ಈ ವರ್ಷ ಅಂದರೆ 2020 ಅನೇಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಈ ವರ್ಷವು ದೊಡ್ಡ ಪ್ರತಿಭಟನೆಗಳನ್ನು, ಎರಡು ಪ್ರಮುಖ ಕೋಮು ಗಲಭೆಗಳನ್ನು ಕಂಡಿತು.
- ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆ
- ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರಿಂದ ಪ್ರತಿಭಟನೆ
- ದೆಹಲಿಯಲ್ಲಿ ನಡೆದ ಗಲಭೆಗಳು
- ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಗಲಭೆ
- ದಿ. ಸುಶಾಂತ್ ಸಿಂಗ್ ರಜಪುತ್ ಅವರ ಸಾವು
- ಕೇರಳ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ
- ಜೆ & ಕೆ ರೋಶ್ನಿ ಭೂ ಹಗರಣ
- ಕೋವಿಡ್ -19 ಸಾಂಕ್ರಾಮಿಕವೂ ಭಾರತದಲ್ಲಿ ವರ್ಷಪೂರ್ತಿ ಸಾರ್ವಜನಿಕರ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿತು.
ವಿಶ್ವದಲ್ಲಿಯೇ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಎರಡನೇ ದೇಶವಾಗಿ ಭಾರತ ಹೊರಹೊಮ್ಮಿತು.
ಬಿಗಿಯಾದ ಲಾಕ್ಡೌನ್ ಸಾರ್ವಜನಿಕರ ಚಟುವಟಿಕೆಗಳ ಮೇಲೆ ಹೆಚ್ಚು ಪರಿಣಾಮ ಬೀರಿತು. ಆದ್ರೂ ಭಾರತದಲ್ಲಿ ದೊಡ್ಡ ಪ್ರತಿಭಟನೆಗಳು ಮತ್ತು ಎರಡು ಪ್ರಮುಖ ಕೋಮು ಗಲಭೆಗಳು ನಡೆದವು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ:
ಪೌರತ್ವ ತಿದ್ದುಪಡಿ ಕಾಯ್ದೆ 2019ರ ಡಿಸೆಂಬರ್‌ನಲ್ಲಿ ಜಾರಿಗೆ ಬಂದಿತು. ಅದರ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದವು. ಇದನ್ನು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯೊಂದಿಗೆ ಕೇಂದ್ರ ಜೋಡಿಸಿದ ಕಾರಣ ಅಸ್ಸೋಂನಲ್ಲಿ ಪ್ರತಿಭಟಿಸಲಾಯಿತು. 1971 ರ ನಂತರ ಬಂದ ವಲಸಿಗರಿಗೆ ಪೌರತ್ವ ನೀಡುವ ಸಿಎಎಯನ್ನು ಕೂಡ ಪ್ರತಿಭಟನಾಕಾರರು ವಿರೋಧಿಸಿದರು. ಜನವರಿಯ ಹೊತ್ತಿಗೆ ಸಿಎಎ ವಿರೋಧಿ ಪ್ರತಿಭಟನೆಗಳು ದೆಹಲಿಗೆ ಸ್ಥಳಾಂತರಗೊಂಡವು, ವಿಶೇಷವಾಗಿ ಶಾಹೀನ್ ಬಾಗ್ನಲ್ಲಿ ನಡೆಯಲಾರಂಭಿಸಿದವು.
ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರಿಂದ ಪ್ರತಿಭಟನೆ:
ಕೋವಿಡ್ -19 ಸಂಕ್ರಾಮಿಕದ ನಡುವೆ ದೆಹಲಿಯೂ ಮತ್ತೊಂದು ಪ್ರತಿಭಟನೆಗೆ ಸಾಕ್ಷಿಯಾಯಿತು. ಅದುವೇ ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಮಾಡಲಾಗುತ್ತಿರುವ ರೈತರ ಪ್ರತಿಭಟನೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣ ಮಾತ್ರವಲ್ಲದೆ ಕೇರಳದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ರದ್ದುಪಡಿಸಲಾಗುತ್ತಿದೆ ಎಂಬ ಮಾತುಗಳು ಪ್ರಮುಖವಾಗಿ ಪ್ರತಿಭಟನೆಗೆ ಕಾರಣವಾಗಿವೆ.
ಎಪಿಎಂಸಿ ಕಾಯ್ದೆಯಡಿ ಆಯಾ ರಾಜ್ಯ ಸರ್ಕಾರಗಳಿಂದ ನಿಯಂತ್ರಿಸಲ್ಪಡುವ ಭೌತಿಕ ಮಾರುಕಟ್ಟೆಗಳೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಾಗಿವೆ. ಆದರೆ, ಈ ಶಾಸನಗಳು ಎಲ್ಲ ರಾಜ್ಯಗಳಲ್ಲಿ ಏಕರೂಪವಾಗಿಲ್ಲ. ಭಾರತವು 6,630 ಎಪಿಎಂಸಿಗಳನ್ನು ಹೊಂದಿದೆ ಎಂದು ಕೇಂದ್ರ ಸರಕಾರ 2017ರ ಮಾರ್ಚ್‌ನಲ್ಲಿ ಲೋಕಸಭೆಗೆ ತಿಳಿಸಿತ್ತು.
ಕೇಂದ್ರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳು ಅಗತ್ಯ ಸರಕುಗಳ ನಿಯಮಗಳನ್ನು ದುರ್ಬಲಗೊಳಿಸುತ್ತವೆ. ಜೊತೆಗೆ ಗುತ್ತಿಗೆ ಕೃಷಿಗೆ ಸಹಾಯ ಮಾಡುವ ಮತ್ತು ಎಪಿಎಂಸಿಗಳಿಗೆ ಸ್ಪರ್ಧೆಯಾಗಿ ಕೇಂದ್ರ ಶಾಸನದಡಿಯಲ್ಲಿ ಹೊಸ ಕೃಷಿ ಮಾರುಕಟ್ಟೆಗಳನ್ನು ಸ್ಥಾಪಿಸಲು ಅನುಮತಿ ನೀಡುವ ಕಾನೂನುಗಳಾಗಿವೆ. ಪ್ರಮುಖವಾಗಿ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆಯು ಆತಂಕವನ್ನು ಸೃಷ್ಟಿಸಿದೆ. ವ್ಯಾಪಾರಿಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ಸಂಪೂರ್ಣ ಹೊಸ ಮಾರುಕಟ್ಟೆ ಸೃಷ್ಟಿಸುವ ಅವಕಾಶವನ್ನು ಇದು ನೀಡಿದೆ.
ದೆಹಲಿಯಲ್ಲಿ ನಡೆದ ಗಲಭೆಗಳು:
ದೆಹಲಿಯಲ್ಲಿ ಸಿಎಎ ವಿರೋಧಿ ಮತ್ತು ಇದಕ್ಕೆ ಬೆಂಬಲಿಸುವ ಎರಡು ಪ್ರತಿಭಟನೆಗಳು ನಡೆದವು. ಈ ಗಲಭೆಗಳು ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಕೋಮು ಹಿಂಸಾಚಾರಕ್ಕೆ ಕಾರಣವಾದವು. ಪೌರತ್ವ ಕಾಯ್ದೆಗಳನ್ನು ಬೆಂಬಲಿಸುವವರ ಮತ್ತು ವಿರೋಧಿಸುವವರ ಮಧ್ಯೆ ಫೆಬ್ರವರಿ 24 ರಂದು ಘರ್ಷಣೆ ನಡೆಯಿತು. ಈ ಒಂದು ಗಲಭೆಯಲ್ಲಿ ಕನಿಷ್ಠ 53 ಜನರು ಮೃತಪಟ್ಟಿದ್ದು, ಸುಮಾರು 200 ಮಂದಿ ಗಾಯಗೊಂಡಿದ್ದಾರೆ.
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಚಾರ್ಜ್‌ಶೀಟ್ ಕೂಡ ಸಲ್ಲಿಸಲಾಗಿದೆ. ಈ ಗಲಭೆಯಲ್ಲಿ ಮಾಜಿ ಜೆಎನ್‌ಯು ವಿದ್ಯಾರ್ಥಿಗಳ ಹೆಸರು ಕೂಡ ಕೇಳಿಬಂದಿದೆ. ಯೂನಿಯನ್ ನಾಯಕ ಉಮರ್ ಖಾಲಿದ್ ಮತ್ತು ಇನ್ನೊಬ್ಬ ಜೆಎನ್‌ಯು ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಆರೋಪಿಗಳೆಂದು ತಿಳಿದುಬಂದಿದೆ.
ಆಗಸ್ಟ್‌ನ ಬೆಂಗಳೂರಿನಲ್ಲಿ ನಡೆದ ಗಲಭೆ:
ಆಗಸ್ಟ್ 11 ರ ರಾತ್ರಿ ಬೆಂಗಳೂರಿನಲ್ಲಿ ಗಲಭೆ ಉಂಟಾಯಿತು. ಕಾಂಗ್ರೆಸ್ ಶಾಸಕರೊಬ್ಬರ ಸಂಬಂಧಿ ಪ್ರವಾದಿ ಮಹಮ್ಮದ್ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ದೊಡ್ಡ ಗಲಭೆಯೇ ನಡೆಯಿತು. ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳ ಮೇಲೆ ನೂರಾರು ಪ್ರತಿಭಟನಾಕಾರರು ಗುಂಪಾಗಿ ದಾಳಿ ಮಾಡಿದ್ದರು.
ಕಾಂಗ್ರೆಸ್ ಶಾಸಕ ಆರ್.ಅಖಂಡ ಶ್ರೀನಿವಾಸ ಮೂರ್ತಿ ಮತ್ತು ಅವರ ಸಹೋದರಿಯ ನಿವಾಸಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿತ್ತು. ನಗರದಲ್ಲಿ ದೊಡ್ಡ ಪ್ರಮಾಣದ ಅಗ್ನಿ ಅವಘಡಗಳು ಮತ್ತು ಹಿಂಸಾಚಾರ ನಡೆದಿತ್ತು. ಪೊಲೀಸರ ಗುಂಡಿನ ದಾಳಿಗೆ ನಾಲ್ವರು ಮೃತಪಟ್ಟಿದ್ದಾರೆ.
ಈ ಗಲಭೆಯು ನೆರೆಯ ಪ್ರದೇಶಗಳಲ್ಲಿ ಭಯ ಮತ್ತು ಭೀತಿಯನ್ನು ಹುಟ್ಟುಹಾಕಿತ್ತು.ಈ ಪ್ರಕರಣವನ್ನು ಈಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ.ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ಮೊದಲು ಸ್ಥಳೀಯ ಪೊಲೀಸರು 300ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ವಿಭಾಗವಾದ ಎಸ್‌ಡಿಪಿಐಗೆ ಸೇರಿದ ಸದಸ್ಯರು ಇದರಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗ್ತಿದೆ.
ದಿ. ಸುಶಾಂತ್ ಸಿಂಗ್ ರಜಪುತ್ ಅವರ ಸಾವು:
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ಪ್ರಮುಖ ರಾಜಕೀಯ ನಡೆದಿವೆ. ಜೂನ್‌ನಲ್ಲಿ ಮುಂಬೈನ ಫ್ಲ್ಯಾಟ್‌ನಲ್ಲಿ ಸುಶಾಂತ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಜೂ.14ರಂದು ಮುಂಬೈನ ಬಾಂದ್ರಾದಲ್ಲಿ ಇರುವ ತಮ್ಮ ಅಪಾರ್ಟ್‌ಮೆಂಟ್ ವಸತಿ ಸಮುಚ್ಚಯದಲ್ಲಿ ಸುಶಾಂತ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ವಿರುದ್ಧ ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅವರು ನೀಡಿದ್ದ ದೂರು ಆಧರಿಸಿ ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದರು. ನಂತರದಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದಲ್ಲಿ ಬಿಹಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅವರು ಮುಂಬೈಗೆ ಬಂದಾಗ ಮಹಾರಾಷ್ಟ್ರ ಸರ್ಕಾರ ಯಾವುದೇ ಸಹಕಾರ ನೀಡಿಲ್ಲ ಎಂದು ಅಧಿಕಾರಿಗಳು ಆರೋಪಿಸಿದ್ದರು. ಬಳಿಕ ಎರಡು ರಾಜ್ಯಗಳು ಈ ಪ್ರಕರಣದಲ್ಲಿ ಒಬ್ಬರೊಬ್ಬರನ್ನು ದೂಷಿಸಿಕೊಂಡರು. ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು.
ನಂತರ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿಯನ್ನು ಅಕ್ರಮ ಮಾದಕ ದ್ರವ್ಯಗಳ ವಿಷಯದಲ್ಲಿ ಬಂಧಿಸಲಾಯಿತು. ಅವರು ನಾಲ್ಕು ವಾರ ಜೈಲಿನಲ್ಲೇ ಕಳೆದರು. ತನಿಖೆ ಇನ್ನೂ ನಡೆಯುತ್ತಿದೆ.
ಕೇರಳ ಗೋಲ್ಡ್ ಸ್ಮಗ್ಲಿಂಗ್ ಹಗರಣ:
ಈ ವರ್ಷದ ಅತ್ಯಂತ ಗಂಭೀರ ರಾಜಕೀಯ ಹಗರಣ ಇದಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಜೂನ್ 30 ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಯುಎಇ ರಾಯಭಾರಿ ಕಚೇರಿ ಹೆಸರಿಗೆ ಬಂದ ಪಾರ್ಸೆಲ್ ಮೂಲಕ ಚಿನ್ನಕಳ್ಳಸಾಗಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಅವರನ್ನು ಬಂಧಿಸಿದ್ದರು.
ಬಳಿಕ ಈತನೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ ಎಂ.ಶಿವಶಂಕರ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಈ ಪ್ರಕರಣವನ್ನು ಕೇಂದ್ರ ಸರ್ಕಾರ ಎನ್‌ಐಎಗೆ ವಹಿಸಿದೆ. ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಪ್ರಮುಖ ಆರೋಪಿಗಳಾಗಿದ್ದು, ಎನ್‌ಐಎ ಒಟ್ಟು ನಾಲ್ವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿದೆ. ಇದರ ತನಿಖೆ ಇನ್ನು ನಡೆಯುತ್ತಿದೆ.
ಜೆ & ಕೆ ರೋಶ್ನಿ ಲ್ಯಾಂಡ್ ಹಗರಣ:
ಈ ವರ್ಷ ಮುಗಿಯುವ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಹಗರಣವೊಂದು ನಡೆದಿದೆ. ನವೆಂಬರ್ 1 ರಂದು, ಕೇಂದ್ರ ಪ್ರದೇಶದ ಸರ್ಕಾರವು ಜೆಕೆ ರಾಜ್ಯ ಭೂಮಿ (ಉದ್ಯೋಗಿಗಳಿಗೆ ಮಾಲೀಕತ್ವವನ್ನು ಹಸ್ತಾಂತರಿಸುವುದು) ಕಾಯ್ದೆ 2001 ರ ಅಡಿಯಲ್ಲಿ ನಡೆದ ಎಲ್ಲಾ ಭೂ ವರ್ಗಾವಣೆಯನ್ನು ರದ್ದುಗೊಳಿಸಿತು ಇದನ್ನು ರೋಶ್ನಿ ಕಾಯ್ದೆ ಎಂದೂ ಕರೆಯುತ್ತಾರೆ ಇದರ ಅಡಿಯಲ್ಲಿ 2.5 ಲಕ್ಷ ಎಕರೆ ಭೂಮಿಯನ್ನು ಹಸ್ತಾಂತರಿಸಬೇಕಾಗಿತ್ತು ಅಸ್ತಿತ್ವದಲ್ಲಿರುವ ನಿವಾಸಿಗಳಿಗೆ.
ಪ್ರಧಾನ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆಗೆ ಈ ಕಾಯಿದೆಯಡಿ ಸ್ವಾಧೀನಪಡಿಸಿಕೊಂಡಿರುವ ದೊಡ್ಡ ಪ್ರಮಾಣದ ರಾಜ್ಯ ಭೂಮಿಯನ್ನು ಹಿಂಪಡೆಯುವ ಯೋಜನೆಯನ್ನು ರೂಪಿಸಲು ತಿಳಿಸಲಾಗಿದೆ. ಹೈಕೋರ್ಟ್ ಆದೇಶದ ಪ್ರಕಾರ, ಒಟ್ಟು 6,04,602 ಕೆನಾಲ್ (75,575 ಎಕರೆ) ರಾಜ್ಯ ಭೂಮಿಯನ್ನು ಕ್ರಮಬದ್ಧಗೊಳಿಸಿ ನಿವಾಸಿಗಳಿಗೆ ವರ್ಗಾಯಿಸಲಾಗಿದೆ.
ಇದರಲ್ಲಿ ಜಮ್ಮುವಿನಲ್ಲಿ 5,71,210 ಕೆನಾಲ್ (71,401 ಎಕರೆ) ಮತ್ತು ಕಾಶ್ಮೀರ ಪ್ರಾಂತ್ಯದ 33,392 ಕೆನಾಲ್ (4174 ಎಕರೆ) ಸೇರಿವೆ. “ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯು ಈ ವಿಧಾನಗಳನ್ನು ರೂಪಿಸುತ್ತದೆ ಮತ್ತು ಅಂತಹ ರಾಜ್ಯ ಭೂಮಿಯಿಂದ ಅತಿಕ್ರಮಣದಾರರನ್ನು ಹೊರಹಾಕಲು ಮತ್ತು ಆರು ತಿಂಗಳ ಅವಧಿಯಲ್ಲಿ ರಾಜ್ಯ ಭೂಮಿಯನ್ನು ಹಿಂಪಡೆಯಲು ಯೋಜಿಸುತ್ತದೆ.
ಈ ಯೋಜನೆಯನ್ನು ಅಂತಿಮವಾಗಿ ಅಂದಿನ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ನವೆಂಬರ್ 28, 2018 ರಂದು ರದ್ದುಪಡಿಸಿದರು. ಅದರ ವ್ಯಾಪಕ ದುರುಪಯೋಗದ ವರದಿಗಳ ಮಧ್ಯೆ, ಇಡೀ ಶಾಸನವನ್ನು ಜೆಕೆ ಹೈಕೋರ್ಟ್ ಮುಂದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಪ್ರಶ್ನಿಸಲಾಯಿತು, ಇದರಲ್ಲಿ ನ್ಯಾಯಾಲಯವು ಈ ಕಾಯಿದೆಯಡಿ ಮಾತುಕತೆಗಳನ್ನು ತಡೆಹಿಡಿಯುವುದರ ಜೊತೆಗೆ ಮಾಲೀಕತ್ವದ ಹಕ್ಕುಗಳನ್ನು ನೀಡಲಾಗಿರುವ ಯಾವುದೇ ನಿವಾಸಿಗಳನ್ನು ಮಾರಾಟ ಮಾಡಬಾರದು ಎಂದು ನಿರ್ದೇಶಿಸಿದೆ. ಈ ಜಮೀನುಗಳು ಅಥವಾ ಅಂತಹ ಜಮೀನುಗಳಲ್ಲಿ ನಿರ್ಮಾಣಗಳನ್ನು ಹೆಚ್ಚಿಸಲು ಸಾಧ್ಯವಿಲ್ಲ.
ಈ ಮೇಲಿನವುಗಳೆಲ್ಲಾ 2020ರಲ್ಲಿ ನಡೆದ ಪ್ರಮುಖ ಪ್ರತಿಭಟನೆಗಳು ಮತ್ತು ಹಗರಣಗಳು. ಇವುಗಳಲ್ಲದೇ ಇನ್ನೂ ಅನೇಕ ಪ್ರತಿಭಟನೆಗಳು ನಡೆದಿವೆ ಮತ್ತು ನಡೆಯುತ್ತಲೇ ಇವೆ. ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರತಿಭಟಿಸುವ ಹಕ್ಕು ಪತ್ರಿಯೊಬ್ಬ ನಾಗರಿಕನಿಗೂ ಇದೆ.