ಹೈದರಾಬಾದ್: ವಿಶ್ವದಾದ್ಯಂತ 8,55,20,216 ಜನರಿಗೆ ಮಹಾಮಾರಿ ಕೋವಿಡ್ ಅಂಟಿದ್ದು, ಇವರಲ್ಲಿ 18.5 ಲಕ್ಷಕ್ಕೂ ಹೆಚ್ಚು (18,50,941) ಮಂದಿ ಬಲಿಯಾಗಿದ್ದಾರೆ. ಆದರೆ ಸೋಂಕಿತರ ಪೈಕಿ 6,04,86,965 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಪ್ರಪಂಚದ ಹಲವೆಡೆ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಹಾಗೂ ಲಸಿಕೆ ಸಿಗುತ್ತಿದೆ ಎನ್ನುವಷ್ಟರಲ್ಲಿ ಇಂಗ್ಲೆಂಡ್ನಲ್ಲಿ ಪತ್ತೆಯಾದ ಹೊಸ ಪ್ರಭೇದದ ಕೋವಿಡ್ ವೈರಸ್ ಈಗ ತಲೆನೋವಾಗಿದೆ. ಭಾರತದಲ್ಲಿ ಇಂದು ಮತ್ತೆ 9 ಮಂದಿಗೆ ಬ್ರಿಟನ್ ಸೋಂಕು ಅಂಟಿದ್ದು, ದೇಶದಲ್ಲಿನ ರೂಪಾಂತರಿ ಕೊರೊನಾ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.
ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 2,11,13,528 ಇದ್ದು, ಮೃತರ ಸಂಖ್ಯೆ 3,60,078ಕ್ಕೆ ಏರಿಕೆಯಾಗಿದೆ.
ಕೇಸ್ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 1,03,41,291 ಕೇಸ್ಗಳು ಪತ್ತೆಯಾಗಿದ್ದು, 1,49,686 ಜನರು ವೈರಸ್ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 77,33,746 ಪ್ರಕರಣಗಳು ಹಾಗೂ 1,96,018 ಸಾವುಗಳು ವರದಿಯಾಗಿದೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 32,36,787 ಕೇಸ್ಗಳಿದ್ದು, 58,506 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ 9 ಮಂದಿಗೆ ಇಂಗ್ಲೆಂಡ್ ಸೋಂಕು ದೃಢ... 38ಕ್ಕೆ ಏರಿಕೆಯಾದ ರೂಪಾಂತರಿ ಕೇಸ್
ಅಮೆರಿಕ, ಬ್ರೆಜಿಲ್, ಭಾರತದ ಬಳಿಕ ಸಾವಿನ ಸಂಖ್ಯೆಯಲ್ಲಿ ಮೆಕ್ಸಿಕೋ, ಇಂಗ್ಲೆಂಡ್ ಹಾಗೂ ಇಟಲಿ ಕ್ರಮವಾಗಿ 4,5 ಹಾಗೂ 6ನೇ ಸ್ಥಾನದಲ್ಲಿವೆ. ಒಟ್ಟು 218 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ ಪೀಡಿತ ವಿಶ್ವದ ಟಾಪ್ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.
ಕೋವಿಡ್ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್ಗಳು ಪತ್ತೆಯಾಗುತ್ತಿವೆ. 2019ರ ಡಿಸೆಂಬರ್ನಿಂದ ಈವರೆಗೆ ಚೀನಾದಲ್ಲಿ 87,150 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.