ಮಲಪ್ಪುರಂ(ಕೇರಳ) : ಮಲಪ್ಪುರಂನ ಪೆರಿಂತಲ್‌ಮನ್ನಾದಲ್ಲಿರುವ ಒಲಿಯಂಕರ ಗ್ರಾಮದಲ್ಲಿ ಬೈಕ್ ಓಡಿಸುವಾಗ ಮಾತ್ರವಲ್ಲ, ವಾಕಿಂಗ್‌ಗೆ ಹೋಗಬೇಕೆಂದರೂ ಹೆಲ್ಮೆಟ್ ಬೇಕೇಬೇಕು. ಇದು ಅಚ್ಚರಿ ಆದರೂ ನಿಜ.
ಈ ಗ್ರಾಮದಲ್ಲಿ ಕಾಗೆಗಳು ಜನರನ್ನು ರಸ್ತೆಯಲ್ಲಿ ನಡೆಯಲು ಸಹ ಬಿಡುತ್ತಿಲ್ಲ. ಜನರನ್ನು ಕಂಡ ತಕ್ಷಣವೇ ದಾಳಿ ಮಾಡಲು ಮುಂದಾಗುತ್ತವೆ. ಪರಿಣಾಮ ಮನೆಯಿಂದ ಹೊರಗೆ ಕಾಲಿಟ್ಟರೆ ತಲೆಗೆ ಹೆಲ್ಮೆಟ್ ಇರಬೇಕು, ಇಲ್ಲ ಕೈಯಲ್ಲಿ ಕೋಲಿರಬೇಕು ಎಂಬ ಅನಿವಾರ್ಯ ಪರಿಸ್ಥಿತಿ ಇಲ್ಲಿನವರಿಗೆ ನಿರ್ಮಾಣ ಆಗಿದೆ.
ಇದನ್ನೂ ಓದಿ: ಹಿಜಾಬ್,ಶಿವಮೊಗ್ಗ ಹತ್ಯೆ ಪ್ರಕರಣ : ಮಂಗಳೂರಿನಲ್ಲಿ ಪೊಲೀಸ್ ಪಥಸಂಚಲನ
ಸುಮಾರು ಮೂರೂವರೆ ತಿಂಗಳ ಹಿಂದೆ ಅಂಬಲಪರಂಬುವಿನಲ್ಲಿ ಅಬ್ಬಾಸ್ ಎಂಬುವರ ಮನೆ ನಿರ್ಮಾಣ ಮಾಡುತ್ತಿದ್ದ ವೇಳೆಯಿಂದ ಈ ಕಾಗೆಗಳ ದಾಳಿ ಆರಂಭವಾಗಿದೆಯಂತೆ.
ಕಾಗೆಗಳು ನಿರಂತರವಾಗಿ ದಾಳಿ ಮಾಡಿದ್ದರಿಂದ ಮನೆ ಕೆಲಸ ಮಾಡಲು ಕಾರ್ಮಿಕರಿಗೆ ಕಷ್ಟವಾದಾಗ, ಅವರಲ್ಲಿ ಒಬ್ಬರು ಮರದ ಮೇಲೆ ಹತ್ತಿ ಕಾಗೆಗಳು ನಿರ್ಮಿಸಿದ್ದ ಗೂಡನ್ನು ಬೀಳಿಸಿದ್ದರಂತೆ. ಪರಿಣಾಮ ಕಾಗೆಗಳು ಈಗ ಕಣ್ಣಿಗೆ ಕಂಡವರೆಲ್ಲರ ಮೇಲೆ ದಾಳಿ ಮಾಡಲು ಆರಂಭಿಸಿವೆ.
ಕಾಗೆಗಳ ಪಂಜರವನ್ನು ನಾಶಪಡಿಸಿದ ನಂತರವೂ ಆ ಪ್ರದೇಶವನ್ನು ಬಿಡಲು ಕಾಗೆಗಳು ಮುಂದಾಗಿಲ್ಲ. ಸ್ಥಳೀಯರ ವಿರುದ್ಧ ತಮ್ಮ ಆಕ್ರಮಣವನ್ನು ಮುಂದುವರೆಸಿವೆ. ಈಗ ಬೀದಿ ನಾಯಿಗಳ ಮೇಲೆಯೂ ಕಾಗೆಗಳು ದಾಳಿ ಮಾಡುತ್ತಿವೆ ಎನ್ನಲಾಗಿದೆ.