶಕ್ಕೆ ಪಡೆದುಕೊಂಡು, ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಜಮ್ಶೆಡ್‌ಪುರದ ಎಸ್ಎಸ್ಪಿ ಡಾ. ಎಂ ತಮಿಳ್ ವನನ್, 20-22 ವರ್ಷದ ಹುಡುಗ ಮತ್ತು ಹುಡುಗಿಯ ಮೃತದೇಹ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಗ್ರಾಮಸ್ಥರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರೂ ಎಂಬ ಮಾಹಿತಿ ತಿಳಿದು ಬಂದಿದೆ. ಇವರ ಪ್ರೀತಿಗೆ ಎರಡು ಕುಟುಂಬಗಳಿಂದ ವಿರೋಧ ವ್ಯಕ್ತವಾಗಿದ್ದು, ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಸೊಸೈಟ್ ನೋಟ್ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಹಿಂದೂ ಮಹಿಳೆಯರ ಹೀಯಾಳಿಸಿ, ಹಿಜಾಬ್ ಬೆಂಬಲಿಸಿ ಮಧ್ಯಪ್ರದೇಶದಲ್ಲಿ ಪೋಸ್ಟರ್ ಅಂಟಿಸಿದ ದುಷ್ಕರ್ಮಿಗಳು
ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಈಗಾಗಲೇ ಎಲ್ಲ ದೃಷ್ಟಿಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.