ಟೋಕಿಯೊ: ಭಾರತದ ಯುವ ಪ್ರತಿಭೆ ಅನ್ಶು ಮಲಿಕ್ ಮಹಿಳೆಯರ ಕುಸ್ತಿ ವಿಭಾಗದಲ್ಲಿ ವಲೇರಿಯಾ ಕೊಬ್ಲೋವಾ ವಿರುದ್ಧ ಸೋಲು ಅನುಭವಿಸಿದರು.
ಹರಿಯಾಣದ ಜಿಂದ್ ಜಿಲ್ಲೆಯ ನಿಡಾನಿ ಎಂಬ ಪುಟ್ಟಹಳ್ಳಿಯಿಂದ ಬಂದಿರುವ ಅನ್ಶು ಮಲಿಕ್, ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಾರೆ ಎಂಬ ಭರವಸೆ ಮೂಡಿಸಿದ್ದರು. 57 ಕೆಜಿ ತೂಕದ ಕುಸ್ತಿ ವಿಭಾಗದಲ್ಲಿ ದೇಶದ ನಂಬರ್ ಒನ್ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2016 ರಲ್ಲಿ ಸಿಬಿಎಸ್ಎಂ ಕ್ರೀಡಾ ಕಾಲೇಜಿನಿಂದ ಕುಸ್ತಿ ಪ್ರಾರಂಭಿಸಿದ್ದು, 2017ರಲ್ಲಿ ವಿಶ್ವ ಚಾಂಪಿಯನ್ ಆದರು. ಜೊತೆಗೆ ಜೂನಿಯರ್ ವಿಭಾಗದಲ್ಲಿದ್ದರೂ ಎರಡು ವರ್ಷಗಳ ಹಿಂದೆ ಹಿರಿಯರ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಇದೀಗ ಮಹಿಳೆಯರ ಕುಸ್ತಿ ವಿಭಾಗದದಲ್ಲಿ ಗೆಲ್ಲಲು ವಿಫಲರಾಗಿರುವುದು ಬೇಸರ ಮೂಡಿಸಿದೆ.