ETV Bharat / bharat

ವಾರ್ಷಿಕ ರಾಶಿ ಭವಿಷ್ಯ 2023: ಯಾವ ರಾಶಿಯವರಿಗೆ ಅದೃಷ್ಟ, ಯಾವ್ಯಾವ ರಾಶಿಗೆ ಅಶುಭ? - ಮೇಷ ರಾಶಿ

ವರ್ಷದ ರಾಶಿ ಭವಿಷ್ಯ ಇಂತಿದೆ.

yearly horoscope
ವರ್ಷದ ರಾಶಿ ಭವಿಷ್ಯ
author img

By

Published : Jan 1, 2023, 2:31 PM IST

ಮೇಷ: 2023ರ ಆರಂಭದಲ್ಲಿ ದೃಢ ಮತ್ತು ಬಲಶಾಲಿ ಮೇಷ ರಾಶಿಯವರು ಸಾಕಷ್ಟು ಕಾರ್ಯ ಪ್ರವೃತ್ತರಾಗಲಿದ್ದಾರೆ. ವರ್ಷದ ಆರಂಭದಲ್ಲಿ, ಮಾತಿನಲ್ಲಿ ಕಹಿತನ ತೋರಿಸದೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಕೆಲವೊಂದು ಒಳ್ಳೆಯ ಅವಕಾಶಗಳು ಕೈ ತಪ್ಪಿ ಹೋಗಬಹುದು. ನಿರಂಕುಶವಾದಿ ಎನ್ನುವ ಹಣೆಪಟ್ಟಿಯನ್ನು ಅಂಟಿಸಿಕೊಳ್ಳುವ ಬದಲಿಗೆ, ಯಾವುದು ಸರಿ ಮತ್ತು ಯಾವುದು ತಪ್ಪು ಎನ್ನುವುದನ್ನು ಗುರುತಿಸಿ ಮುಂದೆ ಸಾಗುವುದು ಒಳ್ಳೆಯದು. ಆಗ ಮಾತ್ರವೇ ನೀವು ಈ ವರ್ಷದಲ್ಲಿ ಮುಂದೆ ಸಾಗಿ ಲಾಭ ಗಳಿಸಲಿದ್ದೀರಿ. ಧಾರ್ಮಿಕವಾಗಿ ನೀವು ಖಂಡಿತವಾಗಿಯೂ ಮುಂದೆ ಸಾಗಲಿದ್ದೀರಿ. ಧಾರ್ಮಿಕ ವಿಚಾರಗಳು ಮತ್ತು ಅಧ್ಯಾತ್ಮಿಕ ಚಟುವಟಿಕೆಗಳನ್ನು ನೀವು ಸಾಕಷ್ಟು ಅನಂದಿಸಲಿದ್ದೀರಿ. ನೀವು ದೇವಸ್ಥಾನಕ್ಕೆ ದಾನ ನೀಡಬಹುದು ಅಥವಾ ಸರ್ಕಾರೇತರ ಸಂಸ್ಥೆಯೊಂದನ್ನು ಸೇರಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು. ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಬುಧ ನಿಮ್ಮ ಒಂಬತ್ತನೇ ಮನೆಯಲ್ಲಿ ಇರಲಿದ್ದಾರೆ. ಇದರಿಂದಾಗಿ ನಿಮ್ಮ ತಂದೆಯ ಜೊತೆಗಿನ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ ಹಾಗೂ ಅವರಿಂದ ನೀವು ದೊಡ್ಡ ಮಟ್ಟದ ಲಾಭವನ್ನು ಗಳಿಸಲಿದ್ದೀರಿ. ಮಾರ್ಚ್‌ ಮತ್ತು ಮೇ ತಿಂಗಳುಗಳ ನಡುವಿನ ಸಮಯವು ಚೆನ್ನಾಗಿರಲಿದೆ. ಮೇ ತಿಂಗಳಿನಿಂದ ಜುಲೈವರೆಗಿನ ಸಮಯವು ಏರುಪೇರಿನಿಂದ ಕೂಡಿರಲಿದೆ. ಈ ಸಂದರ್ಭದಲ್ಲಿ ಕೌಟುಂಬಿಕ ಬದುಕಿನಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ತಾಯಿಯ ಆರೋಗ್ಯ ಕೆಡಬಹುದು. ಆದರೂ ಈ ಸಂದರ್ಭದಲ್ಲಿ ನೀವು ದೊಡ್ಡದಾದ ಆಸ್ತಿಯನ್ನು ಖರೀದಿಸಬಹುದು ಹಾಗೂ ರಿಯಲ್‌ ಎಸ್ಟೇಟ್​ಗೆ ಸಂಬಂಧಿಸಿದಂತೆ ಒಳ್ಳೆಯ ಯಶಸ್ಸು ದೊರೆಯಬಹುದು. ಆಗಸ್ಟ್‌ ಮತ್ತು ಅಕ್ಟೋಬರ್‌ ನಡುವೆ ನಿಮ್ಮ ರಾಶಿಯ ಅಧಿಪತಿಯು ಆರನೇ ಮನೆಯಲ್ಲಿರಲಿದ್ದು, ಈ ಕಾರಣಕ್ಕಾಗಿ ಕಾನೂನಿನ ವಿಚಾರಗಳಲ್ಲಿ ನೀವು ಸಂಪೂರ್ಣ ಯಶಸ್ಸನ್ನು ಗಳಿಸಲಿದ್ದೀರಿ. ಅಲ್ಲದೆ ನ್ಯಾಯಾಲಯದ ವಿಚಾರದ ಫಲಿತಾಂಶವು ನಿಮ್ಮ ಪರವಾಗಿ ಇರಲಿದೆ. ಈ ಸಂದರ್ಭದಲ್ಲಿ ನಿಮ್ಮ ಎದುರಾಳಿಗಳನ್ನು ನೀವು ಸದೆಬಡಿಯಲಿದ್ದೀರಿ. ಈ ಸಮಯವು ನಿಮ್ಮನ್ನು ಬಲಪಡಿಸಲಿದೆ. ನವೆಂಬರ್‌ ಮತ್ತು ಡಿಸೆಂಬರ್‌ ನಡುವೆ ಒಂದಷ್ಟು ಎಚ್ಚರಿಕೆ ವಹಿಸುವುದು ಒಳ್ಳೆಯದು. ಏಕೆಂದರೆ ಈ ಸಂದರ್ಭದಲ್ಲಿ ನಿಮ್ಮ ಕೆಲಸದಲ್ಲಿ ಏರುಪೇರು ಉಂಟಾಗಬಹುದು. ನಿಮಗೆ ಯಾವುದಾದರೂ ಪುರಸ್ಕಾರ ದೊರೆಯುವ ಸಾಧ್ಯತೆ ಇದೆ. ಪ್ರಯಾಣದ ವಿಚಾರದಲ್ಲಿ ಹೇಳುವುದಾದರೆ, ವರ್ಷದ ಆರಂಭಿಕ ಸಮಯವು ಅನುಕೂಲಕರ.

ವೃಷಭ: ವೃಷಭ ರಾಶಿಯವರಿಗೆ 2023ರ ಆರಂಭವು ಮಿಶ್ರ ಫಲಿತಾಂಶವನ್ನು ತರಲಿದೆ. ನಿಮ್ಮ ರಾಶಿಯ ಮೇಲೆ ಮಂಗಳನು ಪ್ರಭಾವ ಉಂಟು ಮಾಡುವ ಕಾರಣ ನಿಮ್ಮ ವರ್ತನೆಯಲ್ಲಿ ಕೋಪವನ್ನು ನೋಡಬಹುದು. ಇದರಿಂದಾಗಿ ನಿಮಗೆ ಒಂದಷ್ಟು ಸಮಸ್ಯೆಗಳು ಎದುರಾಗಬಹುದು. ನಿಮಗೆ ಮಾನಸಿಕ ಒತ್ತಡವು ಕಾಡಬಹುದು. ಆದರೆ ಮೆಲ್ಲನೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು, ನಿಮ್ಮ ಬದುಕಿನಲ್ಲಿ ಮುಂದೆ ಸಾಗಲಿದ್ದೀರಿ. ಈ ವರ್ಷದಲ್ಲಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಏರುಪೇರು ಉಂಟಾಗಬಹುದು. ಒಂದು ಕಡೆ ನಿಮಗೆ ಅದ್ಭುತ ಆರ್ಥಿಕ ಫಲಿತಾಂಶ ದೊರೆಯಲಿದೆ ಹಾಗೂ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಇನ್ನೊಂದೆಡೆ, ವರ್ಷದ ಕೊನೆಯ ಎರಡು ತಿಂಗಳುಗಳ ತನಕ ನಿಮ್ಮ ಖರ್ಚುವೆಚ್ಚಗಳ ದೀರ್ಘ ಪಟ್ಟಿಯು ಮುಂದುವರಿಯಲಿದೆ. ನಿಮಗೆ ಇಷ್ಟವಿರಲಿ, ಅಥವಾ ಇಷ್ಟವಿರದೆ ಇರಲಿ, ನೀವು ಖರ್ಚು ಮಾಡಲೇಬೇಕು. ಆದರೂ, ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳುಗಳಲ್ಲಿ ನಿಮ್ಮ ಮೊಗದಲ್ಲಿ ನಗು ಕಾಣಿಸಿಕೊಳ್ಳಲಿದೆ ಹಾಗೂ ನೀವು ಸದೃಢರಾಗಲಿದ್ದೀರಿ. ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ನೀವು ಕಾಯಿಲೆಗೆ ಬೀಳಬಹುದು ಮತ್ತು ಆಸ್ಪತ್ರೆಗೆ ಹೋಗಬೇಕಾದೀತು. ಪ್ರಯಾಣದ ವಿಚಾರದಲ್ಲಿ ಹೇಳುವುದಾದರೆ, ನೀವು ಈ ವರ್ಷದಲ್ಲಿ ದೀರ್ಘ ಪ್ರಯಾಣವನ್ನು ಮಾಡಬಹುದು. ವಿದೇಶಕ್ಕೆ ಪ್ರಯಾಣಿಸಲು ನಿಮಗೆ ಅವಕಾಶ ದೊರೆಯಬಹುದು. ಅಲ್ಲಿ ನಿಮಗೆ ದೀರ್ಘ ಕಾಲ ತಂಗಲು ಸಾಧ್ಯವಾಗಬಹುದು. ಅತ್ಯಂತ ದೂರದ ಊರುಗಳಿಗೆ ನೀವು ಪ್ರಯಾಣಿಸಬೇಕಾದ ಸನ್ನಿವೇಶ ಉಂಟಾಗಬಹುದು ಮತ್ತು ಈ ವರ್ಷದಲ್ಲಿ ನೀವು ಸಾಕಷ್ಟು ಪ್ರಯಾಣ ಮಾಡಬೇಕಾದೀತು. ವರ್ಷದ ಆರಂಭದಲ್ಲಿ ನೀವು ಒಂದಷ್ಟು ಪ್ರಯಾಣ ಮಾಡಬೇಕಾದೀತು. ನೀವು ಕಠಿಣ ಶ್ರಮಿಯಾಗಿದ್ದರೂ, ಈ ವರ್ಷ ಸಾಕಷ್ಟು ಬೆವರು ಸುರಿಸುವ ಅಗತ್ಯವಿದೆ. ನಿಮ್ಮ ಹಿಂದೆ ಇರುವ ಯಾವುದೇ ವಿಚಾರದ ಕುರಿತು ನೀವು ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದಾಗಿ ನಿಮಗೆ ದೈಹಿಕ ಆಯಾಸ ಉಂಟಾಗಲಿದ್ದು, ಪರಿಣಾಮವಾಗಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಈ ಎಲ್ಲಾ ಅಂಶಗಳನ್ನು ನೀವು ಪರಿಗಣಿಸಿದರೆ, ಈ ವರ್ಷವು ನಿಮಗೆ ಉತ್ತಮ ಸ್ಥಾನಮಾನವನ್ನು ಲಭಿಸಲಿದೆ. ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ನೀವು ಉತ್ತಮ ಬಂಧವನ್ನು ಕಾಪಾಡಿಕೊಳ್ಳಬೇಕು. ಕೆಲಸದ ಒತ್ತಡದ ಕಾರಣ ನೀವು ಕುಟುಂಬದ ಸದಸ್ಯರಿಂದ ದೂರವುಳಿಯಬಹುದು. ಹೀಗಾಗಿ ನೀವು ಅವರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಗದು.

ಮಿಥುನ: ಮಿಥುನ ರಾಶಿಯವರಿಗೆ 2023ನೇ ವರ್ಷವು ಸಾಕಷ್ಟು ಹೊಸ ವಿಚಾರಗಳನ್ನು ಹೊತ್ತು ತರಲಿದೆ. ಜನವರಿ ತಿಂಗಳಿನಿಂದಲೇ ನಿಮ್ಮ ಅದೃಷ್ಟವು ಚೆನ್ನಾಗಿರಲಿದೆ ಹಾಗೂ ಇದರ ಪ್ರಯೋಜನ ನಿಮಗೆ ದೊರೆಯಲಿದೆ. ಬಾಕಿ ಉಳಿದಿರುವ ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ ಹಾಗೂ ಆರ್ಥಿಕವಾಗಿ ನೀವು ಪ್ರಗತಿ ಸಾಧಿಸಲಿದ್ದೀರಿ. ಈ ವರ್ಷದಲ್ಲಿ ಕೌಟುಂಬಿಕ ಬದುಕು ಚೆನ್ನಾಗಿರಲಿದೆ ಹಾಗೂ ಕುಟುಂಬದ ಯಾವುದೇ ಮಂಗಳದಾಯಕ ಕೆಲಸವು ಅನ್ಯೋನ್ಯತೆಯ ಭಾವ ಮತ್ತು ಪ್ರೇಮವನ್ನು ವೃದ್ಧಿಸಲಿದೆ. ವರ್ಷದ ಆರಂಭದಲ್ಲಿ ಮಂಗಳನ ಪ್ರಭಾವವು ನಿಮ್ಮ ಕೌಟುಂಬಿಕ ಬದುಕಿನ ಮೇಲೆ ಉಂಟಾಗಬಹುದು. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಹೀಗಾಗಿ ನೀವು ಶಾಶ್ವತ ಆದಾಯ ಮೂಲವನ್ನು ಕಂಡುಹಿಡಿಯಬೇಕಾದೀತು. ವರ್ಷದ ಆರಂಭದಲ್ಲಿ ವಿದೇಶಕ್ಕೆ ಹೋಗಲು ನಿಮಗೆ ಅವಕಾಶ ದೊರೆಯಬಹುದು. ಕೆಲ ಜನರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆಗಾಗ್ಗೆ ಪ್ರಯಾಣಿಸಬಹುದು. ಈ ವರ್ಷದ ನಡುವಿನ ತಿಂಗಳುಗಳಲ್ಲಿ ನೀವು ಸಾಕಷ್ಟು ಪ್ರಯಾಣವನ್ನು ಮಾಡಬಹುದು. ನೀವು ನ್ಯಾಯಾಲಯದ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿದ್ದರೆ, ಈ ವರ್ಷದಲ್ಲಿ ಫಲಿತಾಂಶ ದೊರೆಯಬಹುದು. ಜನವರಿಯಲ್ಲಿ ಒಂದಷ್ಟು ತಾಳ್ಮೆಯನ್ನು ಕಾಪಾಡಿ. ಏಕೆಂದರೆ ಈ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗಬಹುದು. ತದನಂತರ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅದ್ಭುತ ಯಶಸ್ಸು ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ನಿರ್ಲಕ್ಷ್ಯ ತೋರಬೇಡಿ. ಇಲ್ಲದಿದ್ದರೆ ನೀವು ಸಮಸ್ಯೆ ಎದುರಿಸಬೇಕಾದೀತು. ವರ್ಷದ ಆರಂಭದಲ್ಲಿ ನಿಮ್ಮ ಗೆಳೆಯರ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದೆ. ನೀವು ಯಾವುದೇ ವ್ಯವಹಾರದಲ್ಲಿ ತೊಡಗಿಸಿಕೊಂಡಲ್ಲಿ, ಅವರ ನೆರವು ನಿಮಗೆ ಸಾಕಷ್ಟು ಪ್ರಯೋಜನಕಾರಿ ಎನಿಸಲಿದೆ. ಅಲ್ಲದೆ ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರಲಿದ್ದು, ಕಠಿಣ ಸವಾಲಿನ ಸಂದರ್ಭದಲ್ಲಿಯೂ ಅದು ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯಲಿದೆ. ನಿಮ್ಮ ಹಿರಿಯ ಒಡಹುಟ್ಟಿದವರೊಂದಿಗೆ ನೀವು ಉತ್ತಮ ಸಂಬಂಧವನ್ನು ಕಾಪಾಡಬೇಕು. ಈ ಸಂಬಂಧವು ಈ ವರ್ಷದಲ್ಲಿ ಹದಗೆಡುವ ಸಾಧ್ಯತೆ ಇದೆ.

ಕರ್ಕಾಟಕ: ಕರ್ಕಾಟಕ ರಾಶಿಯವರಿಗೆ 2023ನೇ ವರ್ಷವು ಅನುಕೂಲಕರ ಎನಿಸಲಿದೆ. ವರ್ಷದ ಆರಂಭದಿಂದಲೇ ಅದೃಷ್ಟವು ನಿಮ್ಮ ಜೊತೆಗಿರಲಿದೆ. ಹೀಗಾಗಿ ನಿಮ್ಮ ಅನೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಬಾಕಿ ಉಳಿದಿರುವ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ದೀರ್ಘ ಕಾಲದಿಂದ ನೀವು ಹೊಂದಿದ್ದ ಇಚ್ಛೆಯು ಈ ವರ್ಷದಲ್ಲಿ ಈಡೇರಲಿದೆ. ಈ ವರ್ಷದಲ್ಲಿ ನೀವು ಸಾಕಷ್ಟು ಪ್ರಯಾಣವನ್ನು ಮಾಡಬಹುದು. ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಬೆಳೆಸುವ ಅವಕಾಶಗಳು ದೊರೆಯಬಹುದು. ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ದೊರೆಯಲಿದೆ. ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ನಂಬಿಕೆ ಮತ್ತು ಭಕ್ತಿಯು ಹೆಚ್ಚಲಿದೆ. ಅಲ್ಲದೆ ಇದರಲ್ಲಿ ನೀವು ಸಕ್ರಿಯರಾಗಿ ಪಾಲ್ಗೊಳ್ಳಲಿದ್ದೀರಿ. ಇದರ ಜೊತೆಗೆ ನಿಮಗೆ ಗೌರವವೂ ದೊರೆಯಲಿದೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ಯಾವುದಾದರೂ ಸಂಸ್ಥೆಯನ್ನು ನೀವು ಸೇರಬಹುದು. ಇದರಿಂದಾಗಿ ಏನಾದರೂ ಹೊಸ ಕೆಲಸವನ್ನು ಮಾಡಲು ನಿಮಗೆ ಅವಕಾಶ ದೊರೆಯಬಹುದು ಹಾಗೂ ನಿಮ್ಮ ಸಾಮಾಜಿಕ ಸ್ಥಾನಮಾನದಲ್ಲಿ ವೃದ್ಧಿ ಉಂಟಾಗಲಿದೆ. ಈ ವರ್ಷ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ನೀವು ಈಗಾಗಲೇ ಅರ್ಜಿ ಸಲ್ಲಿಸದೆ ಇದ್ದಲ್ಲಿ ಈ ಕೆಲಸವನ್ನು ಬೇಗನೇ ಮಾಡಿ. ಇದರಿಂದ ನಿಮಗೆ ಯಶಸ್ಸು ದೊರೆಯಲಿದೆ. ಸದ್ಯಕ್ಕೆ ನಿಮ್ಮ ಆದಾಯವು ಚೆನ್ನಾಗಿರಲಿದೆ ಹಾಗೂ ನಿಮ್ಮ ಆತ್ಮವಿಶ್ವಾಸವು ಸದೃಢವಾಗಿರಲಿದೆ. ಇದರಿಂದಾಗಿ ನೀವು ಯಾವುದಾದರೂ ಹೊಸ ಕೆಲಸಕ್ಕೆ ಕೈ ಹಾಕಬಹುದು ಹಾಗೂ ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಕೌಟುಂಬಿಕ ಬದುಕಿನಲ್ಲಿ ಅತೃಪ್ತಿ ನೆಲೆಸಲಿದೆ. ಕುಟುಂಬದ ನಡುವೆಯೇ ಇದ್ದರೂ ನೀವು ಪ್ರತ್ಯೇಕಗೊಂಡಂತೆ ಅಥವಾ ಸಂಬಂಧ ಕಡಿದುಕೊಂಡಂತೆ ನಿಮಗೆ ಭಾಸವಾಗಬಹುದು. ಕುಟುಂಬದ ವಿಚಾರದಲ್ಲಿ ನಿಮ್ಮ ಮನಸ್ಸು ಹೆಚ್ಚು ಓಡದೇ ಇರಬಹುದು. ಅಲ್ಲದೆ ಕೇವಲ ಔಪಚಾರಿಕತೆಯನ್ನು ಮುಗಿಸುವುದಕ್ಕಾಗಿ ನೀವು ಮನೆಗೆ ಭೇಟಿ ನೀಡಬಹುದು. ನಿಮ್ಮ ಈ ವರ್ತನೆಯು ಮನೆಯಲ್ಲಿರುವ ಜನರಿಗೆ ಕೊಂಚ ವಕ್ರವಾಗಿ ಕಾಣಿಸಿಕೊಳ್ಳಬಹುದು ಹಾಗೂ ಈ ಕುರಿತು ನಿಮಗೆ ಅವರು ದೂರು ನೀಡಬಹುದು. ಸರ್ಕಾರಿ ಕ್ಷೇತ್ರದೊಂದಿಗೆ ನೀವು ಉತ್ತಮ ಸಂಪರ್ಕವನ್ನು ಸಾಧಿಸಬಹುದು. ಕೆಲ ಗೆಳೆಯರ ನೆರವು ನಿಮಗೆ ದೊರೆಯಲಿದೆ. ಇದು ನಿಮ್ಮ ಕೆಲಸದಲ್ಲಿ ಮುಂದೆ ಸಾಗಲು ನಿಮಗೆ ನೆರವಾಗಲಿದೆ. ಕುಟುಂಬದ ವಿಚಾರದಲ್ಲಿಯೂ ಅವರಿಗೆ ನಿಮಗೆ ನೆರವು ನೀಡಲಿದ್ದಾರೆ.

ಸಿಂಹ: ಸಿಂಹ ರಾಶಿಯವರಿಗೆ ಈ ವರ್ಷವು ಸಾಕಷ್ಟು ಹೊಸ ವಿಚಾರಗಳನ್ನು ಹೊತ್ತು ತರಲಿದೆ. ವರ್ಷದ ಆರಂಭದಿಂದಲೇ ನಿಮ್ಮ ಆತ್ಮವಿಶ್ವಾಸವು ಚೆನ್ನಾಗಿರಲಿದೆ. ದೇವರ ಮೇಲಿನ ನಿಮ್ಮ ನಂಬಿಕೆಯು ಹೆಚ್ಚಲಿದೆ ಹಾಗೂ ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಇಡೀ ವರ್ಷದಲ್ಲಿ ನೀವು ಒಂದಷ್ಟು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಹೀಗಾಗಿ ಸಮಾಜದಲ್ಲಿ ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ಅಲ್ಲದೆ ಅನೇಕ ಗಣ್ಯರನ್ನು ಭೇಟಿಯಾಗುವ ಅವಕಾಶ ನಿಮಗೆ ಲಭಿಸಬಹುದು. ಕೆಲವೊಂದು ಪ್ರಬಲ ವ್ಯಕ್ತಿಗಳೊಂದಿಗೆ ನೀವು ಸಂಪರ್ಕ ಸಾಧಿಸಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ನೀವು ಒಳ್ಳೆಯ ಲಾಭವನ್ನು ಪಡೆಯಬಹುದು. ಈ ವರ್ಷವು ಹೂಡಿಕೆಗೆ ಅನುಕೂಲಕರ. ಹೂಡಿಕೆಯ ಮೇಲೆ ನೀವು ಒಳ್ಳೆಯ ಲಾಭವನ್ನು ಪಡೆಯಲಿದ್ದೀರಿ. ಆದರೆ ದಿನದ ವ್ಯವಹಾರಕ್ಕಿಂತಲೂ ದೀರ್ಘಕಾಲೀನ ಹೂಡಿಕೆಯು ಹೆಚ್ಚಿನ ಲಾಭ ನೀಡಲಿದೆ. ಹೀಗಾಗಿ ಅಂತಹ ವಿಚಾರಗಳಿಗೆ ಮಾತ್ರವೇ ಗಮನ ನೀಡಿ. ವರ್ಷದ ಆರಂಭಿಕ ದಿನಗಳಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಆತ್ಮೀಯರೊಂದಿಗೆ ನೀವು ಕಾಲ ಕಳೆಯಬಹುದು. ಇದು ನಿಮಗೆ ಹೊಸ ಚೈತನ್ಯವನ್ನು ನೀಡಲಿದೆ. ಬದುಕಿನ ಎಲ್ಲಾ ಸಮಸ್ಯೆಗಳನ್ನು ಮರೆತು ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಇದು ಸಹಾಯ ಮಾಡಲಿದೆ. ಈ ವರ್ಷದಲ್ಲಿ ಸಾಕಷ್ಟು ಪ್ರಯಾಣ ಮಾಡುವ ಅವಕಾಶ ನಿಮಗೆ ಲಭಿಸಬಹುದು. ದೀರ್ಘ ಪ್ರಯಾಣ (ಮುಖ್ಯವಾಗಿ ವಿದೇಶಿ ಪ್ರಯಾಣ) ಮಾಡಲು ನಿಮಗೆ ಅವಕಾಶ ಲಭಿಸಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಒಂದಷ್ಟು ದೌರ್ಬಲ್ಯ ಕಾಡಬಹುದು. ಹೀಗಾಗಿ ಆರೋಗ್ಯದ ಕುರಿತು ನೀವು ಸಾಕಷ್ಟು ಕಾಳಜಿ ವಹಿಸಬೇಕು. ಸಣ್ಣ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ಉಲ್ಬಣಗೊಳ್ಳಬಹುದು. ಹೀಗಾಗಿ ನಿಮ್ಮ ಕುರಿತು ಕಾಳಜಿ ವಹಿಸಿ. ವೈಯಕ್ತಿಕ ಆರೈಕೆಗೆ ಗಮನ ನೀಡಿ. ವರ್ಷದ ನಡುವಿನ ತಿಂಗಳುಗಳಲ್ಲಿ ಶಾಪಿಂಗ್‌ ಮಾಡಲು ನಿಮಗೆ ಒಳ್ಳೆಯ ಅವಕಾಶಗಳು ಲಭಿಸಲಿವೆ. ರಿಯಾಯಿತಿ ದರದಲ್ಲಿ ದುಬಾರಿ ವಸ್ತುಗಳು ನಿಮಗೆ ಲಭಿಸಿದಾಗ ನೀವು ಅದನ್ನು ಖರೀದಿಸಲಿದ್ದೀರಿ. ದೀರ್ಘ ಕಾಲದಿಂದ ನೀವು ಹೊಂದಿದ್ದ ಬಯಕೆಗಳು ಈ ವರ್ಷದಲ್ಲಿ ಈಡೇರಲಿವೆ. ಹೀಗಾಗಿ ನಿಮ್ಮ ಸಂತಸಕ್ಕೆ ಪಾರವೇ ಇರದು.

ಕನ್ಯಾ: ಕನ್ಯಾ ರಾಶಿಯವರಿಗೆ 2023ನೇ ವರ್ಷವು ಮಿಶ್ರ ಫಲಿತಾಂಶ ತರಲಿದೆ. ನಿಮ್ಮ ಕುಟುಂಬದ ಕುರಿತು ನಿಮ್ಮನ್ನು ಚಿಂತೆಯು ಕಾಡಬಹುದು. ನಿಮ್ಮ ಕುಟುಂಬದ ವಾತಾವರಣವನ್ನು ಕೆಡಿಸುವ ಅನೇಕ ಘಟನೆಗಳು ಸಂಭವಿಸಬಹುದು. ನಿಮ್ಮ ವರ್ತನೆಯು ಜನರಿಗೆ ಅರ್ಥವಾಗದೇ ಇರಬಹುದು. ನೀವು ಏನನ್ನು ಹೇಳಲು ಮತ್ತು ಮಾಡಲು ಇಚ್ಛಿಸುತ್ತೀರಿ ಎನ್ನುವುದು ಅವರಿಗೆ ಅರ್ಥವಾಗದೇ ಇರಬಹುದು. ನಿಮ್ಮ ಮಾತುಗಳು ಮತ್ತು ಕೃತಿಯ ನಡುವೆ ವ್ಯತ್ಯಾಸ ಇರಬಹುದು. ಹೀಗಾಗಿ ನಿಮ್ಮ ಕುಟುಂಬದ ಸಂಬಂಧವು ಹದಗೆಡುವ ಸಾಧ್ಯತೆ ಇದೆ. ಈ ಎಲ್ಲಾ ವಿಚಾರಗಳಿಗೆ ಗಮನ ನೀಡಿ. ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ದೊಡ್ಡ ಆಸ್ತಿ ಖರೀದಿಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವರ್ಷದ ನಡುವೆ, ಜೀವನ ಸಂಗಾತಿಯ ನೆರವಿನಿಂದ ದೊಡ್ಡ ವಾಹನವನ್ನು ಖರೀದಿಸುವ ಅವಕಾಶ ದೊರೆಯಬಹುದು. ಅತ್ತೆ ಮಾವಂದಿರೊಂದಿಗೆ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ವರ್ಷದ ಆರಂಭವನ್ನು ಸಾಕಷ್ಟು ಸಹನೆ ಮತ್ತು ತಾಳ್ಮೆಯಿಂದ ಕಳೆಯಿರಿ. ಪ್ರಯಾಣದ ವಿಚಾರದಲ್ಲಿ ಹೇಳುವುದಾದರೆ, ಏಪ್ರಿಲ್‌ ತಿಂಗಳು ಈ ವಿಚಾರದಲ್ಲಿ ಅತ್ಯುತ್ತಮ. ತದನಂತರ, ಅಕ್ಟೋಬರ್‌ ಮತ್ತು ನವಂಬರ್‌ ತಿಂಗಳುಗಳ ಪ್ರಯಾಣವು ನಿಮಗೆ ಸಾಕಷ್ಟು ಸಂತಸ ನೀಡಲಿದೆ. ನೀವು ಈ ಪ್ರಯಾಣದಿಂದ ಸಾಕಷ್ಟು ಸಂತಸ ಪಡೆಯಲಿದ್ದೀರಿ. ವರ್ಷದ ಆರಂಭದಿಂದಲೇ ನೀವು ಗೆಳೆಯರ ನೆರವನ್ನು ಪಡೆಯಲಿದ್ದೀರಿ. ವರ್ಷದ ಆರಂಭದಲ್ಲಿ ಸರ್ಕಾರದಿಂದ ಒಂದಷ್ಟು ಪ್ರಯೋಜನ ಲಭಿಸಬಹುದು. ನಿಮ್ಮ ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿ. ಏಕೆಂದರೆ ಈ ವರ್ಷದಲ್ಲಿ ಅವರೊಂದಿಗಿನ ಸಂಬಂಧ ಹದಗೆಡುವ ಸಾಧ್ಯತೆ ಇದೆ. ಸದ್ಯಕ್ಕೆ ನಿಮ್ಮ ಆರೋಗ್ಯದ ಕುರಿತು ನೀವು ನಿರ್ಲಕ್ಷ್ಯ ತೋರಬಹುದು. ಹೀಗಾಗಿ ಎಚ್ಚರಿಕೆ ವಹಿಸಿ. ಈ ವರ್ಷದಲ್ಲಿ ನೀವು ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಹೊಸ ವಿಚಾರಗಳು ಹೊಳೆಯಬಹುದು. ಇದರಿಂದಾಗಿ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ಉದ್ಯೋಗದಲ್ಲಿರುವ ಜನರು ವ್ಯವಹಾರಕ್ಕೆ ಕಾಲಿಡಲು ಯತ್ನಿಸಬಹುದು. ಆದರೆ ಸದ್ಯಕ್ಕೆ ಕೆಲಸದಲ್ಲೇ ಮುಂದುವರಿಯಿರಿ. ನೀವು ವ್ಯವಹಾರವನ್ನು ನಡೆಸಲು ಆಸಕ್ತಿ ಹೊಂದಿದ್ದರೆ, ಕೆಲಸದ ಜೊತೆಗೆಯೇ ವ್ಯವಹಾರವನ್ನು ನಡೆಸಿ.

ತುಲಾ: ತುಲಾ ರಾಶಿಯವರಿಗೆ 2023ನೇ ವರ್ಷವು ಅತ್ಯಂತ ಮಂಗಳದಾಯಕ ಸುದ್ದಿಯನ್ನು ತರಲಿದೆ. ನಿಮ್ಮ ವೃತ್ತಿಯಲ್ಲಿ ನೆಲೆಯೂರಲು ಮತ್ತು ನಿಮ್ಮ ಯೋಜನೆಗಳನ್ನು ಯಶಸ್ವಿಗೊಳಿಸಲು ನಿಮಗೆ ಅವಕಾಶ ದೊರೆಯಲಿದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದ್ದಲ್ಲಿ, ಮುಂದೆ ಹೋಗಲು ಈ ವರ್ಷದಲ್ಲಿ ನಿಮಗೆ ಎಲ್ಲಾ ಅವಕಾಶ ದೊರೆಯಲಿದೆ. ಕೌಟುಂಬಿಕ ಬದುಕಿನಲ್ಲಿ ನಿಮಗೆ ಸಂತಸ ದೊರೆಯಲಿದೆ. ಕೆಲಸದಲ್ಲಿ ತೊಡಗಿಸಿಕೊಂಡಿದ್ದರೂ ನಿಮ್ಮ ಕುಟುಂಬಕ್ಕೆ ನೀವು ಸಂಪೂರ್ಣ ಸಮಯ ನೀಡಲಿದ್ದೀರಿ ಹಾಗೂ ಕುಟುಂಬದ ಒಳಿತುಗಳು ಮತ್ತು ಕೆಡುಕುಗಳಲ್ಲಿ ನೀವು ಅವರ ಜೊತೆ ನಿಲ್ಲಲಿದ್ದೀರಿ. ಇದು ಕುಟುಂಬದ ಬಂಧವನ್ನು ಗಟ್ಟಿಗೊಳಿಸಲಿದೆ. ಕುಟುಂಬದಲ್ಲಿ ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ಪಡೆಯುವುದರಿಂದ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ವರ್ಷದ ಆರಂಭದಲ್ಲಿ ನಿಮ್ಮ ತಾಯಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ಅವರ ಕುರಿತು ಕಾಳಜಿ ವಹಿಸಿ. ಪ್ರಯಾಣದ ವಿಚಾರದಲ್ಲಿ ಹೇಳುವುದಾದರೆ, ಈ ವರ್ಷದಲ್ಲಿ ನೀವು ಮಧ್ಯಮ ಅಂತರದ ಪ್ರಯಾಣವನ್ನು ಮಾಡಬಹುದು. ಈ ವರ್ಷದಲ್ಲಿ ನಿಮ್ಮ ಬೊಜ್ಜಿಗೆ ನೀವು ಗಮನ ನೀಡಬೇಕು. ಏಕೆಂದರೆ, ಆಹಾರದಲ್ಲಿ ಪೌಷ್ಠಿಕಾಂಶಗಳ ಕೊರತೆ ಹಾಗೂ ಕೊಬ್ಬಿನ ಆಹಾರದ ಪರಿಣಾಮವು ಕೊಲೆಸ್ಟೊರಾಲ್‌ ಮತ್ತು ಬೊಜ್ಜನ್ನು ಹೆಚ್ಚಿಸಬಹುದು. ಕಾನೂನಿನ ಕ್ಷೇತ್ರದಲ್ಲಿ ನೀವು ಜ್ಞಾನವನ್ನು ಹೊಂದಿದ್ದರೆ ಈ ವರ್ಷದಲ್ಲಿ ನಿಮಗೆ ಸಾಕಷ್ಟು ಯಶಸ್ಸು ದೊರೆಯಲಿದೆ. ನಿಮಗೆ ಗೆಳೆಯರ ಸಂಪೂರ್ಣ ಬೆಂಬಲ ದೊರೆಯಲಿದೆ. ಅಲ್ಲದೆ ನಿಮ್ಮ ಬದುಕಿನಲ್ಲಿ ಅವರು ನಿಮ್ಮ ಜೊತೆ ನಿಲ್ಲಲಿದ್ದಾರೆ. ಅಲ್ಲದೆ ಹೊಸ ಕ್ಷೇತ್ರದಲ್ಲಿ ನಿಮ್ಮ ಅದೃಷ್ಟವನ್ನು ನೀವು ಪರೀಕ್ಷಿಸಬಹುದು. ಈ ವರ್ಷದಲ್ಲಿ ನೀವು ನಿಮ್ಮ ಮನಸ್ಸಿನ ಭಾವನೆಗಳನ್ನು ಅದುಮಿಟ್ಟುಕೊಳ್ಳಲಿದ್ದೀರಿ ಹಾಗೂ ಬದುಕಿನಲ್ಲಿ ಸಂತುಲನಕ್ಕೆ ಪ್ರಾಮುಖ್ಯತೆ ನೀಡಲಿದ್ದೀರಿ. ಅನೇಕ ಬಾರಿ ನಿಮಗೆಯೇ ನೀವು ಅನ್ಯಾಯ ಮಾಡಬಹುದು ಹಾಗೂ ಆರೋಗ್ಯವನ್ನು ನಿರ್ಲಕ್ಷಿಸಬಹುದು. ಇದರಿಂದಾಗಿ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಈ ವರ್ಷದಲ್ಲಿ ಸ್ಥಾನ ಬದಲಾವಣೆ ಮಾಡುವ ಸಾಧ್ಯತೆ ಇದೆ. ಆಸ್ತಿ ಖರೀದಿಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ರಿಯಲ್‌ ಎಸ್ಟೇಟ್‌ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ.

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ 2023ನೇ ವರ್ಷವು ಸಂಪೂರ್ಣವಾಗಿ ಸಾಮರಸ್ಯದ ವರ್ಷವೆನಿಸಲಿದೆ. ಈ ವರ್ಷದಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಅಲ್ಲದೆ ಏನಾದರೂ ಹೊಸತನ್ನು ಮಾಡುವ ಇಚ್ಛೆಯು ಮನಸ್ಸಿನಲ್ಲಿ ಮೂಡಬಹುದು. ಈ ವರ್ಷದಲ್ಲಿ ನೀವು ಎರಡು ವಿಚಾರಗಳ ಕುರಿತು ಗಮನ ನೀಡಬೇಕು. ಮೊದಲನೆಯದಾಗಿ ಕೋಪಗೊಳ್ಳಬೇಡಿ. ಇಲ್ಲದಿದ್ದರೆ ನಿಮ್ಮ ಪ್ರಮುಖ ಕೆಲಸವು ಈ ವರ್ಷದಲ್ಲಿ ಬಾಕಿ ಉಳಿಯಬಹುದು. ಎರಡನೆಯದಾಗಿ, ನಿಮ್ಮ ವಿಚಾರಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಅವರು ನಿಮ್ಮ ಮಾತಿನ ದುರುಪಯೋಗವನ್ನು ಮಾಡಿಕೊಳ್ಳಬಹುದು. ಈ ವರ್ಷದಲ್ಲಿ ನಿಮ್ಮ ಎದುರಾಳಿಗಳು ನಿಮಗೆ ಒಂದು ಹಂತದ ತನಕ ತೊಂದರೆ ನೀಡಬಹುದು. ಹೀಗಾಗಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಆದರೂ ನೀವು ಚಿಂತಿಸುವ ಅಗತ್ಯವಿಲ್ಲ. ಅವರು ಇಚ್ಛಿಸಿದರೂ ನಿಮಗೆ ಯಾವುದೇ ಹಾನಿಯನ್ನುಂಟು ಮಾಡಲು ಅವರಿಗೆ ಆಗದು. ಅಂತಿಮವಾಗಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ಕೆಲಸದಲ್ಲಿ ನೀವು ಉತ್ತಮ ಸ್ಥಾನವನ್ನು ಪಡೆಯಲಿದ್ದೀರಿ. ನಿಮ್ಮ ಅನಗತ್ಯ ಖರ್ಚುವೆಚ್ಚಗಳಿಗೆ ನೀವು ಗಮನ ನೀಡಬೇಕು. ಏಕೆಂದರೆ ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಇದು ಒತ್ತಡವನ್ನು ಬೀರಬಹುದು. ಕುಟುಂಬದ ಹಿರಿಯರ ಅಶೀರ್ವಾದದಿಂದ, ಬಾಕಿ ಉಳಿದಿರುವ ನಿಮ್ಮ ಅನೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಇದರಿಂದಾಗಿ ನಿಮಗೆ ಹಣಕಾಸಿನ ಲಾಭ ಮತ್ತು ಸಮಾಜದಲ್ಲಿ ಉತ್ತಮ ಗೌರವ ದೊರೆಯಲಿದೆ. ಈ ವರ್ಷದಲ್ಲಿ ನೀವು ಕೆಲವೊಂದು ದೀರ್ಘ ಪ್ರಯಾಣವನ್ನು ಕೈಗೊಳ್ಳಬಹುದು. ಇದು ನಿಮ್ಮ ಭವಿಷ್ಯಕ್ಕೆ ಅತ್ಯಂತ ನಿರ್ಣಾಯಕ ಎನಿಸಲಿದೆ. ಈ ವರ್ಷ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಮನೆಯಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳು ನಡೆಯಬಹುದು. ಇದರಿಂದಾಗಿ ಕುಟುಂಬದ ವಾತಾವರಣವು ಧಾರ್ಮಿಕತೆ ಮತ್ತು ಶಾಂತಿಯಿಂದ ಕೂಡಿರಲಿದೆ. ಏನಾದರೂ ಹೊಸತನ್ನು ಕಲಿಯುವ ಆಸೆಯು ನಿಮ್ಮ ಮನಸ್ಸಿನಲ್ಲಿ ಚಿಗುರಲಿದೆ. ಹೀಗಾಗಿ ಏನಾದರೂ ಹೊಸತನ್ನು ಕಲಿಯಲು ನೀವು ಯೋಚನೆ ರೂಪಿಸಬಹುದು. ಅವುಗಳನ್ನು ಈಡೇರಿಸುವ ಮೂಲಕ ನೀವು ಸಂತಸ ಅನುಭವಿಸಲಿದ್ದೀರಿ ಹಾಗೂ ಬದುಕಿನಲ್ಲಿ ಮುಂದೆ ಸಾಗುವ ಅವಕಾಶವನ್ನು ಪಡೆಯಲಿದ್ದೀರಿ.

ಧನು: ಧನು ರಾಶಿಯವರಿಗೆ 2023ನೇ ವರ್ಷವು ಸಾಮರಸ್ಯವನ್ನು ತರಲಿದೆ. ಬದುಕಿನ ಅನೇಕ ಕ್ಷೇತ್ರಗಳಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸವು ಉತ್ತುಂಗಕ್ಕೆ ಏರಲಿದೆ. ಆದರೆ ಇದು ನಿಮ್ಮ ಅಹಂಗೆ ಕಾರಣವಾಗದಂತೆ ನೋಡಿಕೊಳ್ಳಿ ಹಾಗೂ ನಿಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸಿ. ಹೀಗೆ ಮಾಡುವುದರ ಮೂಲಕ ನೀವು ಈ ವರ್ಷದಲ್ಲಿ ಇತರ ಕ್ಷೇತ್ರಗಳಲ್ಲಿ ಹೆಸರು ಮತ್ತು ಸಂಪತ್ತನ್ನು ಗಳಿಸಲಿದ್ದೀರಿ. ಕೆಲ ಕಾರಣಗಳಿಗಾಗಿ ನಿಮಗೆ ಪುರಸ್ಕಾರ ದೊರೆಯಲಿದೆ. ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕೆಲಸದಲ್ಲಿ ನೀವು ಆಸಕ್ತಿ ತೋರಲಿದ್ದೀರಿ. ಸೇವೆ ಮಾಡುವುದರಿಂದ ಹಾಗೂ ಜನರಿಗೆ ಸಹಾಯ ಮಾಡುವುದರಿಂದ ಈ ವರ್ಷದಲ್ಲಿ ನಿಮಗೆ ಸಂತಸ ದೊರೆಯಲಿದೆ. ಇದು ನಿಮ್ಮಲ್ಲಿ ನಿಸ್ವಾರ್ಥ ಸೇವೆಯ ಚೈತನ್ಯವನ್ನು ಇನ್ನಷ್ಟು ವೃದ್ಧಿಸಲಿದೆ. ಇದರಿಂದಾಗಿ ನಿಮಗೆ ಸಂತಸ ದೊರೆಯಲಿದೆ. ಈ ವರ್ಷದಲ್ಲಿ ನೀವು ಎಂದಿನಂತೆ ಪ್ರಯಾಣಿಸಲಿದ್ದೀರಿ. ವಿಪರೀತವಾಗಿ ಪ್ರಯಾಣಿಸಬೇಕಾದ ಸಾಧ್ಯತೆಗಳು ಕಡಿಮೆ. ಇದು ನಿಮ್ಮ ಆರ್ಥಿಕ ವೆಚ್ಚವನ್ನು ತಗ್ಗಿಸಲಿದೆ. ಹೀಗಾಗಿ ವರ್ಷಾಂತ್ಯದೊಳಗೆ ಹಣವನ್ನು ಚೆನ್ನಾಗಿ ಕ್ರೋಢೀಕರಿಸುವ ಅವಕಾಶ ನಿಮಗೆ ಲಭಿಸಲಿದೆ. ಈ ವರ್ಷದಲ್ಲಿ ನೀವು ಸಹೋದರರು ಮತ್ತು ಸಹೋದರಿಯರ ವಿಶೇಷ ಬೆಂಬಲವನ್ನು ಪಡೆಯಲಿದ್ದೀರಿ. ಇದರಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಅಗತ್ಯವಿದ್ದಲ್ಲಿ ಅವರು ನಿಮಗೆ ಹಣಕಾಸಿನ ನೆರವನ್ನು ಒದಗಿಸಬಹುದು. ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದೆ ಹಾಗೂ ಹಣಕಾಸಿನ ಸವಾಲುಗಳು ಉದ್ಭವಿಸುವುದಿಲ್ಲ. ವರ್ಷದಲ್ಲಿ ನೀವು ಸಾಕಷ್ಟು ಆತ್ಮಸ್ಥೈರ್ಯದಿಂದ ಕೆಲಸ ಮಾಡಲಿದ್ದೀರಿ. ಅಲ್ಲದೆ ವ್ಯವಹಾರದಲ್ಲಿ ಹೆಚ್ಚಿನ ಅಪಾಯವನ್ನು ಎದುರಿಸುವುದಿಲ್ಲ. ನಿಮ್ಮ ಮಕ್ಕಳಿಗೆ, ಈ ವರ್ಷವು ಸಾಕಷ್ಟು ಏರುಪೇರಿನಿಂದ ಕೂಡಿರಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ವರ್ಷದಲ್ಲಿ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಈ ಕುರಿತು ಎಚ್ಚರಿಕೆಯಿಂದ ಇರಿ. ನೀವು ನೇರವಾಗಿ ಮಾತನಾಡಬಹುದು. ಅದರೆ ನೇರವಾಗಿ ಮಾತನಾಡುವುದು ಕಹಿ ಎನಿಸಬಹುದು. ಅವರನ್ನು ಮನವೊಲಿಸುವ ಜವಾಬ್ದಾರಿಯು ನಿಮ್ಮ ಹೆಗಲ ಮೇಲಿರಲಿದೆ. ಏಕೆಂದರೆ ಸಂಬಂಧವನ್ನು ಕಾಪಾಡುವುದು ತುಂಬಾ ಪ್ರಮುಖವಾದುದು.

ಮಕರ: ಮಕರ ರಾಶಿಯವರು ತಮ್ಮ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ ಹಾಗೂ ಸ್ವಲ್ಪ ಸ್ವಾರ್ಥಿಯಾಗಿರುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜ. ಆದರೆ ಅವರು ಸಮಾಜವನ್ನು ಬದಲಾಯಿಸಲು ಬಂದಾಗ ಅವರೂ ಸಹ ಬದಲಾಗುತ್ತಾರೆ. ಈ ವರ್ಷದಲ್ಲಿ ನಿಮ್ಮ ಬದುಕಿನಲ್ಲಿಯೂ ಇದೇ ರೀತಿ ಸಂಭವಿಸಲಿದೆ. ಯಾವುದೋ ಒಂದು ವಿಚಾರವು ನಿಮ್ಮ ಮನಸ್ಸನ್ನು ಕಲಕುತ್ತಿರಬಹುದು. ಈ ಕಾರಣಕ್ಕಾಗಿ ನೀವು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದ್ದೀರಿ ಹಾಗೂ ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈ ವರ್ಷದಲ್ಲಿ ಪ್ರಯಾಣಿಸುವ ಕುರಿತು ನೀವು ಹೆಚ್ಚೇನೂ ಯೋಚಿಸಬೇಕಾದ ಅಗತ್ಯವಿಲ್ಲ. ಹೆಚ್ಚಿನ ಕಾಲ ಮನೆಯಿಂದ ಹೊರಗೆ ನಿಲ್ಲುವ ಮೂಲಕ ನೀವು ಯಶಸ್ಸನ್ನು ಪಡೆಯಲಿದ್ದೀರಿ. ನಿಮ್ಮದೇ ಸ್ವಂತ ಮನೆಯಲ್ಲಿ ನೀವು ವಾಸಿಸುತ್ತಿದ್ದರೆ, ಕೆಲಸಕ್ಕೆ ಸಂಬಂಧಿಸಿದ ಇತರ ಚಟುವಟಿಕೆಗಳ ಕಾರಣ ಕುಟುಂಬದಿಂದ ದೂರಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗಬಹುದು. ಆದರೆ ಇದರಿಂದ ನಿಮಗೆ ಲಾಭ ಉಂಟಾಗಲಿದೆ. ವರ್ಷದ ಆರಂಭದಲ್ಲಿ ವಿದೇಶಕ್ಕೆ ಪ್ರಯಾಣಿಸುವ ಅವಕಾಶಗಳು ಲಭಿಸಬಹುದು. ಹೀಗಾಗಿ ಈ ಅವಕಾಶವನ್ನು ಕೈ ಚೆಲ್ಲಬೇಡಿ. ಅನೇಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಈ ವರ್ಷದಲ್ಲಿ ನಿಮಗೆ ಅವಕಾಶ ಲಭಿಸಲಿದೆ. ನಿಮ್ಮ ವೃತ್ತಿಯಲ್ಲಿ ಸುಧಾರಣೆ ತರಲು ನೀವು ಯತ್ನಿಸಬೇಕು. ಫೆಬ್ರುವರಿ ಮತ್ತು ಮಾರ್ಚ್‌ ನಡುವೆ ನೀವು ಹೊಸ ಎಲೆಕ್ಟ್ರಾನಿಕ್‌ ಸಾಧನ ಅಥವಾ ಮೊಬೈಲ್‌ ಅನ್ನು ಖರೀದಿಸಬಹುದು. ಯಾವುದೇ ಮಂಗಳದಾಯಕ ಕೆಲಸ, ಪೂಜೆ-ಪುನಸ್ಕಾರ ಇತ್ಯಾದಿಗಳು ಕುಟುಂಬದಲ್ಲಿ ನಡೆಯಬಹುದು. ಮುಖ್ಯವಾಗಿ ಸೆಪ್ಟೆಂಬರ್‌ - ಅಕ್ಟೋಬರ್‌ ನಲ್ಲಿ ಮನೆಯಲ್ಲಿ ಏನಾದರೂ ಶುಭ ಸುದ್ದಿ ಬರುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿ ಭೌತಿಕ ತೃಪ್ತಿಯ ಇಚ್ಛೆ ಕಾಣಿಸಿಕೊಳ್ಳಬಹುದು. ಆದರೆ ಕೆಲವೊಮ್ಮೆ ನೀವು ಸನ್ಯಾಸಿಯಂತೆ ವರ್ತಿಸಬಹುದು. ಅಲ್ಲದೆ ಜನನಿಬಿಡ ಪ್ರದೇಶದಲ್ಲಿ ನಿಮಗೆ ಗಮನ ಕೇಂದ್ರೀಕರಿಸಲು ಕಷ್ಟಕರವಾದೀತು. ಹೀಗಾಗಿ ನಿಮ್ಮ ಕುರಿತು ಕಾಳಜಿ ವಹಿಸಲು ಯತ್ನಿಸಿ ಹಾಗೂ ಈ ವಿಚಾರವು ನಿಮಗೆ ಹೆಚ್ಚು ನಷ್ಟ ಉಂಟಾಗದಂತೆ ನೋಡಿಕೊಳ್ಳಿ. ನೀವು ಹೆಚ್ಚು ನಷ್ಟ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ತಂದೆಯೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಇದನ್ನು ಗಮನದಲ್ಲಿಟ್ಟುಕೊಳ್ಳಿ.

ಕುಂಭ: ಕುಂಭ ರಾಶಿಯವರಿಗೆ 2023 ನೇ ವರ್ಷದ ಕೆಲವೊಂದು ಶುಭ ಸುದ್ದಿಗಳನ್ನು ತರಲಿದೆ. ಆದರೆ ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಕುರಿತು ಗರಿಷ್ಠ ಕಾಳಜಿ ವಹಿಸಿ. ನಿಮ್ಮ ಆರೋಗ್ಯಕ್ಕೆ ನೀವು ಗಮನ ನೀಡದೆ ಇದ್ದರೆ ನೀವು ಕಾಯಿಲೆಗೆ ತುತ್ತಾಗಬಹುದು ಹಾಗೂ ಆರೋಗ್ಯವು ಹದಗೆಡಬಹುದು. ಇದರಿಂದಾಗಿ ನೀವು ಆಸ್ಪತ್ರೆಗೆ ಭೇಟಿ ನೀಡಬೇಕಾದೀತು. ಸದ್ಯಕ್ಕೆ ನಿಮ್ಮ ಆದಾಯದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಉಂಟಾಗಲಿದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ನೀವು ಉದ್ಯೋಗದಲ್ಲಿದ್ದರೂ, ನಿಮಗೆ ಭಡ್ತಿ ದೊರೆಯಬಹುದು ಹಾಗೂ ನಿಮ್ಮ ಸಂಬಳದಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ವ್ಯವಹಾರದಲ್ಲಿ ತೊಡಗಿಕೊಂಡಿದ್ದರೆ, ನಿಮ್ಮ ಲಾಭದಲ್ಲಿ ಹೆಚ್ಚಳ ಉಂಟಾಗಲಿದೆ. ಸರ್ಕಾರಿ ಕ್ಷೇತ್ರದ ಒಳ್ಳೆಯ ಲಾಭದಾಯಕ ಯೋಜನೆಯ ಅನುಕೂಲತೆಯನ್ನು ಪಡೆಯುವ ಮೂಲಕ ನೀವು ಸಾಕಷ್ಟು ಹಣವನ್ನು ಗಳಿಸಬಹುದು. ವರ್ಷದ ಅರಂಭದಲ್ಲಿ, ಕುಟುಂಬದಲ್ಲಿ ವೈಮನಸ್ಸು ಕಾಣಿಸಿಕೊಳ್ಳಲಿದೆ. ಆದರೆ ಏಪ್ರಿಲ್‌ ಮತ್ತು ಸೆಪ್ಟೆಂಬರ್‌ ನಡುವಿನ ಅವಧಿಯು ಚೆನ್ನಾಗಿರಲಿದೆ. ಕುಟುಂಬದ ಹಿರಿಯರ ಬೆಂಬಲ ದೊರೆಯಲಿದೆ. ಇದರಿಂದಾಗಿ ಕೆಲಸದಲ್ಲಿ ನಿಮಗೆ ಉತ್ತಮ ಯಶಸ್ಸು ಲಭಿಸಲಿದೆ. ವರ್ಷದ ಆರಂಭದಲ್ಲಿ ನಿಮ್ಮ ಒಡಹುಟ್ಟಿದವರೊಂದಿಗೆ ಒಂದಷ್ಟು ವಾಗ್ವಾದಗಳು ಉಂಟಾಗಬಹುದು. ಆದರೆ ಅವರು ಎಲ್ಲಾ ರೀತಿಯಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ. ಹೀಗಾಗಿ ಅವರ ಕುರಿತು ನೀವು ಇನ್ನಷ್ಟು ಪ್ರೀತಿಯನ್ನು ತೋರಲಿದ್ದೀರಿ ಹಾಗೂ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದೀರಿ. ಗೆಳೆಯರ ಜೊತೆ ಎಚ್ಚರಿಕೆಯಿಂದ ವ್ಯವಹರಿಸಿ. ಏಕೆಂದರೆ ಈ ವರ್ಷದಲ್ಲಿ ನಿಮ್ಮ ಗೆಳೆಯರು ನಿಮಗೆ ಮೋಸ ಮಾಡಬಹುದು. ನೀವು ವಿದೇಶಕ್ಕೆ ಹೋಗಲು ಇಚ್ಛಿಸುವುದಾದರೆ, ನಿಮ್ಮ ಆಸೆಯು ಈ ವರ್ಷದಲ್ಲಿ ಈಡೇರಲಿದ್ದು ನೀವು ವಿದೇಶಕ್ಕೆ ಪ್ರಯಾಣಿಸಲಿದ್ದೀರಿ. ಜುಲೈ ಮತ್ತು ಸೆಪ್ಟೆಂಬರ್‌ ನಡುವೆ, ರಿಯಲ್‌ ಎಸ್ಟೇಟ್​ಗೆ ಸಂಬಂಧಿಸಿದ ವಿಷಯಗಳು ನಿಮ್ಮ ಗಮನವನ್ನು ಸೆಳೆಯಬಹುದು ಹಾಗೂ ಯಾವುದಾದರೂ ದೊಡ್ಡ ಆಸ್ತಿ ನಿಮ್ಮ ಕೈ ಸೇರಬಹುದು. ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಆದರೆ ಇತರರ ವಿಚಾರದಲ್ಲಿ ಕೈ ಹಾಕದೆ ಇದ್ದರೆ ಒಳ್ಳೆಯದು. ಈ ವರ್ಷದಲ್ಲಿ ನೀವು ಸಾಕಷ್ಟು ಜನಪ್ರಿಯತೆ ಗಳಿಸಲಿದ್ದೀರಿ.

ಮೀನ: ಮೀನ ರಾಶಿಯವರು ಸಾಕಷ್ಟು ಭಾವನಾತ್ಮಕ ಹಾಗೂ ಜಾಣ್ಮೆಯ ವ್ಯಕ್ತಿಗಳಾಗಿದ್ದಾರೆ. ನಿಮ್ಮ ಜಾಣ್ಮೆಯು ಈ ಬಾರಿ ನಿಮ್ಮ ನೆರವಿಗೆ ಬರಲಿದೆ. ಏಕೆಂದರೆ ನೀವು ಯಾವುದೇ ಕ್ಷೇತ್ರದಲ್ಲಿದ್ದರೂ, ನಿಮ್ಮ ಜಾಣ್ಮೆ ಮತ್ತು ಜ್ಞಾನದ ಕಾರಣ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ಈ ವರ್ಷದಲ್ಲಿ ನೀವು ಸಾಧಾರಣಕ್ಕಿಂತಲೂ ಹೆಚ್ಚಿನ ಯಶಸ್ಸು ಸಾಧಿಸಲಿದ್ದೀರಿ. ಆದಾಯದ ವಿಚಾರದಲ್ಲಿ ಹೇಳುವುದಾದರೆ ನೀವೀಗ ಅತ್ಯುತ್ತಮ ಸ್ಥಾನದಲ್ಲಿದ್ದೀರಿ ಹಾಗೂ ನಿಮ್ಮ ಬ್ಯಾಂಕಿನ ಖಾತೆಯ ಮೊತ್ತದಲ್ಲಿ ಹೆಚ್ಚಳ ಉಂಟಾಗಲಿದೆ. ಈ ವರ್ಷದಲ್ಲಿ ನೀವು ಕಳೆದ ಬಾರಿಗಿಂತ ಕಡಿಮೆ ಪ್ರಯಾಣ ಮಾಡುತ್ತೀರಿ. ನಿಮ್ಮ ಒಡಹುಟ್ಟಿದವರ ನೆರವನ್ನು ನೀವು ಪಡೆಯುತ್ತೀರಿ. ಆದರೆ ಅವರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ಏಕೆಂದರೆ ಅವರು ನಿಮ್ಮ ಅತ್ಯಂತ ದೊಡ್ಡ ಶಕ್ತಿಯಾಗಿದ್ದಾರೆ. ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ಕುಟುಂಬದ ಹಿರಿಯರ ಬೆಂಬಲವು ನಿಮಗೆ ದೊರೆಯಲಿದೆ. ಅವರ ಆಶೀರ್ವಾದದಿಂದಾಗಿ ನಿಮ್ಮ ಕೆಲಸದಲ್ಲಿ ನೀವು ಮುಂದೆ ಸಾಗಲಿದ್ದೀರಿ. ನಿಮ್ಮ ಯಾವುದೇ ಕಾರ್ಯದ ಮೂಲಕ ಅವರ ಮನ ನೋಯಿಸಬೇಡಿ. ಇದರಿಂದಾಗಿ ನಿಮ್ಮ ಕೆಲಸ ಮತ್ತು ಆರೋಗ್ಯದಲ್ಲಿ ಹಿನ್ನಡೆ ಉಂಟಾಗಬಹುದು. ನಿಮ್ಮ ದೇಶದಿಂದ ನೀವು ದೂರದಲ್ಲಿದ್ದರೆ, ಈ ವರ್ಷದಲ್ಲಿ ಮನೆಗೆ ಮರಳಲು ನಿಮಗೆ ಅವಕಾಶ ಲಭಿಸಲಿದೆ. ಹಣ ಗಳಿಕೆಯ ಜೊತೆಗೆ ಕುಟುಂಬಕ್ಕೆ ಸಮಯ ಮೀಸಲಿಡುವುದು ಅಗತ್ಯ. ಏಕೆಂದರೆ ಹಣ ಗಳಿಸುವ ಇಚ್ಛೆಯು ನಿಮ್ಮನ್ನು ಕುಟುಂಬದಿಂದ ದೂರವಿಡಬಹುದು. ಹೀಗಾಗಿ ಅವರ ಕುರಿತು ಕಾಳಜಿ ವಹಿಸಿ. ನಿಮ್ಮ ಆತ್ಮವಿಶ್ವಾಸವು ಚೆನ್ನಾಗಿರಲಿದೆ ಹಾಗೂ ನಿಮ್ಮ ಜಾಣ್ಮೆ ಮತ್ತು ಜ್ಞಾನದ ಬಲದ ಮೇಲೆ ಎಲ್ಲಾ ಕ್ಷೇತ್ರಗಳಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ಈ ಕಾರಣದಿಂದಾಗಿ ಈ ವರ್ಷವು ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಎನಿಸಲಿದೆ. ಹೊಸ ಕೋರ್ಸ್‌ ಗೆ ಸೇರ್ಪಡೆಯಾಗಲು ನೀವು ಇಚ್ಛಿಸುವುದಾದರೆ, ನಿಮ್ಮ ವಯಸ್ಸು ಎಷ್ಟೇ ಆಗಿರಲಿ, ಈ ವರ್ಷದಲ್ಲಿ ನೀವು ಅದರಲ್ಲಿ ಒಳ್ಳೆಯ ಯಶಸ್ಸನ್ನು ಪಡೆಯಲಿದ್ದೀರಿ. ನೀವು ಚೆನ್ನಾಗಿ ಅಧ್ಯಯನ ಮಾಡುವುದಲ್ಲದೆ ಅದನ್ನು ವೃತ್ತಿಯಾಗಿ ನೀವು ಮುಂದುವರಿಸಲಿದ್ದೀರಿ. ವರ್ಷದ ನಡುವಿನ ತಿಂಗಳುಗಳಲ್ಲಿ ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ನೀವು ಧಾರ್ಮಿಕ ಪ್ರಯಾಣಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.