ETV Bharat / bharat

ಲಾಲು ಪ್ರಸಾದ್​ ಹಾಡಿಗೆ ಸಖತ್​ ಡ್ಯಾನ್ಸ್​ ಮಾಡಿದ ಕುಸ್ತಿಪಟುಗಳು.. ಸ್ಟೇಪ್​ ನೋಡಿ ಮೈ ಮರೆತ ಜನ! - ಮಾಧೇಪುರ ಕುಸ್ತಿಪಟು ಡ್ಯಾನ್ಸ್​ ಸುದ್ದಿ

ಬಿಹಾರದ ಮಾಧೇಪುರದಲ್ಲಿ ಅಪೂರ್ವ ದೃಶ್ಯವೊಂದು ಕಂಡು ಬಂತು. ನಗರದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಆಯೋಜಿಸಿ ಕುಸ್ತಿ ಸ್ಪರ್ಧೆಯಲ್ಲಿ ಕುಸ್ತಿಪಟುಗಳು ಹಾಡೊಂದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

Wrestling organized on Holika Dahan in Madhepura  Wrestler dance on Lalu Song in Arena  madhepura latest news  madhepura news  ಬಿಹಾರದಲ್ಲಿ ಲಾಲೂ ಪ್ರಸಾದ್​ ಹಾಡಿಗೆ ಕುಸ್ತಿಪಟುಗಳು ಸಖತ್​ ಡ್ಯಾನ್ಸ್​ ಗೋಧಿಯಾರಿ ಜಾತ್ರೆಯಲ್ಲಿ ಕುಸ್ತಿಪಟಗಳ ನೃತ್ಯ  ಮಾಧೇಪುರ ಕುಸ್ತಿಪಟು ಡ್ಯಾನ್ಸ್​ ಸುದ್ದಿ  ಬಿಹಾರ ಸುದ್ದಿ
ಲಾಲೂ ಪ್ರಸಾದ್​ ಹಾಡಿಗೆ ಸಖತ್​ ಡ್ಯಾನ್ಸ್​ ಮಾಡಿದ ಕುಸ್ತಿಪಟುಗಳು
author img

By

Published : Mar 24, 2022, 11:47 AM IST

ಮಾಧೇಪುರ( ಬಿಹಾರ): ಹೋಳಿ ಸಂದರ್ಭದಲ್ಲಿ ಗೋಧಿಯಾರಿಯ ಸಾಂಪ್ರದಾಯಿಕ ಜಾತ್ರೆ ನಡೆಯುತ್ತೆ. ಈ ವೇಳೆ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿತ್ತು. ಜಾತ್ರೆಯಲ್ಲಿ ಲಾಲು ಪ್ರಸಾದ್‌ಗೆ ಸಂಬಂಧಿಸಿದ ಹಾಡು ಮೊಳಗತೊಡಗಿದಾಗ ಅಖಾಡದಲ್ಲಿದ್ದ ಕುಸ್ತಿಪಟುಗಳ ಸಖತ್​ ಹೆಜ್ಜೆ ಹಾಕಿ ಸಂಭ್ರಮಿಸಿದರು. ಈ ಕುಸ್ತಿಪಟುಗಳ ಡ್ಯಾನ್ಸ್​ ನೆರೆದಿದ್ದ ಜನ ತಮ್ಮ - ತಮ್ಮ ಮೊಬೈಲ್​ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈಗ ಇದು ಸಖತ್​ ವೈರಲ್​ ಆಗ್ತಿದೆ.

ಲಾಲು ಪ್ರಸಾದ್​ ಹಾಡಿಗೆ ಸಖತ್​ ಡ್ಯಾನ್ಸ್​ ಮಾಡಿದ ಕುಸ್ತಿಪಟುಗಳು

ಖೇಸರಿ ಲಾಲ್ ಹಾಡಿಗೆ ಕುಸ್ತಿಪಟು ಡ್ಯಾನ್ಸ್​: ಮಾಧೇಪುರದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಭೋಜ್‌ಪುರಿ ಗಾಯಕ ಖೇಸರಿ ಲಾಲ್ ಲಾಲೂ ಪ್ರಸಾದ್​ಗೆ ಸಂಬಂಧಿಸಿದ ಹಾಡೊಂದನ್ನು ಹಾಡುತ್ತಿದ್ದರು. ಹಾಡು ಪ್ರಾರಂಭವಾಗುತ್ತಿದ್ದಂತೆ ಅಖಾಡದಲ್ಲಿದ್ದ ಕುಸ್ತಿಪಟು ಡ್ಯಾನ್ಸ್​ ಮಾಡಲು ಶುರು ಮಾಡಿದ್ದಾರೆ. ಈ ವೇಳೆ, ನೂರಾರು ಜನರು ಕುಸ್ತಿಪಟುಗಳ ಡ್ಯಾನ್ಸ್​ ನೋಡಿ ಆನಂದಿಸಿದರು. ಈ ಹಾಡಿನಲ್ಲಿ ತೇಜಸ್ವಿ ಯಾದವ್ ಬಗ್ಗೆಯೂ ಚರ್ಚೆಯಾಗಿದೆ. ಈ ವಿಡಿಯೋವನ್ನು ರಾಷ್ಟ್ರೀಯ ಜನತಾ ದಳ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಓದಿ: ಛತ್ರ ಬುಕ್​​ ಮಾಡಿ ಬರುತ್ತಿದ್ದಾಗಲೇ ಟ್ರಾನ್ಸ್​ಫಾರ್ಮರ್​ ಸ್ಫೋಟ: ಚಿಕಿತ್ಸೆ ಫಲಿಸದೇ ಅಪ್ಪ, ಮಗಳು ಸಾವು

ಬಿಹಾರದಲ್ಲಿ ಲಾಲು ಕ್ರೇಜ್: ಆರ್‌ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ (ಆರ್‌ಜೆಡಿ ಅಧ್ಯಕ್ಷ ಲಾಲು ಯಾದವ್) ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ದೆಹಲಿ ಏಮ್ಸ್‌ಗೆ ಅವರನ್ನು ದಾಖಲಿಸಲಾಗಿದೆ.

ಲಾಲು ಪ್ರಸಾದ್ ಮೊದಲಿನಂತೆ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ. ಆದರೆ ಲಾಲು ಪ್ರಸಾದ್​ರ ಕ್ರೇಜ್ ಅವರ ಬೆಂಬಲಿಗರಲ್ಲಿ ತುಂಬಾ ಹೆಚ್ಚಾಗಿದೆ. ಮಾಧೇಪುರದ ಅಖಾಡದಲ್ಲಿ ನಡೆದ ಕುಸ್ತಿಪಟುಗಳ ನೃತ್ಯ ಸಖತ್​ ಸದ್ದು ಮಾಡ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಡ್ಯಾನ್ಸ್ ವೈರಲ್​ ಆಗ್ತಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.