ಲಖನೌ/ ಅಮರಾವತಿ: ಉತ್ತರ ಪ್ರದೇಶದಲ್ಲಿ ಮೇ 6ರವರೆಗೆ ಭಾಗಶಃ ಲಾಕ್ಡೌನ್ ಮುಂದುವರಿಸಿದರೇ ಆಂಧ್ರಪ್ರದೇಶ ಮೇ 5ರಿಂದ ಕೊರೊನಾ ಕರ್ಫ್ಯೂ ಮುಂದಿನ 14 ದಿನಗಳ ತನಕ ವಿಧಿಸುವುದಾಗಿ ತಿಳಿಸಿವೆ.
ಮಂಗಳವಾರ ಮೇ 4ರ ಬೆಳಗ್ಗೆ ನಿರ್ಬಂಧಗಳನ್ನು ತೆಗೆದು ಹಾಕಲು ನಿರ್ಧರಿಸಲಾಗಿತ್ತು. ಇದನ್ನು ಮತ್ತೆ 2 ದಿನ ಮುಂದುವರಿಸಲಾಗುತ್ತದೆ. ಈ ಅವಧಿಯಲ್ಲಿ ಎಲ್ಲಾ ಅಂಗಡಿ ಮತ್ತು ಮಾರುಕಟ್ಟೆಗಳು ಮುಚ್ಚಲಿವೆ. ಆದರೆ, ತರಕಾರಿಗಳು, ಹಾಲು ಮತ್ತು ಡೈರಿ ಉತ್ಪನ್ನಗಳಂತಹ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳು ಮುಕ್ತವಾಗಿರುತ್ತವೆ ಎಂದು ಯುಪಿ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಯ ಸಂಚಾರವನ್ನು ನಿಷೇಧಿಸಲಾಗಿದೆ. ಔಷಧಿ ಅಂಗಡಿಗಳು, ಗ್ಯಾಸ್ ಏಜೆನ್ಸಿಗಳು ಮತ್ತು ಪೆಟ್ರೋಲ್ ಪಂಪ್‌ಗಳು ತೆರೆದಿರುತ್ತವೆ.
ಉತ್ತರಪ್ರದೇಶದಲ್ಲಿ ಭಾನುವಾರ 290 ಹೆಚ್ಚು ಕೊರೊನಾ ವೈರಸ್ ಸಾವು ಮತ್ತು 30,983 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆರೋಗ್ಯ ಬುಲೆಟಿನ್ ಪ್ರಕಾರ 2.96 ಲಕ್ಷ ಸಕ್ರಿಯ ಪ್ರಕರಣಗಳಿವೆ.
ದೇಶವನ್ನು ಹಾಳು ಮಾಡುತ್ತಿರುವ ಕೊರೊನಾ ವೈರಸ್ ವಿರುದ್ಧದ ಯುದ್ಧದಲ್ಲಿ ವ್ಯಾಪಾರಿಗಳು ತಮ್ಮ ಸಕ್ರಿಯ ಕೊಡುಗೆ ನೀಡಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ.
ವಾಸ್ತವಿಕವಾಗಿ ವ್ಯಾಪಾರಿಗಳೊಂದಿಗೆ ಸಂವಹನ ನಡೆಸಿದ ಯೋಗಿ ಆದಿತ್ಯನಾಥ್ ಅವರು, ಕೋವಿಡ್ -19 ವಿರುದ್ಧದ ಹೋರಾಟ ಯಶಸ್ವಿಯಾಗಲಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಂಧ್ರಾದಲ್ಲಿ 14 ದಿನ ಕೊರೊನಾ ಕರ್ಫ್ಯೂ:
ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿದ್ದು, ಆಂಧ್ರಪ್ರದೇಶ ಸರ್ಕಾರ ಎರಡು ವಾರಗಳ ಕಾಲ ಕರ್ಫ್ಯೂ ವಿಧಿಸಲು ನಿರ್ಧರಿಸಿದೆ. ಮೇ 5ರಿಂದ 14 ದಿನಗಳವರೆಗೆ ಭಾಗಶಃ ಕರ್ಫ್ಯೂ ವಿಧಿಸಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.