ETV Bharat / bharat

13 ಇಲಾಖೆಗಳ 48 ಹಳೆ ಕಾನೂನುಗಳನ್ನು ರದ್ದುಗೊಳಿಸಲಿರುವ ಯೋಗಿ ಸರ್ಕಾರ! - ಕಾನೂನುಗಳನ್ನು ನಿಷ್ಕ್ರಿಯಗೊಳಿಸಲು ತಯಾರಿ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು 13 ಇಲಾಖೆಗಳಲ್ಲಿ ನಿಷ್ಕ್ರಿಯವಾಗಿರುವ 48 ಹಳೆಯ ಕಾನೂನುಗಳನ್ನು ರದ್ದುಗೊಳಿಸಲು ಸಿದ್ಧತೆ ನಡೆಸುತ್ತಿದೆ. ಜುಲೈ 31ರಂದು ಈ ಕಾನೂನುಗಳನ್ನು ರದ್ದುಗೊಳಿಸಲಾಗುವುದು.

yogi
yogi
author img

By

Published : Jul 27, 2021, 2:08 PM IST

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅನೇಕ ಹಳೆಯ ಕಾನೂನುಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯಲ್ಲಿದೆ. ಗೃಹ ಇಲಾಖೆ ಸೇರಿದಂತೆ ರಾಜ್ಯದ 13 ಇಲಾಖೆಗಳಲ್ಲಿ ನಿಷ್ಕ್ರಿಯವಾಗಿರುವ 48 ಹಳೆಯ ಕಾನೂನುಗಳನ್ನು ರದ್ದುಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಜುಲೈ 31ರೊಳಗೆ ಈ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

ಅಂತಹ ಎಲ್ಲ ಕಾನೂನುಗಳನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸರ್ಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇಂತಹ ಕಾನೂನುಗಳನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ ಅಥವಾ ತೀವ್ರ ಬದಲಾವಣೆಗಳ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದಲ್ಲೂ ಇಂತಹ ಎಲ್ಲ ಕಾನೂನುಗಳನ್ನು ರದ್ದುಪಡಿಸಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 48 ಕಾನೂನುಗಳನ್ನು ಸರ್ಕಾರ ಶೀಘ್ರದಲ್ಲೇ ರದ್ದುಗೊಳಿಸಲಿದೆ. ಮಾಹಿತಿ ಪ್ರಕಾರ, ಈ ವಾರ ಜುಲೈ 31ರಂದು ಈ ಕಾನೂನುಗಳನ್ನು ರದ್ದುಗೊಳಿಸಲಾಗುವುದು. ಈ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ಈ ಪ್ರಸ್ತಾಪವನ್ನು ಸಂಪುಟದಲ್ಲಿ ಇಡಲಿದೆ.

ಯಾವ ಇಲಾಖೆಯ ಎಷ್ಟು ಕಾನೂನುಗಳು ನಿಷ್ಕ್ರಿಯವಾಗಿವೆ?

ವಿದ್ಯುತ್ ಇಲಾಖೆ: 18

ಅರಣ್ಯ ಇಲಾಖೆ: 7

ಆಹಾರ ಮತ್ತು ನಾಗರಿಕ ಸರಬರಾಜು: 7

ಅಬಕಾರಿ ಇಲಾಖೆ: 3

ಪಂಚಾಯತಿ ರಾಜ್ ಇಲಾಖೆ: 3

ಕೈಮಗ್ಗ ಮತ್ತು ಜವಳಿ ಉದ್ಯಮ: 2

ಉನ್ನತ ಶಿಕ್ಷಣ ಇಲಾಖೆ: 2

ಗೃಹ ಇಲಾಖೆ: 2

ವಸತಿ ಇಲಾಖೆ: 2

ಕಂದಾಯ ಇಲಾಖೆ: 2

ಮೀನುಗಾರಿಕೆ ಇಲಾಖೆ: 1

ನೀರಾವರಿ ಮತ್ತು ಜಲ ಸಂಪನ್ಮೂಲಗಳು: 1

ಸಾರಿಗೆ ಇಲಾಖೆ: 1

ಈ ನಿಯಮಗಳನ್ನು ಮುರಿಯಲು ಸಿದ್ಧತೆ:

ಉತ್ತರ ಪ್ರದೇಶದ ವಿದ್ಯುತ್ ನಿಯಂತ್ರಣದ ತಾತ್ಕಾಲಿಕ ಅಧಿಕಾರಗಳು

ಉತ್ತರ ಪ್ರದೇಶ ವಿದ್ಯುತ್ (ವಿತರಣೆ ಮತ್ತು ಬಳಕೆಯ ನಿಯಂತ್ರಣ) ಸುಗ್ರೀವಾಜ್ಞೆ 1972

ಉತ್ತರ ಪ್ರದೇಶ ಅಫೀಮು ಧೂಮಪಾನ ಕಾಯ್ದೆ 1934

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.