ETV Bharat / bharat

ಉತ್ತರಾಖಂಡ್​ನಲ್ಲಿ ಅರಳಿದ ಫಿಲಿಪೈನ್ಸ್​ನ ಸುಗಂಧ ದ್ರವ್ಯಗಳ ರಾಣಿ "ಯಿಲಾಂಗ್​" - ಯಿಲಾಂಗ್​ ಯಿಲಾಂಗ್​ ಹೂವು

ಫಿಲಿಪೈನ್ಸ್​ನಲ್ಲಿ ಸಾಮಾನ್ಯವಾಗಿ ಕಂಡು ಬರುವ ಯಿಲಾಂಗ್​ ಯಿಲಾಂಗ್​ ಹೂವು ಮೊದಲ ಬಾರಿಗೆ ಉತ್ತರಾಖಂಡ್​ ನಲ್ಲಿ ಅರಳಿದೆ.

ylang-ylang-flower-blooms-in-aromatic-garden-of-uttarakhand
ಉತ್ತರಾಖಂಡ್​ನಲ್ಲಿ ಅರಳಿದ ಫಿಲಿಪೈನ್ಸ್​ನ ಸುಗಂಧ ದ್ರವ್ಯಗಳ ರಾಣಿ "ಯಿಲಾಂಗ್​"
author img

By ETV Bharat Karnataka Team

Published : Sep 4, 2023, 6:10 AM IST

ಡೆಹ್ರಾಡೂನ್​ (ಉತ್ತರಾಖಂಡ್​) : ಫಿಲಿಪೈನ್ಸ್​ನಲ್ಲಿ ಸಾಮಾನ್ಯವಾಗಿ ಕಂಡು ಬರುವ ಯಿಲಾಂಗ್​ ಯಿಲಾಂಗ್​ ಹೂವು ಮೊದಲ ಬಾರಿಗೆ ಉತ್ತರಾಖಂಡ್​ ನಲ್ಲಿ ಅರಳಿದೆ. ಇಲ್ಲಿನ ಹಲ್ದ್ವಾನಿ ಅರಣ್ಯ ಭಾಗದಲ್ಲಿ ಆರೋಮ್ಯಾಟಿಕ್ ಗಾರ್ಡನ್​ನಲ್ಲಿ ಮೊದಲ ಬಾರಿಗೆ ಈ ಹೂವು ಅರಳಿದೆ. ಈ ಹೂವನ್ನು ಹೆಚ್ಚಾಗಿ ಸುಗಂಧ ದ್ರವ್ಯ ತಯಾರಿಸುವಲ್ಲಿ ಬಳಕೆ ಮಾಡುತ್ತಾರೆ. ಇದಕ್ಕೆ ಸುಗಂಧ ದ್ರವ್ಯ ಉದ್ಯಮದಲ್ಲಿ ಸಾಕಷ್ಟು ಬೇಡಿಕೆ ಇದ್ದು, ಉತ್ತರ ಭಾರತದಲ್ಲಿ ಸುಗಂಧ ದ್ರವ್ಯ ಉದ್ಯಮಕ್ಕೆ ಉತ್ತೇಜನ ಸಿಗುವಂತಾಗಲಿದೆ.

ಸುಗಂಧ ದ್ರವ್ಯಗಳ ರಾಣಿ : 2020ರಲ್ಲಿ ಉತ್ತರಾಖಂಡ ಅರಣ್ಯ ಸಂಶೋಧನಾ ಸಂಸ್ಥೆಯು ಯಿಲಾಂಗ್​ ಯಿಲಾಂಗ್​ (ವೈಜ್ಞಾನಿಕ ಹೆಸರು: Cananga odorata) ಸಸ್ಯವನ್ನು ನೈನಿತಾಲ್ ಜಿಲ್ಲೆಯಲ್ಲಿರುವ ದೇಶದ ಅತಿದೊಡ್ಡ ಆರೊಮ್ಯಾಟಿಕ್ ಗಾರ್ಡನ್‌ನಲ್ಲಿ ನೆಟ್ಟಿತ್ತು. ನೆಟ್ಟು ಮೂರು ವರ್ಷಗಳ ನಂತರ ಈ ಸಸ್ಯವು ಮೊದಲ ಬಾರಿಗೆ ಹೂಬಿಟ್ಟಿದೆ. ಈ ಹೂವನ್ನು 'ಸುಗಂಧ ದ್ರವ್ಯಗಳ ರಾಣಿ' ಎಂದೂ ಕರೆಯುತ್ತಾರೆ. ಇದು ತನ್ನ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಅಗ್ರೋ ಫಾರೆಸ್ಟ್ರಿ ಮಾಡಲು ಮಹಾರಾಷ್ಟ್ರದ ಪುಣೆಯಿಂದ ಈ ಸಸ್ಯವನ್ನು ಇಲ್ಲಿಗೆ ತಂದು ನೆಡಲಾಗಿತ್ತು.

ಈ ಹೂವನ್ನು ಸುಗಂಧ ದ್ರವ್ಯ ಉದ್ಯಮದ ಜೊತೆಗೆ, ಔಷಧೀಯ ತೈಲ, ಔಷಧಗಳ ಉತ್ಪಾದನೆಯಲ್ಲಿ ಬಳಕೆ ಮಾಡಲಾಗುತ್ತದೆ. ಅಲ್ಲದೆ ಈ ಹೂವಿನಿಂದ ತಯಾರಿಸುವ ಔಷಧವು ಮಧುಮೇಹ, ಪೈಲ್ಸ್, ಅಧಿಕ ರಕ್ತದೊತ್ತಡ, ಆಸ್ತಮಾ ಮತ್ತು ಕೀಲು ನೋವಿಗೆ ಇನ್ನಷ್ಟು ಕಾಯಿಲೆಗೆ ಉಪಯುಕ್ತವೆಂದು ಪರಿಗಣಿಸಲಾಗಿದೆ. ಯಿಲಾಂಗ್​ ಹೂವುಗಳನ್ನು ಸೌಂದರ್ಯ ಉತ್ಪನ್ನಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ.

ಉತ್ತರಾಖಂಡ ಅರಣ್ಯ ಸಂಶೋಧನಾ ಸಂಸ್ಥೆಯು ಈ ಸಸ್ಯದ ಮೇಲೆ ಪರೀಕ್ಷೆಗಳನ್ನು ನಡೆಸುವ ಉದ್ದೇಶದಿಂದ ಗಿಡವನ್ನು ನೆಟ್ಟಿದೆ. ಈ ಹೂವಿನ ವಿಶೇಷತೆ ಎಂದರೆ ಈ ಗಿಡವನ್ನು ದೊಡ್ಡ ಕುಂಡದಲ್ಲಿಯೂ ನೆಡಬಹುದು. 3 ವರ್ಷಗಳ ನಂತರ ಈ ಗಿಡವು ಹಸಿರು ಬಣ್ಣದ ಹೂವುಗಳು ಬಿಟ್ಟಿದ್ದು, ಇವುಗಳು ನಂತರ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದರಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ.

ಯಿಲಾಂಗ್​ ಸಸ್ಯವು ಹೆಚ್ಚಾಗಿ ಫಿಲಿಪೈನ್ಸ್​​ನಲ್ಲಿ ಕಾಣಸಿಗುತ್ತದೆ. ಆದರೆ ಇದನ್ನು ಇಂಡೋನೇಷ್ಯಾ, ಮಲೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಸುಗಂಧ ದ್ರವ್ಯ ಉದ್ಯಮದಲ್ಲಿ ಬಳಸಲಾಗುತ್ತದೆ. ಈ ಹೂವಿನ ಎಣ್ಣೆಯು 100mlಗೆ ಸುಮಾರು 2,000 ರಿಂದ 4,000 ರೂ. ಬೆಲೆ ಬಾಳುತ್ತದೆ. ಯಿಲಾಂಗ್​ ಸಸ್ಯದ 100 ಕೆಜಿ ಹೂವುಗಳಿಂದ ಕೇವಲ 2 ಕೆಜಿ ತೈಲವನ್ನು ಉತ್ಪಾದಿಸಬಹುದು. ವಿಶ್ವದಾದ್ಯಂತ 100 ಟನ್‌ಗಳಷ್ಟು ಈ ಹೂವಿಗೆ ಬೇಡಿಕೆ ಇದೆ. ಇದನ್ನು ಪ್ರಪಂಚದ ಅನೇಕ ಬ್ರಾಂಡ್​ಗಳ ಸುಗಂಧ ದ್ರವ್ಯಗಳಲ್ಲಿ ಬಳಸಲಾಗುತ್ತದೆ.

ಇದನ್ನೂ ಓದಿ : ಕಣಿವೆ ರಾಜ್ಯದ ಅಂದ ಹೆಚ್ಚಿಸಿದ ಟುಲಿಪ್ ಹೂದೋಟ: ಮಾ.19 ರಿಂದ ಪ್ರವಾಸಿಗರಿಗೆ ಮುಕ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.