ಲಖನೌ: ಮುಂಬರುವ ವಿಧಾನಸಭಾ ಚುನಾವಣೆ 2022ಕ್ಕೆ ಮುನ್ನ ರಾಜ್ಯದಲ್ಲಿ ಈಗ 80 ವರ್ಸಸ್ 20 ಆಗಿದೆ ಆಗಿದೆ. ರಾಜ್ಯದಲ್ಲಿನ ಬ್ರಾಹ್ಮಣರನ್ನು ಮತ ಹಾಕುವಂತೆ ಕೇಳಲು ಕಾರಣವಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
"ಸ್ಪರ್ಧೆಯು ಬಹಳ ಮುಂದಕ್ಕೆ ಸಾಗಿದೆ, ಹೋರಾಟವು ಈಗ 80 ವರ್ಸಸ್ 20 ಆಗಿದೆ" ಎಂದು ಅವರು ಸೂಕ್ಷ್ಮವಾಗಿ ರಾಜ್ಯದಲ್ಲಿ 19 ರಷ್ಟು ಮುಸ್ಲಿಂ ಜನಸಂಖ್ಯೆಯ ಬಗ್ಗೆ ಮಾತನಾಡಿದ್ದಾರೆ. ಶೇ 80 ಜನರು ಯಾವಾಗಲೂ ಧನಾತ್ಮಕ ಮತ್ತು ಅಭಿವೃದ್ಧಿ - ಆಧಾರಿತರಾಗಿದ್ದಾರೆ, ಆದರೆ ಉಳಿದ ಶೇ 20 ಯಾವಾಗಲೂ ವಿಷಯಗಳನ್ನು ವಿರೋಧಿಸುತ್ತಾರೆ ಮತ್ತು ದೂರುತ್ತಾರೆ ಎಂದಿದ್ದಾರೆ.
-
लड़ाई अब 80 और 20 की हो चुकी है, जो लोग सुशासन और विकास का साथ देते हैं वो 80 फीसदी भाजपा के साथ हैं और जो लोग किसान विरोधी हैं, विकास विरोधी है, गुंडों, माफियाओं का साथ देते हैं वो 20 फीसदी विपक्ष के साथ है: मुख्यमंत्री श्री @myogiadityanath #BJP4UP
— BJP Uttar Pradesh (@BJP4UP) January 9, 2022 " class="align-text-top noRightClick twitterSection" data="
">लड़ाई अब 80 और 20 की हो चुकी है, जो लोग सुशासन और विकास का साथ देते हैं वो 80 फीसदी भाजपा के साथ हैं और जो लोग किसान विरोधी हैं, विकास विरोधी है, गुंडों, माफियाओं का साथ देते हैं वो 20 फीसदी विपक्ष के साथ है: मुख्यमंत्री श्री @myogiadityanath #BJP4UP
— BJP Uttar Pradesh (@BJP4UP) January 9, 2022लड़ाई अब 80 और 20 की हो चुकी है, जो लोग सुशासन और विकास का साथ देते हैं वो 80 फीसदी भाजपा के साथ हैं और जो लोग किसान विरोधी हैं, विकास विरोधी है, गुंडों, माफियाओं का साथ देते हैं वो 20 फीसदी विपक्ष के साथ है: मुख्यमंत्री श्री @myogiadityanath #BJP4UP
— BJP Uttar Pradesh (@BJP4UP) January 9, 2022
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಒಲವು ತೋರುವ ಶೇ 80 ಮತದಾರರು ತಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ. ಆದರೆ ರಾಷ್ಟ್ರೀಯತೆ, ಅಭಿವೃದ್ಧಿಯ ವಿರುದ್ಧ ಇರುವವರು ತಮ್ಮ ಪಕ್ಷಕ್ಕೆ ಮತ ಹಾಕುವುದಿಲ್ಲ ಅವರು ಗೂಂಡಾಗಳಿಗೆ ಬೆಂಬಲವಾಗಿ ಬೇರೆ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ ಎಂದಿದ್ದಾರೆ.
‘80 ವರ್ಸಸ್ 20’ ರ ಈ ಚುನಾವಣೆಗೆ ಬ್ರಾಹ್ಮಣರು ನಾಯಕತ್ವವನ್ನು ನೀಡಲಿದ್ದಾರೆ ಎಂದು ಹೇಳಿದ ಮುಖ್ಯಮಂತ್ರಿ, ಬ್ರಾಹ್ಮಣ ಎಂಬುದು ವಾಸ್ತವವಾಗಿ ಒಂದು ಜಾತಿಯಲ್ಲ. ಆದರೆ ‘ಪ್ರಬುದ್ಧ ಸಮಾಜ’ ಅದು ‘ಕಲಿತ ಸಮುದಾಯ’ ಎಂದು ಸ್ಪಷ್ಟಪಡಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.
ಯೋಗಿ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳು
ಸಿಎಂ ಯೋಗಿ ಆದಿತ್ಯನಾಥ ಅವರ ಈ ಹೇಳಿಕೆ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು, ಸಿಎಂ ಯೋಗಿ ಆದಿತ್ಯನಾಥ ಅವರ ಈ ಹೇಳಿಕೆ ಖಂಡಿಸಿದ್ದಾರೆ.