ETV Bharat / bharat

ದೀಪದ ಮಸಿಯಲ್ಲೂ ಅರಳಿತು ಅದ್ಭುತ ಕಲಾಕೃತಿ..ಮರಗಳ ಮೇಲೂ ಯುವ ಕಲಾವಿದನ ಕೈಚಳಕ - ಮಯೂರ್ಭಂಜ್ ಜಿಲ್ಲೆ

ಚಿತ್ರಕಲೆಯನ್ನೇ ಜೀವನವನ್ನಾಗಿಸಿರುವ ಸಮರೇಂದ್ರ ಬೆಹೆರಾ ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ. ಅಲ್ಲದೆ ಅವರು ಕಲೆಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

young-artist-of-odisha-has-created-portraits-of-several-prominent-figures-in-different-type-of-art
ದೀಪದ ಮಸಿಯಲ್ಲೂ ಅರಳಿತು ಅದ್ಭುತ ಕಲಾಕೃತಿ
author img

By

Published : Jul 9, 2021, 6:04 AM IST

ಭುವನೇಶ್ವರ್​ (ಒಡಿಶಾ): ಕಲೆ ಅನ್ನೋದು ಯಾರೊಬ್ಬರ ಸ್ವತ್ತಲ್ಲ. ಶ್ರದ್ಧೆಯಿಂದ ಕೆಲಸ ಮಾಡಿದರೆ ಕಲಾ ಸರಸ್ವತಿಯನ್ನು ಒಲಿಸಿಕೊಳ್ಳಬಹುದು ಅಂತ ಈ ಕಲಾವಿದ ನಿರೂಪಿಸಿದ್ದಾನೆ. ಕೈಯಲ್ಲಿ ಕುಂಚ ಹಿಡಿದು ಕುಳಿತರೆ ಮಹಾನ್​ ವ್ಯಕ್ತಿಗಳ ಚಿತ್ರ ಮೂಡಿಬರುತ್ತದೆ. ಕಾಗದದ ಮೇಲಷ್ಟೇ ಅಲ್ಲ, ಮರಗಳು, ಪೆನ್ನಿನ ಮೇಲೂ ಪ್ರಖ್ಯಾತ ವ್ಯಕ್ತಿಗಳ ಚಿತ್ರ ಮೂಡಿಸಿದ್ದಾರೆ. ಒಡಿಶಾದ ಈ ಯುವ ಕಲಾವಿದ ಸಾಹಿತ್ಯ ಲೋಕದ ದಿಗ್ಗಜ ಮನೋಜ್ ದಾಸ್, ಶಿಲ್ಪಿ ಮೊಹಾಪಾತ್ರ ಅನೇಕ ಸಾಧಕರ ಚಿತ್ರವನ್ನು ಚಿತ್ರಿಸಿ ಸೈ ಎನಿಸಿಕೊಂಡಿದ್ದಾರೆ.

ಮಯೂರ್ಭಂಜ್ ಜಿಲ್ಲೆಯ ಅಗಡಾ ಗ್ರಾಮದ ನಿವಾಸಿ ಸಮರೇಂದ್ರ ಬೆಹೆರಾ, ಇದೀಗ ಒಡಿಶಾದಲ್ಲಿ ಮನೆಮಾತಾಗಿದ್ದಾರೆ. ಪ್ರಸಿದ್ಧ ವ್ಯಕ್ತಿಗಳ ಕುರಿತು ಜನರಿಗೆ ತಿಳಿಸುವ ಉದ್ದೇಶದಿಂದ ಮರಗಳ ಮೇಲೆ ಮಹಾನ್​ ವ್ಯಕ್ತಿಗಳ ಚಿತ್ರಗಳ ಕೆತ್ತಲು ಆರಂಭಿಸಿದ್ದರಂತೆ. ವಿಶೇಷವಾಗಿ ದೀಪದ ಕರಿಯ ಮೂಲಕವೂ ಚಿತ್ರ ಬಿಡಿಸುವ ಕಲೆ ಇವರಲ್ಲಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮರಗಳ ಮೇಲೂ ಯುವ ಕಲಾವಿದನ ಕೈಚಳಕ

ಚಿತ್ರಕಲೆಯನ್ನೇ ಜೀವನವನ್ನಾಗಿಸಿರುವ ಸಮರೇಂದ್ರ ಬೆಹೆರಾ ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ. ಅಲ್ಲದೆ ಅವರ ಕಲೆಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕೆಲ ಕ್ಲಿಷ್ಟಕರ ಚಿತ್ರಗಳು ಈ ಕಲೆಯಲ್ಲಿ ಅವರಿಗಿರುವ ಹಿಡಿತದ ಬಗ್ಗೆ ಹೇಳುತ್ತವೆ.

ಲಾಕ್​​ಡೌನ್​ನಲ್ಲಿ ಈ ಕಲಾವಿದ ಸಮಯ ವ್ಯರ್ಥ ಮಾಡದೆ ವಿವಿಧ ಮಹನಿಯರ ಚಿತ್ರ ಬಿಡಿಸಿದ್ದಾರೆ. ಚಿತ್ರ ಬಿಡಿಸುವ ಜೊತೆಗೆ ಸಮಾಜಕ್ಕೆ ಸಾಧಕರ ಸಂದೇಶವೇನು ಎಂಬುದನ್ನು ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಗುರಿ ಜೊತೆಗೆ ಬಲವಾದ ಇಚ್ಛಾಶಕ್ತಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಯುವ ಕಲಾವಿದ ಸಾಕ್ಷಿಯಾಗಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.