ಹೈದರಾಬಾದ್: ನಾವು ಕ್ರಿಸ್ಮಸ್, ಹೊಸವರ್ಷದ ಹೊಸ್ತಿಲಲ್ಲಿ ಇದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, "ಕೊರೊನಾ ನಮ್ಮ ಆಚರಣೆಗಳ ವಿಧಾನವನ್ನು ಬದಲಾಯಿಸಿದೆ. ಇದರರ್ಥ ನಾವು ಆಚರಿಸಲು ಸಾಧ್ಯವಿಲ್ಲ ಎಂದಲ್ಲ. ಆದರೆ ಜನಸಂದಣಿಯನ್ನು ತಪ್ಪಿಸಿ, ಮಾರ್ಗದರ್ಶನಗಳನ್ನು ಅನುಸರಿಸಿ ಪ್ರೀತಿಪಾತ್ರರೊಂದಿಗೆ ಸುರಕ್ಷಿತವಾಗಿ ಆಚರಿಸಿ" ಎಂದು ಹೇಳಿದ್ದಾರೆ.
-
We all want to be with our loved ones during the upcoming holidays, but we mustn't be complacent. #COVID19 is changing the way we celebrate, but it doesn’t mean we can’t celebrate. Be safe: follow local guidance, stay with your household & avoid crowds. #InThisTogether pic.twitter.com/lQtsFKmumT
— Tedros Adhanom Ghebreyesus (@DrTedros) December 6, 2020 " class="align-text-top noRightClick twitterSection" data="
">We all want to be with our loved ones during the upcoming holidays, but we mustn't be complacent. #COVID19 is changing the way we celebrate, but it doesn’t mean we can’t celebrate. Be safe: follow local guidance, stay with your household & avoid crowds. #InThisTogether pic.twitter.com/lQtsFKmumT
— Tedros Adhanom Ghebreyesus (@DrTedros) December 6, 2020We all want to be with our loved ones during the upcoming holidays, but we mustn't be complacent. #COVID19 is changing the way we celebrate, but it doesn’t mean we can’t celebrate. Be safe: follow local guidance, stay with your household & avoid crowds. #InThisTogether pic.twitter.com/lQtsFKmumT
— Tedros Adhanom Ghebreyesus (@DrTedros) December 6, 2020
ವಿಶ್ವದಾದ್ಯಂತ ಬರೋಬ್ಬರಿ 6,74,02,219 ಜನರಿಗೆ ಕಿಲ್ಲರ್ ಕೊರೊನಾ ವೈರಸ್ ಅಂಟಿದ್ದು, 15,41,897 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ 4,65,89,492 ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,51,59,529 ಇದ್ದು, ಮೃತರ ಸಂಖ್ಯೆ 2,88,906ಕ್ಕೆ ಏರಿಕೆಯಾಗಿದೆ.
ಕೇಸ್ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 96,77,203 ಕೇಸ್ಗಳು ಪತ್ತೆಯಾಗಿದ್ದು, 1,40,590 ಜನರು ವೈರಸ್ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 66,03,540 ಪ್ರಕರಣಗಳು ಹಾಗೂ 1,76,962 ಸಾವುಗಳು ವರದಿಯಾಗಿದೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 24,60,770 ಕೇಸ್ಗಳಿದ್ದು, 43,141 ಜನರು ಸಾವನ್ನಪ್ಪಿದ್ದಾರೆ. ಒಟ್ಟು 218 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ ಪೀಡಿತ ವಿಶ್ವದ ಟಾಪ್ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.
ಕೋವಿಡ್ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್ಗಳು ಪತ್ತೆಯಾಗುತ್ತಿವೆ. 2019ರ ಡಿಸೆಂಬರ್ನಿಂದ ಈವರೆಗೆ ಚೀನಾದಲ್ಲಿ 86,634 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.