ಲಖನೌ: ಉತ್ತರ ಭಾರತದಲ್ಲಿ ಜುಲೈ 25 ರಿಂದಲೇ ಶ್ರಾವಣ ಮಾಸ ಶುರುವಾಗಿದೆ. ಶಿವನಿಗೆ ಪ್ರಿಯವಾದ ಶ್ರಾವಣದ ಮೊದಲ ಸೋಮವಾರದಂದು ಭಕ್ತರು ದೇಗುಲಗಳಿಗೆ ತೆರಳಿ ವಿಶೇಷವಾದ ಪೂಜೆ ಸಲ್ಲಿಸುತ್ತಾರೆ. ಈಶ್ವರನ ಅನುಗ್ರಹಕ್ಕಾಗಿ ಕೆಲ ಭಕ್ತರು ಉಪವಾಸ ಮಾಡುವ ಮೂಲಕ ಇಷ್ಟದೈವನಿಗೆ ವಿವಿಧ ನೈವೇದ್ಯಗಳನ್ನು ಮಾಡುತ್ತಾರೆ.
ಸೋಮವಾರ ಪ್ರಿಯ ಶಿವ
ಶ್ರಾವಣ ಮಾಸ ಅತ್ಯಂತ ಶ್ರೇಷ್ಠ ತಿಂಗಳಾದರೂ, ಸೋಮವಾರಗಳು ಮಾತ್ರ ವಿಶೇಷ. ಶಿವನಿಗೆ ಈ ಮಾಸದ ಸೋಮವಾರ ತುಂಬಾ ಪ್ರಿಯವಾದದ್ದು. ಈ ಸಮಯದಲ್ಲಿ ತಮ್ಮ ಇಷ್ಟಾರ್ಥಗಳ ನೆರವೇರಿಕೆಗಾಗಿ ಭಕ್ತಿಯಿಂದ ಕೇಳಿಕೊಂಡರೆ ಶಿವನು ನೆರವೇರಿಸುತ್ತಾನೆ ಅನ್ನೋದು ಭಕ್ತರ ನಂಬಿಕೆ. ಇಂದು ಮೊದಲ ಸೋಮವಾರವಾದ್ದರಿಂದ ಭೋಲೇನಾಥನಿಗೆ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಅದೃಷ್ಟದ ದಿನ ಶ್ರಾವಣ ಸೋಮವಾರ
- ಜ್ಯೋತಿಷ್ಯದ ಪ್ರಕಾರ, ಜುಲೈ 26 (ಇಂದು) ಅತ್ಯಂತ ಸುದಿನ. ಈ ದಿನ ನೀವು ಅರ್ಧನಾರೀಶ್ವರನಲ್ಲಿ ಭಕ್ತಿಯಿಂದ ಏನೇ ಕೇಳಿಕೊಂಡರೂ ನೆರವೇರುತ್ತದೆ.
- ಆಗಸ್ಟ್ 2 ರಂದು ಎರಡನೇ ಸೋಮವಾರ. ಈ ದಿನ ಸರ್ವರ್ಥ ಸಿದ್ಧಿಯೋಗ
- ಆಗಸ್ಟ್ 9 ರಂದು ಮೂರನೇ ಸೋಮವಾರ ಮತ್ತು ಈ ದಿನದಂದು ವರಿಯಾನ್ ಯೋಗ ರಚಿಸಲಾಗುತ್ತದೆ
- ಆಗಸ್ಟ್ 16 ರಂದು ನಾಲ್ಕನೇ ಸೋಮವಾರ ಹಾಗೂ ಕೊನೆಯ ವಾರ ಆಗಿರುವುದರಿಂದ ಈ ದಿನ ಸರ್ವರ್ಥ ಸಿದ್ಧ ಮತ್ತು ಬ್ರಹ್ಮ ಯೋಗ ಸೃಷ್ಟಿಯಾಗಿ ಶುಭ ಸುದ್ದಿ ನೀಡಲಿದೆ.
ಶಿವನನ್ನು ಪೂಜಿಸುವುದು ಹೇಗೆ?
ಶ್ರಾವಣ ಮಾಸದ ಸೋಮವಾರ, ಹೂವು, ಹಣ್ಣುಗಳು, ಡ್ರೈ ಫ್ರೂಟ್ಸ್, ಮೊಸರು, ದೇಸಿ ತುಪ್ಪ, ಜೇನು ತುಪ್ಪ, ಗಂಗಾ ನೀರು, ಪವಿತ್ರ ನೀರು, ಸುಗಂಧ ದ್ರವ್ಯ, ವಾಸನೆ ರೋಲಿ, ಮೌಲಿ ಜನು, ಪಂಚ ಸಿಹಿ, ಬಿಲ್ವಪತ್ರ, ದತುರಾ, ಭಂಗ್, ತುಳಸಿ ದಳ, ಮಂದಾರ್ ಹೂಗಳು, ಹಾಲು, ಕರ್ಪೂರ, ಧೂಪ, ದೀಪ, ಹತ್ತಿ ಸೇರಿ ಹಲವು ವಸ್ತುಗಳನ್ನಿಟ್ಟು ಶಿವನನ್ನು ಪೂಜಿಸಲಾಗುತ್ತದೆ. ಈ ದಿನ ಉಪವಾಸವಿದ್ದು, ಪರಮೇಶ್ವರನನ್ನು ಪೂಜಿಸಿದರೆ ಶುಭ ಕಾರ್ಯಗಳು ನಡೆಯಲಿವೆ ಅನ್ನೋದು ಭಕ್ತರ ನಂಬಿಕೆ