ETV Bharat / bharat

ಲಸಿಕೆ ರಫ್ತಿಗೆ ಮೋದಿ ವಿರುದ್ಧ ಯಶ್ವಂತ್ ಸಿನ್ಹಾ ವಾಗ್ದಾಳಿ : ವಿಶ್ವಸಂಸ್ಥೆಯಲ್ಲಿ ಭಾರತೀಯ ಪ್ರತಿನಿಧಿ ಹೇಳಿದ್ದೇನು?

ದೇಶದ ಜನರಿಗೆ ಕೊರೊನಾ ಲಸಿಕೆ ಪೂರೈಸುವ ಬದಲು ಇತರ ರಾಷ್ಟ್ರಗಳಿಗೆ ರಫ್ತು ಮಾಡಿರುವುದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯಶ್ವಂತ್ ಸಿನ್ಹಾ, ಮೋದಿ ನಿಜಕ್ಕೂ ಒಬ್ಬ ವಿಶ್ವ ನಾಯಕ. ಭಾರತೀಯರು ನರಕಕ್ಕೆ ಹೋಗಬಹುದು ಎಂದು ವ್ಯಂಗ್ಯವಾಡಿದ್ದಾರೆ..

Yashwant Sinha slams PM Modi on vaccination export
ಲಸಿಕೆ ರಫ್ತಿಗೆ ಮೋದಿ ವಿರುದ್ಧ ಯಶ್ವಂತ್ ಸಿನ್ಹಾ ವಾಗ್ದಾಳಿ
author img

By

Published : May 17, 2021, 1:20 PM IST

ನವದೆಹಲಿ : ಕೋವಿಡ್ -19 ಲಸಿಕೆಗಳನ್ನು ದೇಶದ ಜನರಿಗೆ ಪೂರೈಸುವ ಬದಲು ಇತರ ರಾಷ್ಟ್ರಗಳಿಗೆ ರಫ್ತು ಮಾಡಿರುವುದರ ವಿರುದ್ಧ ಕೇಂದ್ರದ ಮಾಜಿ ಸಚಿವ, ಟಿಎಂಸಿ ಮುಖಂಡ ಯಶ್ವಂತ್ ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತೀಯ ಪ್ರತಿನಿಧಿ ನಾಗರಾಜ್ ನಾಯ್ಡು ಅವರು ಮಾತನಾಡಿರುವ ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಸಿನ್ಹಾ, "ಈ 10 ಸೆಕೆಂಡ್​ಗಳ ವಿಡಿಯೋ ಮೋದಿ ಏನೆಂದು ಹೇಳುತ್ತದೆ. ಮೋದಿ ನಿಜಕ್ಕೂ ಒಬ್ಬ ವಿಶ್ವ ನಾಯಕ. ಭಾರತೀಯರು ನರಕಕ್ಕೆ ಹೋಗಬಹುದು " ಎಂದು ವ್ಯಂಗ್ಯವಾಡಿದ್ದಾರೆ.

  • A 10 sec video that EXPOSES MODI. India’s representative at the @UN informed the United Nations that India sent more vaccines abroad than has vaccinated its own people. Modi is now truly a world leader. Indians can go to hell. pic.twitter.com/tTF8q60HT5

    — Yashwant Sinha (@YashwantSinha) May 16, 2021 " class="align-text-top noRightClick twitterSection" data=" ">

ಇದನ್ನೂ ಓದಿ: 'ಮೋದಿ ಜೀ, ನಮ್ಮ ಮಕ್ಕಳ ವ್ಯಾಕ್ಸಿನ್‌ ವಿದೇಶಕ್ಕೆ ಏಕೆ ಕಳುಹಿಸಿದಿರಿ?': ಕಾಂಗ್ರೆಸ್‌ ಟ್ವಿಟರ್‌ ಅಭಿಯಾನ

ಸಿನ್ಹಾ ಶೇರ್​ ಮಾಡಿರುವ ವಿಡಯೋದಲ್ಲಿ ಯುಎನ್​ ಭಾರತೀಯ ಪ್ರತಿನಿಧಿಯು, "ಪ್ರಪಂಚದ 70ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭಾರತ ಕೊರೊನಾ ಲಸಿಕೆ ಕಳುಹಿಸಿದೆ. ಭಾರತವು ತನ್ನ ಜನತೆಗೆ ಲಸಿಕೆ ನೀಡಿದ್ದಕ್ಕಿಂತಲೂ ಹೆಚ್ಚಿನ ವ್ಯಾಕ್ಸಿನ್​ಗಳನ್ನು ರಫ್ತು ಮಾಡಿದೆ" ಎಂದು ಹೇಳುತ್ತಾರೆ.

ಇದನ್ನೂ ಓದಿ: ಪ್ರಧಾನಿ ವಿರುದ್ಧ ಅವಹೇಳನ ಪೋಸ್ಟರ್​; ದೆಹಲಿಯಲ್ಲಿ 25 ಮಂದಿ ಮೇಲೆ 25 ಎಫ್​ಐಆರ್ ದಾಖಲು!

ವಿದೇಶಗಳಿಗೆ ಲಸಿಕೆ ರಫ್ತು ಮಾಡಿದ್ದಕ್ಕೆ ಪ್ರಧಾನಿ ಮೋದಿಯನ್ನು ಟೀಕಿಸಿ ಪೋಸ್ಟರ್​​ಗಳನ್ನು ಹಾಕಿದ್ದವರ ವಿರುದ್ಧ ಪೊಲೀಸರು ಎಫ್​ಐಆರ್​​ ದಾಖಲಿಸಿದ್ದರು. ಇದರ ಬೆನ್ನಲ್ಲೇ ಸಿನ್ಹಾ ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.