ETV Bharat / bharat

World Vegetarian Day: ಸಸ್ಯಾಹಾರ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ? - ಸಸ್ಯಾಹಾರಿ ದಿನ

ಸಸ್ಯಾಹಾರದ ಮಹತ್ವ, ಅದರ ಅಗತ್ಯತೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನಾಚರಣೆ ನಡೆಯುತ್ತದೆ. ವಿಶ್ವ ಸಸ್ಯಾಹಾರಿ ದಿನವನ್ನು ಮೊದಲು 1 ಅಕ್ಟೋಬರ್ 1977ರಂದು ಯುಕೆ ಸಸ್ಯಾಹಾರಿ ಸೊಸೈಟಿಯು ಆರಂಭಿಸಿದೆ.

World Vegetarian Day: Do Vegetarians Live Longer?
World Vegetarian Day: ಸಸ್ಯಾಹಾರ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ?
author img

By

Published : Oct 1, 2021, 1:49 PM IST

ಪ್ರತಿ ವರ್ಷ ಅಕ್ಟೋಬರ್ 1ನ್ನು ವಿಶ್ವ ಸಸ್ಯಾಹಾರಿ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದಿನಿಂದ ವಿಶ್ವ ಸಸ್ಯಾಹಾರಿ ಜಾಗೃತಿ ತಿಂಗಳಿನ ಆರಂಭವಾಗುತ್ತದೆ. ಸಸ್ಯಾಹಾರವನ್ನು ಆಯ್ಕೆ ಮಾಡಲು ಜನರನ್ನು ಪ್ರೇರೇಪಿಸುವುದು, ಅದರ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಪ್ರಾಣಿಗಳನ್ನು ಉಳಿಸುವುದು ಈ ದಿನ ಮತ್ತು ತಿಂಗಳಿನ ಮುಖ್ಯ ಉದ್ದೇಶವಾಗಿದೆ.

ಸಸ್ಯಾಹಾರದ ಮಹತ್ವ, ಅದರ ಅಗತ್ಯತೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನಾಚರಣೆ ನಡೆಯುತ್ತದೆ. ವಿಶ್ವ ಸಸ್ಯಾಹಾರಿ ದಿನವನ್ನು ಮೊದಲು 1 ಅಕ್ಟೋಬರ್ 1977ರಂದು ಯುಕೆ ಸಸ್ಯಾಹಾರಿ ಸೊಸೈಟಿಯು ಆರಂಭಿಸಿದೆ. ಈ ದಿನವನ್ನು ಉತ್ತರ ಅಮೆರಿಕದ ಸಸ್ಯಾಹಾರಿ ಸೊಸೈಟಿಯು ವಾರ್ಷಿಕವಾಗಿ ಅಂತಾರಾಷ್ಟ್ರೀಯ ಸಸ್ಯಾಹಾರಿ ಒಕ್ಕೂಟದ ಸಹಭಾಗಿತ್ವದಲ್ಲಿ ಆಚರಿಸುತ್ತದೆ.

World Vegetarian Day: Do Vegetarians Live Longer?
ವಿಶ್ವ ಸಸ್ಯಾಹಾರಿ ದಿನ

ಸಸ್ಯಾಹಾರಿಗಳು ಮಾಂಸಾಹಾರಿಗಳಿಗೆ ಹೋಲಿಸಿದರೆ ಸರಾಸರಿ 10 ವರ್ಷಗಳಿಗಿಂತ ಹೆಚ್ಚು ಬದುಕುತ್ತಾರೆ ಎಂದು ಅಮೆರಿಕದ ಲೋಮಾ ಲಿಂಡಾ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡದ ಸಂಶೋಧನೆಯಲ್ಲಿ ಸಾಬೀತಾಗಿದೆ. ಸಸ್ಯಾಹಾರಿ ಆಹಾರಕ್ಕೆ ಹೋಲಿಸಿದರೆ ಮಾಂಸಾಹಾರಿ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶ ಇರುತ್ತದೆ ಎಂಬ ನಂಬಿಕೆ ಈ ಮೊದಲಿತ್ತು. ಆದರೆ, ಪ್ರಸ್ತುತ ಎಲ್ಲ ವೈದ್ಯರು, ತಜ್ಞರು ಮತ್ತು ಪೌಷ್ಟಿಕತಜ್ಞರು ಸಸ್ಯಾಹಾರಿ ಆಹಾರವು ಆರೋಗ್ಯಕ್ಕೆ ಉತ್ತಮವಾಗಿದೆ ಎಂಬ ಅಂಶವನ್ನು ಒಪ್ಪುತ್ತಾರೆ.

ಸಸ್ಯಾಹಾರ ಸೇವನೆ ಏಕೆ?

ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧನೆಯ ಪ್ರಕಾರ, ಸಸ್ಯಾಹಾರಿ ಆಹಾರಗಳು ಬಹಳ ಪೌಷ್ಟಿಕ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗಿವೆ. ಇದರಲ್ಲಿರುವ ಕೊಬ್ಬಿನಾಮ್ಲಗಳ ಪ್ರಮಾಣವು ತುಂಬಾ ಕಡಿಮೆ, ಇದು ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸುತ್ತದೆ, ಇದರಿಂದಾಗಿ ಮಧುಮೇಹದ ಅಪಾಯ ಕಡಿಮೆ.

ಇಂದೋರ್ ಮೂಲದ ಪೌಷ್ಟಿಕತಜ್ಞೆ ಡಾ.ಸಂಗೀತಾ ಮಾಲು ಸಹ ಮಾಂಸಾಹಾರಿ ಆಹಾರಕ್ಕೆ ಹೋಲಿಸಿದರೆ ಸಸ್ಯಾಹಾರಿ ಆಹಾರವು ಎಲ್ಲ ರೀತಿಯಲ್ಲೂ ಉತ್ತಮ ಎಂದು ದೃಢಪಡಿಸಿದ್ದಾರೆ. ಸಸ್ಯಾಹಾರವು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು, ಏಕೆಂದರೆ ಸುಲಭವಾಗಿ ಜೀರ್ಣವಾಗುತ್ತದೆ. ನಾವು ನಿತ್ಯ ಹಣ್ಣುಗಳು, ತರಕಾರಿಗಳು ಮತ್ತು ಡೈರಿ ಉತ್ಪನ್ನಗಳಾದ ಹಾಲು, ಮೊಸರು ಮತ್ತು ಚೀಸ್ ಇತ್ಯಾದಿಗಳನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸಿದರೆ, ನಮಗೆ ಯಾವುದೇ ರೀತಿಯ ಪೌಷ್ಟಿಕಾಂಶದ ಪೂರಕ ಅಗತ್ಯವಿಲ್ಲ. ಇದರ ಜೊತೆಗೆ, ಈ ರೀತಿಯ ಆಹಾರವು ನಮ್ಮ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯಕವಾಗಿದೆ.

ಸಸ್ಯಾಹಾರದ ಕೆಲವು ಹೆಚ್ಚಿನ ಪ್ರಯೋಜನಗಳು:

  • ಸಸ್ಯಾಹಾರಿ ಆಹಾರವು ಜೀರ್ಣಕ್ರಿಯೆಗೆ ಅಗತ್ಯವಾದ ಸಾಕಷ್ಟು ಫೈಬರ್ ಅನ್ನು ಒದಗಿಸುತ್ತದೆ, ಇದು ದೇಹದ ಚಯಾಪಚಯ ಸುಧಾರಿಸುವುದರ ಜೊತೆಗೆ, ವಿಷಕಾರಿ ಅಂಶವನ್ನು ತ್ವರಿತವಾಗಿ ತೆಗೆದುಹಾಕಲು ನೆರವಾಗುತ್ತದೆ.
  • ಸಸ್ಯಾಹಾರಗಳಲ್ಲಿ ನೀರು ನೈಸರ್ಗಿಕವಾಗಿರುವುದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ.
  • ಸಸ್ಯಾಹಾರದಲ್ಲಿ ಸೋಡಿಯಂ ಮತ್ತು ಕೊಬ್ಬಿನಾಮ್ಲಗಳ ಪ್ರಮಾಣ ಕಡಿಮೆ. ಅಲ್ಲದೇ ಅಡುಗೆಯಲ್ಲಿ ಕಡಿಮೆ ಎಣ್ಣೆ ಸಹ ಬಳಸಲಾಗುತ್ತದೆ, ಹೀಗಾಗಿ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
  • ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸೇರಿದಂತೆ ಬಹುತೇಕ ಎಲ್ಲ ಪೋಷಕಾಂಶಗಳು ಸಸ್ಯಾಹಾರಿ ಆಹಾರದಲ್ಲಿ ಹೇರಳವಾಗಿ ಕಂಡುಬರುತ್ತವೆ.
  • ಪೆರ್ನಾಂಬುಕೊದ ಫೆಡರಲ್ ಯೂನಿವರ್ಸಿಟಿಯ ಸಂಶೋಧನೆಯ ಪ್ರಕಾರ, ಸಸ್ಯಾಹಾರಿ ಆಹಾರವನ್ನು ಸೇವಿಸುವ ಜನರು ಸೋರಿಯಾಸಿಸ್​​ನಂತಹ ಚರ್ಮ ರೋಗಗಳಲ್ಲಿ ಸುಧಾರಣೆ ಕಂಡುಬಂದಿದೆ.
  • ಕ್ರೊಯೇಷಿಯಾದ ವೈದ್ಯಕೀಯ ಸಂಶೋಧನೆ ಮತ್ತು ಔದ್ಯೋಗಿಕ ಆರೋಗ್ಯ ಸಂಸ್ಥೆಯ ಪ್ರಕಾರ, ಸಸ್ಯಾಹಾರಿಗಳು ಕಡಿಮೆ ಮಟ್ಟದ ನರರೋಗ ಹೊಂದಿದ್ದಾರೆ, ಇದು ಮೂಡ್ ಸ್ವಿಂಗ್‌ಗಳನ್ನು ನಿಯಂತ್ರಣದಲ್ಲಿರಿಸುತ್ತದೆ.
  • ಸಸ್ಯಾಹಾರದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಮಾಂಸಾಹಾರಿ ಆಹಾರಕ್ಕಿಂತ ಕಡಿಮೆ ಎಂದು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ, ಈ ಕಾರಣದಿಂದಾಗಿ ಸಸ್ಯಾಹಾರಿಗಳಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಕಡಿಮೆ ಕಂಡು ಬರುತ್ತದೆ.
  • ಮಾಂಸಾಹಾರವು ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳ ಮೂಲವೆಂದು ತಿಳಿದು ಬಂದಿದೆ, ಇದರ ಪ್ರಮಾಣ ಅಧಿಕವಾದರೆ ಅಪಧಮನಿಗಳಲ್ಲಿ ಅಡಚಣೆ ಉಂಟಾಗವುದಲ್ಲದೆ, ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ, ಸಸ್ಯಾಹಾರದಲ್ಲಿ ಅನಾರೋಗ್ಯಕರ ಕೊಬ್ಬಿನ ಪ್ರಮಾಣವು ತುಲನಾತ್ಮಕವಾಗಿ ಕಡಿಮೆಯಾಗಿದೆ, ಇದು ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.