ETV Bharat / bharat

ಜಿನ್‌ಪಿಂಗ್‌ ಚೀನಾ ಪಿಎಲ್‌ಎ ಉಸ್ತುವಾರಿ ಸ್ಥಾನಕ್ಕೆ ಕುತ್ತು ಬಂದಿದೆ: ಸುಬ್ರಮಣಿಯನ್‌ ಸ್ವಾಮಿ - subramanian swamy

ಚೀನಾದ ಸೇನೆಯು ನೇರ ಮಿಲಿಟರಿ ಹಸ್ತಕ್ಷೇಪದ ಮೂಲಕ ವೇಗವಾಗಿ ಪ್ರಗತಿ ಸಾಧಿಸಲು ಬಯಸಿದೆ. ಕ್ಸಿ ಜಿನ್‌ಪಿಂಗ್ ಅವರನ್ನು ಪಿಎಲ್‌ಎ ಉಸ್ತುವಾರಿ ಸ್ಥಾನದಿಂದ ತೆಗೆದುಹಾಕುವ ಸಾಧ್ಯತೆಯಿದೆ. ಹೊಸ ಮುಖ್ಯಸ್ಥರು ಪಿಎಲ್‌ಎ ಆದೇಶಗಳನ್ನು ಅನುಸರಿಸುತ್ತಾರೆ. ಇದು ಭಾರತಕ್ಕೆ ಮತ್ತಷ್ಟು ಅಪಯಕಾರಿ ಎಂದು ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್‌ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

subramanian swamy
ಸುಬ್ರಮಣಿಯನ್‌
author img

By

Published : Sep 25, 2022, 12:09 PM IST

Updated : Sep 25, 2022, 12:31 PM IST

ನವದೆಹಲಿ: ಬಿಜೆಪಿ ನಾಯಕ ಹಾಗೂ ಮಾಜಿ ಕ್ಯಾಬಿನೆಟ್‌ ಸಚಿವ ಸುಬ್ರಮಣಿಯನ್‌ ಸ್ವಾಮಿ ಅವರು ಶನಿವಾರ ನೀಡಿದ ವಿಶೇಷ ಸಂದರ್ಶನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಭಾರತಕ್ಕೆ ಸೇರಿದ ಪ್ರದೇಶಗಳನ್ನು ಪಿಎಲ್‌ಎ (ಪೀಪಲ್ಸ್ ಲಿಬರೇಶನ್ ಆರ್ಮಿ) ಇಚ್ಛೆಯಂತೆ ಕ್ರಮೇಣವಾಗಿ ಅತಿಕ್ರಮಿಸಿಕೊಳ್ಳುವ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

'ಚೀನಾ ಕುರಿತು ಹೊಸ ವದಂತಿ ಇದೆ, ಅದನ್ನು ತನಿಖೆ ಮಾಡಲಾಗುತ್ತದೆ. ಕ್ಸಿ ಜಿನ್‌ಪಿಂಗ್ ಗೃಹಬಂಧನದಲ್ಲಿದ್ದಾರೆಯೇ?, ಜಿನ್‌ಪಿಂಗ್ ಇತ್ತೀಚೆಗೆ ಸಮರ್‌ಕಂಡ್‌ನಲ್ಲಿದ್ದಾಗ, ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕರು ಸೇನಾ ಮುಖ್ಯಸ್ಥ ಹುದ್ದೆಯಿಂದ ಅವರನ್ನು ತೆಗೆದು ಹಾಕಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿದೆ. ಆ ನಂತರ ಅವರು ಗೃಹಬಂಧನದಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ' ಎಂದರು.

ಇದನ್ನೂ ಓದಿ: ಚೀನಾ-ತೈವಾನ್ ಬಿಕ್ಕಟ್ಟು: ದ್ವೀಪ ರಾಷ್ಟ್ರಕ್ಕೆ ಅಮೆರಿಕದ ಶಸ್ತ್ರಾಸ್ತ್ರ ಬಲ

ಚೀನಾದ ಸೇನೆಯು ನೇರ ಮಿಲಿಟರಿ ಹಸ್ತಕ್ಷೇಪದ ಮೂಲಕ ವೇಗವಾಗಿ ಪ್ರಗತಿ ಸಾಧಿಸಲು ಬಯಸಿದೆ. ಕ್ಸಿ ಜಿನ್‌ಪಿಂಗ್ ಅವರನ್ನು ಪಿಎಲ್‌ಎ ಉಸ್ತುವಾರಿ ಸ್ಥಾನದಿಂದ ತೆಗೆದುಹಾಕುವ ಸಾಧ್ಯತೆಯಿದೆ, ಹೊಸ ಮುಖ್ಯಸ್ಥರು ಪಿಎಲ್‌ಎ ಆದೇಶಗಳನ್ನು ಅನುಸರಿಸುತ್ತಾರೆ. ಇದು ಭಾರತಕ್ಕೆ ಮತ್ತಷ್ಟು ಅಪಯಕಾರಿ ಎಂದು ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗಡಿಯಲ್ಲಿ ಚೀನಾ ಈಗಲೂ ಅಸಾಧಾರಣ ಸವಾಲು: ನೌಕಾಪಡೆ ಮುಖ್ಯಸ್ಥ

ಇತ್ತೀಚೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 22 ನೇ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಗಾಗಿ ಉಜ್ಬೇಕಿಸ್ತಾನ ಪ್ರವಾಸ ಕೈಗೊಂಡಿದ್ದರು. ಈ ಎಸ್‌ಸಿಒ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಭಾಗವಹಿಸಿದ್ದರು. ಮೋದಿ ಮತ್ತು ಜಿನ್‌ಪಿಂಗ್ ಈವರೆಗೆ ಒಟ್ಟು 18 ಬಾರಿ ಭೇಟಿಯಾಗಿದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಸಿದ್ಧರಾಗಿದ್ದಾರೆ. ಆದಾಗ್ಯೂ, ಚೀನಾ ಸೇನೆಯು ಕಾರ್ಯಾಚರಣೆ ಕೈಗೊಳ್ಳಲು ಹವಣಿಸುತ್ತಿದೆ ಎಂದು ಆರೋಪಿಸಿದರು.

Last Updated : Sep 25, 2022, 12:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.