ನವದೆಹಲಿ: ಅಮೆರಿಕಾ ಮೂಲದ ಜೋನಾಥನ್ ಮಾ ಪ್ರಸಿದ್ಧ ಯೂಟ್ಯೂಬರ್ ಆಗಿದ್ದು, ಕೇವಲ 42 ಸೆಕೆಂಡುಗಳಲ್ಲಿ ಬರೋಬ್ಬರಿ ಕೋಟಿ ಹಣ ಗಳಿಸಿಕೊಂಡಿದ್ದಾರೆ. ಮಾಹಿತಿ ಪ್ರಕಾರ ಯೂಟ್ಯೂಬರ್ ಜೊನಾಥನ್ ಮಾ 1 ಕೋಟಿ 75 ಲಕ್ಷ ರೂಪಾಯಿ ಗಳಿಸಿದ್ದಾರೆ. ತೆರಿಗೆ ಕಡಿತಗೊಳಿಸಿ 1 ಕೋಟಿ 40 ಲಕ್ಷ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಜೊನಾಥನ್ ಮಾ ಅವರು ಚಲನಚಿತ್ರ ನಿರ್ಮಾಪಕರಾಗುವ ಕನಸನ್ನು ಹೊಂದಿದ್ದಾರೆ. ಈ ಕಾರಣಕ್ಕೆ ಅವರ NFT ಸಂಗ್ರಹವನ್ನು ಬಿಡುಗಡೆ ಮಾಡಿದ್ದಾರೆ. ಅವರು NFT ಸಂಗ್ರಹಣೆಗಳಿಗಾಗಿ ಡಿಸ್ಕಾರ್ಡ್ ಸರ್ವರ್ ಅನ್ನು ಸಹ ನಿರ್ಮಿಸಿಕೊಂಡಿದ್ದಾರೆ. ಈ ಸರ್ವರ್ ಹೊಂದಿರುವ ಜನರು ಮಾತ್ರ ತಮ್ಮ NFT ಸಂಗ್ರಹವನ್ನು ನೋಡಲು ಸಾಧ್ಯವಾಗುತ್ತದೆ. ಜೊನಾಥನ್ ಅವರ NFT ಹೊಂದಿರುವ ಯಾರಾದರೂ ಅದನ್ನು ಖಾಸಗಿ ಡಿಸ್ಕಾರ್ಡ್ ನಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಮಳೆ ಬೆಳೆ ಸಂಪಾದೀತಲೇ ಪರಾಕ್; ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತರು
ಜೊನಾಥನ್ ಮಾ ಯಾರು ?: ಯೂಟ್ಯೂಬ್‌ನಲ್ಲಿ ನಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್, ಕ್ರಿಪ್ಟೋ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಇವರು ಮಾಡುತ್ತಾರೆ. ಯೂಟ್ಯೂಬ್‌ನಲ್ಲಿ 16 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಇವರು ಪೂರ್ಣ ಸಮಯದ ಯೂಟ್ಯೂಬರ್ ಆಗುವ ಮೊದಲು, ಫೇಸ್‌ಬುಕ್ ಮತ್ತು ಗೂಗಲ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಈಗ ಸಿನಿಮಾ ನಿರ್ದೇಶಕನಾಗುವುದೊಂದೇ ನನ್ನ ಗುರಿ ಎನ್ನುತ್ತಾರೆ.
ಅವರು NFT (ನಾನ್ ಫಂಗಬಲ್-ಟೋಕನ್) ಅನ್ನು ಪ್ರಾರಂಭಿಸಲು ಈ ಸಿನಿಮಾ ಕನಸು ಕೂಡ ಕಾರಣವಾಗಿದೆ. ಹಾಗೆಯೇ ಅನೇಕ ಜನರಂತೆ ಜೊನಾಥನ್ ಕೂಡ ಕ್ರಿಪ್ಟೋಕರೆನ್ಸಿಯಲ್ಲಿ ಆಸಕ್ತಿ ಹೊಂದಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರ ಸಂಗ್ರಹ 'ವ್ಯಾಕ್ಸ್ಡ್ ಡಾಗ್ಗೊಸ್' ಅನ್ನು ಬಿಡುಗಡೆ ಮಾಡಿದರು. ಇದರಿಂದಾಗಿ ಅವರು 1 ಕೋಟಿ 75 ಲಕ್ಷಕ್ಕೂ ಹೆಚ್ಚು ಹಣ ಗಳಿಸಿದ್ದಾರೆ. ಅವರು ಈ ಗಳಿಕೆಯನ್ನು ಕೇವಲ 42 ಸೆಕೆಂಡುಗಳಲ್ಲಿ ಮಾಡಿದ್ದಾರೆ.
NFT ಎಂದರೆ ಏನು?: NFT ಎಂದರೆ ನಾನ್-ಫಂಗಬಲ್ ಟೋಕನ್ ಎಂದರ್ಥ. NFT ಗಳು ಡಿಜಿಟಲ್ ವಸ್ತುಗಳಾಗಿದ್ದು, ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಖರೀದಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ.
ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾದ ಕರೆನ್ಸಿ ಆಗಿದೆ. ಅರ್ಥಶಾಸ್ತ್ರದ ಪ್ರಕಾರ ಬದಲಾಯಿಸಿಕೊಳ್ಳಬಹುದಾದ ಸ್ವತ್ತು (Fungible Asset) ಎಂದರೆ ಮತ್ತೊಂದರೊಂದಿಗೆ ವಿನಿಮಯ ಮಾಡಿಕೊಳ್ಳುವುದು. ಉದಾಹರಣೆಗೆ ಹಣವನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಉದಾಹರಣೆಗೆ 100 ರೂಪಾಯಿ ಬದಲು 50 ರೂ ಮೌಲ್ಯದ 2 ನೋಟುಗಳನ್ನ ಬದಲಾಯಿಸಿಕೊಳ್ಳಬಹುದು. ಏಕೆಂದರೆ ಅವೆರಡು ಅಂತಿಮವಾಗಿ ಸಮಾನ ಮೌಲ್ಯ ಹೊಂದಿದೆ.
ಜೋ ನಾಥನ್ ಮಾ ಎನ್ಎಫ್ಟಿಯನ್ನೇ ಏಕೆ ಬಿಡುಗಡೆ ಮಾಡಿದರು?: ಎನ್ಎಫ್ಟಿ ಎಂದರೆ ಇದೊಂದು ಡಿಜಿಟಲ್ ಡಾಟಾ ಸೇವಿಂಗ್ ಪ್ಲಾಟ್ಫಾರ್ಮ್. ಇದರಲ್ಲಿ ಹಾಕಲಾದ ಫೋಟೋ ವಿಡಿಯೋ, ಆಡಿಯೋಗಳು ಅಥವಾ ಸಂಗೀತ ಕಾರ್ಯಕ್ರಮಗಳಿಗೆ ಕಾಪಿರೈಟ್ನೀಡಲಾಗುತ್ತದೆ.
ಎನ್ಎಫ್ಟಿಯಲ್ಲಿ ಹಾಕಲಾದ ವಿಷಯಗಳನ್ನು ಬೇರೆ ಯಾರೂ ಕೂಡ ಅನಧಿಕೃತವಾಗಿ ಬಳಸಿಕೊಳ್ಳುವಂತಿಲ್ಲ. ಹೀಗಾಗಿ ಎನ್ಎಫ್ಟಿಯಲ್ಲಿನ ಮಾಹಿತಿಗಳಿಗೆ ಹೆಚ್ಚಿನ ಭದ್ರತೆ ಇರುತ್ತದೆ.