ETV Bharat / bharat

ಹಿಮಾಚಲ ಪ್ರದೇಶದಲ್ಲಿ ಮೊದಲ ಬಾರಿ ವಿಶ್ವದ ಅತೀ ವಿಷಕಾರಿ ಕಾಳಿಂಗ ಸರ್ಪ ಪತ್ತೆ - ವಿಷಕಾರಿ ಹಾವು

ಪ್ರವೀಣ್ ಎಂಬ ಸ್ಥಳೀಯ ಮೊದಲಿಗೆ ಈ ಹಾವನ್ನು ಕಂಡಿದ್ದನು. ಆತ ತನ್ನ ನಾಯಿಯ ಜೊತೆ ವಾಕಿಂಗ್ ಹೋದಾಗ ಹಾವು ಎದುರಾಗಿತ್ತು. ಸುಮಾರು 12ರಿಂದ 15 ಉದ್ದದ ಹಾವು ಕಂಡು ಪ್ರವೀಣ್ ಭಯದಿಂದ ಅಲ್ಲಿಂದ ವಾಪಾಸಾಗಿದ್ದರು. ಬಳಿಕ ವನ್ಯಜೀವಿ ಇಲಾಖೆಗೆ ಮಾಹಿತಿ ನೀಡಿದ್ದರು.

worlds-longest-snake-king-cobra-seen-in-sirmaur-district
ವಿಶ್ವದ ಅತೀ ವಿಷಕಾರಿ ಕಾಳಿಂಗ ಸರ್ಪ ಪತ್ತೆ
author img

By

Published : Jun 4, 2021, 4:28 PM IST

ನಾಹನ್ (ಹಿಮಾಚಲ ಪ್ರದೇಶ): ಇಲ್ಲಿನ ಶಿವಾಲಿಕ್ ಬೆಟ್ಟದಲ್ಲಿ ವಿಶ್ವದ ಅತ್ಯಂತ ವಿಷಕಾರಿ ಸರ್ಪ ಕಿಂಗ್ ಕೋಬ್ರಾ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಇಡೀ ರಾಜ್ಯದಲ್ಲಿಯೇ ಕಾಳಿಂಗ ಸರ್ಪ ಪತ್ತೆಯಾಗಿರಲಿಲ್ಲವಂತೆ. ಕಳೆದ ಐದಾರು ದಿನಗಳಿಂದ ಹಾವಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದಾದ ಎರಡ್ಮೂರು ದಿನಗಳಲ್ಲಿ ಕೋಲಾರ್​ ಪಂಚಾಯತ್​​ನ ಫಾಂಡಿ ಗ್ರಾಮದಲ್ಲಿ ಬೃಹತ್ ಗಾತ್ರದ ಹಾವು ಪತ್ತೆಯಾಗಿದೆ.

ಕಿಂಗ್​ ಕೋಬ್ರಾ ನೋಡಲು ಮುಗಿಬಿದ್ದ ಜನ

ವನ್ಯಜೀವಿ ತಜ್ಞರ ಪ್ರಕಾರ ಕಿಂಗ್ ಕೋಬ್ರಾ ದಟ್ಟ ಮಳೆ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಲ್ಲದೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇವುಗಳ ಸಂತತಿ ಹೇರಳವಾಗಿದೆ. ಇದಲ್ಲದೆ ಉತ್ತರಾಖಂಡ್​ನ ಕೆಲವು ಜಿಲ್ಲೆಯಲ್ಲೂ ಇವು ಕಂಡುಬಂದಿದ್ದವು, ಆದರೆ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು, ಇದೇ ಮೊದಲು ಎಂದಿದ್ದಾರೆ.

ಹೀಗಾಗಿ ಕಿಂಗ್ ಕೋಬ್ರಾ ಹಾವು ನೋಡುವಲ್ಲಿ ಜನರು ಮುಗಿಬಿದ್ದಿದ್ದು, ಅಚ್ಚರಿಗೆ ಒಳಗಾಗಿದ್ದಾರೆ. ಸ್ಥಳೀಯರು ಮೊದಲಿಗೆ ಈ ಹಾವನ್ನು ನೊಡಿದ್ದು, ಅವರಿಗೆ ಇದು ಕಾಳಿಂಗ ಸರ್ಪ ಎಂಬುದು ತಿಳಿದಿರಲಿಲ್ಲ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಗುರುತು ಪತ್ತೆ ಮಾಡಿದ್ದಾರೆ.

12ರಿಂದ 15 ಅಡಿ ಉದ್ದದ ಬೃಹತ್ ಸರ್ಪ

ಪ್ರವೀಣ್ ಎಂಬ ಸ್ಥಳೀಯ ಮೊದಲಿಗೆ ಈ ಹಾವನ್ನು ಕಂಡಿದ್ದನು. ಆತ ತನ್ನ ನಾಯಿಯ ಜೊತೆ ವಾಕಿಂಗ್ ಹೋದಾಗ ಹಾವು ಎದುರಾಗಿತ್ತು. ಸುಮಾರು 12ರಿಂದ 15 ಉದ್ದದ ಹಾವು ಕಂಡು ಪ್ರವೀಣ್ ಭಯದಿಂದ ಅಲ್ಲಿಂದ ವಾಪಾಸಾಗಿದ್ದರು. ಬಳಿಕ ವನ್ಯಜೀವಿ ಇಲಾಖೆಗೆ ಮಾಹಿತಿ ನೀಡಿದ್ದರು.

ನಾಹನ್ (ಹಿಮಾಚಲ ಪ್ರದೇಶ): ಇಲ್ಲಿನ ಶಿವಾಲಿಕ್ ಬೆಟ್ಟದಲ್ಲಿ ವಿಶ್ವದ ಅತ್ಯಂತ ವಿಷಕಾರಿ ಸರ್ಪ ಕಿಂಗ್ ಕೋಬ್ರಾ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಇಡೀ ರಾಜ್ಯದಲ್ಲಿಯೇ ಕಾಳಿಂಗ ಸರ್ಪ ಪತ್ತೆಯಾಗಿರಲಿಲ್ಲವಂತೆ. ಕಳೆದ ಐದಾರು ದಿನಗಳಿಂದ ಹಾವಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದಾದ ಎರಡ್ಮೂರು ದಿನಗಳಲ್ಲಿ ಕೋಲಾರ್​ ಪಂಚಾಯತ್​​ನ ಫಾಂಡಿ ಗ್ರಾಮದಲ್ಲಿ ಬೃಹತ್ ಗಾತ್ರದ ಹಾವು ಪತ್ತೆಯಾಗಿದೆ.

ಕಿಂಗ್​ ಕೋಬ್ರಾ ನೋಡಲು ಮುಗಿಬಿದ್ದ ಜನ

ವನ್ಯಜೀವಿ ತಜ್ಞರ ಪ್ರಕಾರ ಕಿಂಗ್ ಕೋಬ್ರಾ ದಟ್ಟ ಮಳೆ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಲ್ಲದೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇವುಗಳ ಸಂತತಿ ಹೇರಳವಾಗಿದೆ. ಇದಲ್ಲದೆ ಉತ್ತರಾಖಂಡ್​ನ ಕೆಲವು ಜಿಲ್ಲೆಯಲ್ಲೂ ಇವು ಕಂಡುಬಂದಿದ್ದವು, ಆದರೆ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು, ಇದೇ ಮೊದಲು ಎಂದಿದ್ದಾರೆ.

ಹೀಗಾಗಿ ಕಿಂಗ್ ಕೋಬ್ರಾ ಹಾವು ನೋಡುವಲ್ಲಿ ಜನರು ಮುಗಿಬಿದ್ದಿದ್ದು, ಅಚ್ಚರಿಗೆ ಒಳಗಾಗಿದ್ದಾರೆ. ಸ್ಥಳೀಯರು ಮೊದಲಿಗೆ ಈ ಹಾವನ್ನು ನೊಡಿದ್ದು, ಅವರಿಗೆ ಇದು ಕಾಳಿಂಗ ಸರ್ಪ ಎಂಬುದು ತಿಳಿದಿರಲಿಲ್ಲ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಗುರುತು ಪತ್ತೆ ಮಾಡಿದ್ದಾರೆ.

12ರಿಂದ 15 ಅಡಿ ಉದ್ದದ ಬೃಹತ್ ಸರ್ಪ

ಪ್ರವೀಣ್ ಎಂಬ ಸ್ಥಳೀಯ ಮೊದಲಿಗೆ ಈ ಹಾವನ್ನು ಕಂಡಿದ್ದನು. ಆತ ತನ್ನ ನಾಯಿಯ ಜೊತೆ ವಾಕಿಂಗ್ ಹೋದಾಗ ಹಾವು ಎದುರಾಗಿತ್ತು. ಸುಮಾರು 12ರಿಂದ 15 ಉದ್ದದ ಹಾವು ಕಂಡು ಪ್ರವೀಣ್ ಭಯದಿಂದ ಅಲ್ಲಿಂದ ವಾಪಾಸಾಗಿದ್ದರು. ಬಳಿಕ ವನ್ಯಜೀವಿ ಇಲಾಖೆಗೆ ಮಾಹಿತಿ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.