ETV Bharat / bharat

ತ್ರಿವಳಿ ತಲಾಖ್ ಕುರಿತು ತಪ್ಪು ಕಾನೂನು ರಚನೆ: ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ - ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ

ಹೆಚ್ಚಿನ ಮಹಿಳೆಯರು ಗಂಡನಿಂದ ವಿಚ್ಛೇದನ ಬಯಸುತ್ತಾರೆ. ಆದರೆ, ಭಯದಿಂದ ತಲಾಖ್​ ಮೂಲಕ ಸುಲಭವಾಗಿ ಬೇರ್ಪಡಲು ಸಾಧ್ಯವಾಗುತ್ತಿಲ್ಲ ಎಂದು ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಹೇಳಿದ್ದಾರೆ.

Maulana Khalid Saifullah Rahmani
ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ
author img

By

Published : Nov 26, 2022, 2:57 PM IST

ಲಖನೌ(ಉತ್ತರ ಪ್ರದೇಶ): ಇತರ ಧರ್ಮಗಳಲ್ಲಿ ಮಹಿಳೆಯರು ತಮ್ಮ ಪತಿಯಿಂದ ದೂರವಾಗಬೇಕಾದರೆ ಬಹಳ ತೊಡಕುಗಳು ಅಡ್ಡ ಬರುತ್ತವೆ. ವಿಚ್ಛೇದನ ಪಡೆಯಲು ವರ್ಷಗಳು ಕಾಯಬೇಕಾಗುತ್ತದೆ. ಆದರೆ, ಇಸ್ಲಾಂ ಧರ್ಮ ಪತಿಯಿಂದ ದೂರವಾಗಲು ತಲಾಖ್​ ಎಂಬ ಸುಲಭ ಮಾರ್ಗವನ್ನು ನೀಡಿದೆ. ತಲಾಖ್​ ಮೂಲಕ ಗಂಡನಿಂದ ಮಹಿಳೆ ಸುಲಭವಾಗಿ ಬೇರ್ಪಡಬಹುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಹೇಳಿಕೆ ನೀಡಿದ್ದಾರೆ.

ಸರ್ಕಾರ ತ್ರಿವಳಿ ತಲಾಖ್ ಕುರಿತು ಕಾನೂನು ರೂಪಿಸಿರುವುದು ಸಮಾಜದ ಮೇಲೆ ತಪ್ಪು ಪರಿಣಾಮ ಬೀರಿದೆ. ತಲಾಖ್​ ಕ್ರಿಮಿನಲ್ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ಪುರುಷರು ಮಹಿಳೆಯರಿಗೆ ತ್ರಿವಳಿ ತಲಾಖ್​ ಮೂಲಕ ವಿಚ್ಛೇದನ ನೀಡುವುದು ಕಡಿಮೆಯಾದೆ, ಆದರೆ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.

ತ್ರಿವಳಿ ತಲಾಖ್ ಕಾನೂನಿನಿಂದಾಗಿ ಪುರುಷರು ವಿಚ್ಛೇದನ ನೀಡಲು ಹೆದರುತ್ತಿದ್ದಾರೆ. ಹೆಚ್ಚಿನ ಮಹಿಳೆಯರು ಗಂಡನಿಂದ ವಿಚ್ಛೇದನ ಬಯಸುತ್ತಿದ್ದಾರೆ. ಆದರೆ ಭಯದಿಂದ ತಲಾಖ್​ ಮೂಲಕ ಸುಲಭವಾಗಿ ಬೇರ್ಪಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರು ಪರಸ್ಪರ ಒಪ್ಪಿಗೆಯಿಂದ ಬೇರ್ಪಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಇಸ್ಲಾಮಿಕ್ ಕಾನೂನು ಖುಲ್ಲಾ ಪ್ರಕಾರ ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯಬಹುದು: ಕೇರಳ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.