ETV Bharat / bharat

ಯೋಗಿ ನನ್ನ ದೂರವಾಣಿ ಕದ್ದಾಲಿಕೆ ಮಾಡಿ, ಪ್ರತಿದಿನ ಸಂಜೆ ಕೇಳಿಸಿಕೊಳ್ಳುತ್ತಾರೆ : ಅಖಿಲೇಶ್ ಯಾದವ್ - ಪ್ರಧಾನಿ ಮೋದಿ ವಿರುದ್ಧ ಅಖಿಲೇಶ್ ಅಸಮಾಧಾನ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ಕೇಂದ್ರದ ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಂಡು ಸಮಾಜವಾದಿ ಪಕ್ಷಗಳ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅಖಿಲೇಶ್ ಯಾದವ್‌ ಆರೋಪಿಸಿದ್ದಾರೆ..

Yogi getting my telephones tapped: Akhilesh Yadav
ಯೋಗಿ ನನ್ನ ದೂರವಾಣಿ ಕದ್ದಾಲಿಕೆ ಮಾಡಿ, ಪ್ರತಿದಿನ ಸಂಜೆ ಕೇಳಿಸಿಕೊಳ್ಳುತ್ತಾರೆ: ಅಖಿಲೇಶ್ ಯಾದವ್
author img

By

Published : Dec 19, 2021, 6:42 PM IST

ಲಖನೌ,ಉತ್ತರಪ್ರದೇಶ : ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ. ಪ್ರತಿದಿನ ಸಂಜೆ ಏನೇನು ಮಾತನಾಡುತ್ತಾರೆ ಎಂದು ಕೇಳಿಸಿಕೊಳ್ಳುತ್ತಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಗಂಭೀರವಾದ ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಯುಪಿ+ಯೋಗಿ = ಉಪಯೋಗಿ ಎಂದು ಹೇಳಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕೊಂಡಾಡಿದ್ದರು. ಈ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಯೋಗಿ ಆದಿತ್ಯನಾಥ್ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ.

ಇದರ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ಸಮಾಜವಾದಿ ಪಕ್ಷದ ನಾಯಕರ ಕಚೇರಿಗಳು ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಲು ಐಡಿ, ಇಡಿಯಂತಹ ಕೇಂದ್ರದ ತನಿಖಾ ಏಜೆನ್ಸಿಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಖಿಲೇಶ್ ಯಾದವ್ ಹೇಳಿದರು.

ಬಿಜೆಪಿಯು ಕಾಂಗ್ರೆಸ್ ಮಾರ್ಗವನ್ನು ಅನುಸರಿಸುತ್ತಿದೆ. ಕಾಂಗ್ರೆಸ್‌ನಂತೆಯೇ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ಪಕ್ಷಗಳಲ್ಲಿ ಭಯವನ್ನು ಹುಟ್ಟು ಹಾಕಲು ಬಿಜೆಪಿ ಮುಂದಾಗಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. 'ಯೋಗ್ಯ' ಸರ್ಕಾರ ಜನರಿಗೆ ಬೇಕಾಗಿದೆ. ಅನುಪಯೋಗಿ ಸರ್ಕಾರ ಉತ್ತರಪ್ರದೇಶವನ್ನು ಹಾಳುಮಾಡಿದೆ ಎಂದು ಅಖಿಲೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ 43 ಮೀನುಗಾರರ ಬಂಧನ : ನಾಳೆ ತಮಿಳುನಾಡಲ್ಲಿ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.