ಕೇದಾರನಾಥ( ಉತ್ತರಾಖಂಡ): ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹಾಗೂ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಇಂದು ಕೇದಾರನಾಥ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ಸೋಮವಾರ ಮುಂಜಾನೆ ದೇವಾಲಯದ ಪೋರ್ಟಲ್ ಸಮಾರೋಪ ಸಮಾರಂಭದಲ್ಲಿ ಇಬ್ಬರು ಸಿಎಂಗಳು ಪಾಲ್ಗೊಂಡರು. ಇಬ್ಬರೂ ಮುಖ್ಯಮಂತ್ರಿಗಳು ಕೇದಾರನಾಥನ ಸನ್ನಧಿಗೆ ಆಗಮಿಸುತ್ತಿದ್ದಂತೆ ಭಾರಿ ಹಿಮಪಾತ ಆಗುವ ಮೂಲಕ ಮಂಜಿನ ಸ್ವಾಗತ ಕೋರಿತು. ತ್ರಿವೇಂದ್ರ ಸಿಂಗ್ ರಾವತ್ ಮತ್ತು ಯೋಗಿ ಆದಿತ್ಯನಾಥ್ ಕೇದಾರನಾಥನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದು, ನಂತರ ಅವರು ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕೇದಾರನಾಥ ದೇವಸ್ಥಾನವನ್ನು ನಾಳೆ ಮುಚ್ಚಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಸಿಎಂಗಳು ಇಂದೇ ಕೇದಾರನಾಥನ ದರ್ಶನ ಪಡೆದು ಪಾವನರಾದರು.