ETV Bharat / bharat

ನಿವೃತ್ತಿಗೂ ಮೊದಲೇ ಮೂವರು ಐಪಿಎಸ್​ ಅಧಿಕಾರಿಗಳ ರಾಜೀನಾಮೆ ಪಡೆದ ಯೋಗಿ ಸರ್ಕಾರ - ಉತ್ತರ ಪ್ರದೇಶ ಸರ್ಕಾರ

ಅಖಿಲೇಶ್ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಜೊತೆ ಅನುರಾಗ್ ಠಾಕೂರ್ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋ ಒಂದು ವೈರಲ್ ಆಗಿತ್ತು. ಬಳಿಕ ಅಧಿಕಾರಿಯನ್ನು ಅಮಾನತು ಮಾಡಿದ್ದ ಸರ್ಕಾರ, ಪ್ರಕರಣ ಸಂಬಂದ ತನಿಖೆಯನ್ನೂ ಆರಂಭಿಸಿತ್ತು.

yogi-govt-resigned-from-three-ips-officers-even-before-retirement
ನಿವೃತ್ತಿಗೂ ಮೊದಲೇ ಮೂವರು ಐಪಿಎಸ್​ ಅಧಿಕಾರಿಗಳ ರಾಜೀನಾಮೆ ಪಡೆದ ಯೋಗಿ ಸರ್ಕಾರ
author img

By

Published : Mar 23, 2021, 4:16 PM IST

ಲಖನೌ (ಉತ್ತರ ಪ್ರದೇಶ): ಇಲ್ಲಿನ ಮೂವರು ಐಪಿಎಸ್ ಅಧಿಕಾರಿಗಳಾದ ಐಜಿ ಅಮಿತಾಬ್ ಠಾಕೂರ್, ರಾಜೇಶ್ ಕೃಷ್ಣ (ಕಮಾಂಡೆಂಟ್ 10 ನೇ ಬೆಟಾಲಿಯನ್ ಬಾರಾಬಂಕಿ) ಮತ್ತು ಡಿಐಜಿ ರಾಕೇಶ್ ಶಂಕರ್ ಅವರಿಂದ ನಿವೃತ್ತಿಗೂ ಮೊದಲೇ ಸರ್ಕಾರ ರಾಜೀನಾಮೆ ಪಡೆದುಕೊಂಡಿದೆ.

ಈ ಮೂವರು ಅಧಿಕಾರಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳಿರುವ ಹಿನ್ನೆಲೆ ಗೃಹ ಸಚಿವಾಲಯ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗ್ತಿದೆ. ಅಮಿತಾಬ್ ಠಾಕೂರ್​​​ ತನ್ನೆಲ್ಲಾ ಪ್ರಕರಣ ಬಾಕಿ ಉಳಿಸಿಕೊಂಡಿದ್ದಾರೆ. ರಾಜೇಶ್ ಕೃಷ್ಣ ಮೇಲೆ ಪೊಲೀಸ್ ನೇಮಕಾತಿಯಲ್ಲಿ ಹಗರಣ ನಡೆಸಿದ ಆರೋಪವಿದೆ. ಇದಲ್ಲದೆ ರಾಕೇಶ್ ಶಂಕರ್ ಡಿಯೋರಿಯಾ ಶೆಲ್ಟರ್ ಹೋಮ್​ ಪ್ರಕರಣದ ಶಂಕಿತ ಆರೋಪಿ ಎಂಬ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ.

ಈ ಹಿಂದೆ ಅಖಿಲೇಶ್ ಯಾದವ್​ ಸರ್ಕಾರದಲ್ಲಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಜೊತೆ ಅನುರಾಗ್ ಠಾಕೂರ್ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋ ಒಂದು ವೈರಲ್ ಆಗಿತ್ತು. ಬಳಿಕ ಅವರನ್ನು ಅಮಾನತು ಮಾಡಿ, ಪ್ರಕರಣ ಸಂಬಂದ ತನಿಖೆಯೂ ಆರಂಭಗೊಂಡಿತ್ತು. ಈ ಹಿನ್ನೆಲೆ ಅವರು ಸರ್ಕಾರಿ ಉದ್ಯೋಗದಲ್ಲಿ ಮುಂದುವರಿಯಲು ಅಸಮರ್ಥರು ಎಂದು ಪರಿಗಣಿಸಿ ನಿವೃತ್ತಿಗೂ ಮೊದಲೇ ರಾಜೀನಾಮೆ ಪಡೆದುಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.