ದಾಮೋಹ್(ಮಧ್ಯಪ್ರದೇಶ): ದಾಮೋಹ್ ಜಿಲ್ಲೆಯ ಕುಂದಲ್‌ಪುರದಲ್ಲಿ ವಿಶ್ವದ ಅತಿ ದೊಡ್ಡ ಜೈನ ಮಂದಿರ ನಿರ್ಮಾಣವಾಗುತ್ತಿದೆ. ಈ ದೇವಾಲಯದ ವಿಶೇಷವೆಂದರೇ ಇದನ್ನು ಕಟ್ಟಲು ಕಬ್ಬಿಣ ಮತ್ತು ಸಿಮೆಂಟ್ ಬಳಸಿಲ್ಲ.
ಕುಂದಲ್‌ಪುರದಲ್ಲಿ ಜೈನ ಧರ್ಮದ ಮೊದಲ ತೀರ್ಥಂಕರ ಭಗವಾನ್ ಆದಿನಾಥರ ನಾಗರ ಶೈಲಿಯಲ್ಲಿ ವಿಶ್ವದ ಅತಿ ದೊಡ್ಡ ದೇವಾಲಯ ನಿರ್ಮಿಸಲಾಗುತ್ತಿದೆ. ಈ ಭವ್ಯ ಜೈನ ಮಂದಿರದ ಕಾಮಗಾರಿ ಕಳೆದ 16 ವರ್ಷಗಳಿಂದ ನಡೆಯುತ್ತಿದೆ. ಈ ದೇವಾಲಯದಲ್ಲಿ 12 ಲಕ್ಷ ಕ್ಯೂಬಿಕ್ ಮೀಟರ್ ಕಲ್ಲುಗಳನ್ನು ಬಳಸಲಾಗಿದೆ. ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದಾದ ಬಡೇಬಾಬಾರವರ ಪ್ರತಿಮೆಯನ್ನು ಈ ದೇವಾಲಯದಲ್ಲಿ ಸ್ಥಾಪಿಸಲಾಗುತ್ತಿದೆ.
ದಮೋಹ್ ಜಿಲ್ಲಾ ಕೇಂದ್ರದಿಂದ 36 ಕಿ.ಮೀ ದೂರದಲ್ಲಿರುವ ಜೈನ ಯಾತ್ರಾಸ್ಥಳವಾದ ಕುಂದಲ್‌ಪುರದಲ್ಲಿ ಬಡೇ ಬಾಬಾರ ದೇವಾಲಯವನ್ನು ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ. 500 ಅಡಿ ಎತ್ತರದ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಈ ದೇವಾಲಯದ ಶಿಖರವು 189 ಅಡಿ ಎತ್ತರವಿದೆ. ಇದುವರೆಗೆ ನಾಗರ ಶೈಲಿಯಲ್ಲಿ ಇಷ್ಟು ಎತ್ತರವಾದ ದೇವಾಲಯ ಜಗತ್ತಿನಲ್ಲಿಯೇ ಇಲ್ಲ ಎನ್ನಲಾಗುತ್ತಿದೆ. ಅಕ್ಷರಧಾಮ ದೇವಾಲಯವನ್ನು ವಿನ್ಯಾಸಗೊಳಿಸಿದ ಸೋಂಪುರ ಸಹೋದರರು ದೇವಾಲಯದ ರೇಖಾಚಿತ್ರ ವಿನ್ಯಾಸವನ್ನು ಸಿದ್ಧಪಡಿಸಿದ್ದಾರೆ.
ದೇವಸ್ಥಾನದ ವಿಶೇಷತೆ ಎಂದರೆ ಅದರಲ್ಲಿ ಕಬ್ಬಿಣ, ಬೇರಿಯಾ, ಸಿಮೆಂಟ್ ಬಳಸಿಲ್ಲ. ಇದನ್ನು ಗುಜರಾತ್ ಮತ್ತು ರಾಜಸ್ಥಾನದ ಕೆಂಪು - ಹಳದಿ ಕಲ್ಲುಗಳಿಂದ ಕೆತ್ತಲಾಗಿದೆ. ಒಂದು ಕಲ್ಲನ್ನು ಇನ್ನೊಂದಕ್ಕೆ ಸಂಪರ್ಕಿಸಲು ವಿಶೇಷ ತಂತ್ರವನ್ನು ಸಹ ಬಳಸಲಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶದ ಮದುವೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ ಮಹಿಳೆ- ವಿಡಿಯೋ ವೈರಲ್
189 ಅಡಿ ಎತ್ತರದ ಈ ಜೈನ ಮಂದಿರ ನಿರ್ಮಾಣಕ್ಕೆ ಸುಮಾರು 600 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ ಈವರೆಗೆ ಸುಮಾರು 400 ಕೋಟಿ ರೂ.ನಲ್ಲಿ ಕಲ್ಲಿನಿಂದ ಮಾಡಿದ ಈ ದೇವಾಲಯವನ್ನು ದಿಲ್ವಾರಾ ಮತ್ತು ಖಜುರಾಹೋ ಮಾದರಿಯಲ್ಲಿ ಅದ್ಭುತವಾಗಿ ಕೆತ್ತಲಾಗಿದೆ. ಕುಂದಲ್ಪುರದ ಈ ಭವ್ಯ ಜೈನ ಮಂದಿರದ ಕಾಮಗಾರಿ ಕಳೆದ 16 ವರ್ಷಗಳಿಂದ ನಡೆಯುತ್ತಿದೆ. ಈ ದೇವಾಲಯದಲ್ಲಿ 12 ಲಕ್ಷ ಕ್ಯೂಬಿಕ್ ಮೀಟರ್ ಕಲ್ಲುಗಳನ್ನು ಬಳಸಲಾಗಿದೆ. ಈ ದೇವಾಲಯದಲ್ಲಿ ಮುಖ್ಯ ಶಿಖರ, ನೃತ್ಯ ಮಂಟಪ, ಬಣ್ಣದ ಮಂಟಪವನ್ನು ನಿರ್ಮಿಸಲಾಗಿದೆ.
ಕುಂದಲ್‌ಪುರದಲ್ಲಿ 5, 6ನೇ ಶತಮಾನದ್ದು ಎನ್ನಲಾದ 63 ದೇವಾಲಯಗಳಿವೆ. ಈ ಪ್ರದೇಶವು 2,500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಇಲ್ಲಿ 1008 ಆದಿನಾಥ ಭಗವಾನ್ ಅವರ 1,500 ವರ್ಷಗಳಷ್ಟು ಹಳೆಯದಾದ ಪ್ರತಿಮೆಗಳು ಇದ್ದು, ಅವರನ್ನು ಬಡೇ ಬಾಬಾ ಎಂದು ಕರೆಯಲಾಗುತ್ತದೆ.
ಮುಖ್ಯ ದೇವಾಲಯದ ಸುತ್ತಲೂ ಬೃಹತ್ ಬೆಟ್ಟಗಳ ಮೇಲೆ ವಿವಿಧ ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಒಂದರಲ್ಲಿ ಮಾತಾ ರುಕ್ಮಣಿಯ ಕಲ್ಲಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಮತ್ತೊಂದೆಡೆ ನೀವು ಕುಂದಲ್‌ಪುರ ಮುಖ್ಯ ದ್ವಾರದ ಒಳಗೆ ಪ್ರವೇಶಿಸಿದ ತಕ್ಷಣ ಬಲಭಾಗದಲ್ಲಿ ಒಂದು ದೊಡ್ಡ ಕೊಳವೂ ಇದೆ. ಮುಖ್ಯ ದೇವಾಲಯಕ್ಕೆ ಹೋಗುವ ಆ ಕೊಳದ ಕಡೆಯಿಂದ ಮೇಲಕ್ಕೆ ಹೋಗಲು ದಾರಿಯಿದೆ. ಈ ಕೊಳದ ಸೌಂದರ್ಯವು ಈ ಪ್ರದೇಶವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.