ETV Bharat / bharat

ವಿಚಾರಣೆ ಮೇಲೆ ಅನುಮಾನ.. ದೇಶವಿರೋಧಿ ಯಾಸಿನ್​ ಮಲಿಕ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ

ದೇಶ ವಿರೋಧಿ, ಭಯೋತ್ಪಾದನೆ ಚಟುವಟಿಕೆಗಳ ಪ್ರಕರಣಗಳಲ್ಲಿ ಜೈಲು ಪಾಲಾಗಿರುವ ಯಾಸಿನ್​ ಮಲಿಕ್- ಜೈಲಿನಲ್ಲಿ ಉಪವಾಸ ಸತ್ಯಾಗ್ರಹ- ​ತನ್ನ ಮೇಲಿನ ಕೇಸ್​ಗಳ ವಿಚಾರಣೆ ಸರಿಯಾದ ಕ್ರಮದಲ್ಲಿಲ್ಲವೆಂದು ಆರೋಪ

ದೇಶವಿರೋಧಿ ಯಾಸಿನ್​ ಮಲಿಕ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ

author img

By

Published : Jul 23, 2022, 7:54 AM IST

ನವದೆಹಲಿ: ದೇಶವಿರೋಧಿ ಮತ್ತು ಭಯೋತ್ಪಾದನೆ, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿರುವ ಜಮ್ಮು- ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್​ ತಮ್ಮ ಮೇಲಿರುವ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಕ್ಯಾತೆ ತೆಗೆದು ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ದೆಹಲಿಯ ತಿಹಾರ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಯಾಸಿನ್​ ಮಲಿಕ್​ ಶುಕ್ರವಾರ ಬೆಳಗ್ಗೆಯಿಂದ ಉಪವಾಸ ನಡೆಸುತ್ತಿದ್ದಾರೆ. ತನ್ನ ಮೇಲಿರುವ ಪ್ರಕರಣಗಳನ್ನು ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಬಗೆಗಿನ ಆಕ್ಷೇಪವನ್ನು ಸತ್ಯಾಗ್ರಹದ ಮೂಲಕ ತೋರಿಸುತ್ತಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಅಡಿಯಲ್ಲಿ ಮಲಿಕ್ ದೋಷಿಯಾಗಿದ್ದಾರೆ. ಭಯೋತ್ಪಾದನಾ ಕೃತ್ಯ, ಭಯೋತ್ಪಾದನೆಗೆ ನಿಧಿ ಸಂಗ್ರಹಿಸುವುದು, ಕೃತ್ಯಕ್ಕೆ ಪಿತೂರಿ ಸೇರಿದಂತೆ ತನ್ನ ಮೇಲಿದ್ದ ಆರೋಪಗಳನ್ನು ಸ್ವತಃ ಮಲಿಕ್​ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಬಳಿಕ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಮೇ 25 ರಂದು ಯಾಸಿನ್​ ಮಲಿಕ್​ಗೆ ಶಿಕ್ಷೆ ವಿಧಿಸಿತ್ತು.

ಓದಿ: ಟಿಎಂಸಿ ಸಚಿವರ ಆಪ್ತೆ ಮನೆಯಲ್ಲಿ ₹20 ಕೋಟಿ ನಗದು.. ಮುಂದುವರಿದ ಶೋಧಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.