ETV Bharat / bharat

ಮೋದಿ ನಾಯಕತ್ವದಿಂದಾಗಿ ಜಗತ್ತು ಇಂದು ನವ ಭಾರತವನ್ನು ನೋಡುತ್ತಿದೆ: ವಿದೇಶಾಂಗ ಸಚಿವ ಜೈಶಂಕರ್ - ಪಪುವಾ ನ್ಯೂಗಿನಿಯಾ

ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ ಸೇರಿ ಮೂರು ರಾಷ್ಟ್ರಗಳ ಆರು ದಿನಗಳ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಇಂದು ದೆಹಲಿಗೆ ಆಗಮಿಸಿದರು. ಪಾಲಂ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಅದ್ದೂರಿ ಸ್ವಾಗತ ಕೋರಿದರು.

world-seeing-new-india-because-of-pm-modis-leadership-eam-jaishankar
ಮೋದಿ ನಾಯಕತ್ವದಿಂದಾಗಿ ಜಗತ್ತು ಇಂದು ನವ ಭಾರತವನ್ನು ನೋಡುತ್ತಿದೆ: ವಿದೇಶಾಂಗ ಸಚಿವ ಜೈಶಂಕರ್
author img

By

Published : May 25, 2023, 3:50 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದಾಗಿ ಜಗತ್ತು ಇಂದು ನವ ಭಾರತವನ್ನು ಕಾಣುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಗುರುವಾರ ತಿಳಿಸಿದ್ದಾರೆ. ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ ಸೇರಿ ಮೂರು ರಾಷ್ಟ್ರಗಳ ಆರು ದಿನಗಳ ಪ್ರವಾಸ ಮುಗಿಸಿ ಮೋದಿ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ ಜೈಶಂಕರ್ ಹೇಳಿಕೆ ನೀಡಿದರು.

ಪಪುವಾ ನ್ಯೂಗಿನಿಯಾದ ಪ್ರಧಾನಿಯವರು ಪ್ರಧಾನಿ ಮೋದಿ ಅವರನ್ನು 'ವಿಶ್ವ ಗುರು' ಎಂದು ಹೇಳಿದರು. ಆಸ್ಟ್ರೇಲಿಯಾದ ಪ್ರಧಾನಿಗಳು ಮೋದಿ ಅವರನ್ನು 'ದಿ ಬಾಸ್' ಎಂದು ಕರೆದರು. ಇಂದು ಭಾರತದ ಚಿತ್ರಣ... ಭಾರತದ ಕೀರ್ತಿ... ವಿಶ್ವದಲ್ಲಿ ಭಾರತದ ಸ್ಥಾನ ಇಷ್ಟು ಎತ್ತರಕ್ಕೆ ಬೆಳೆದಿದ್ದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ. ಇದನ್ನು ನಾನು ಹೊಸ ಆರಂಭ ಎಂದೇ ಹೇಳುತ್ತೇನೆ ಎಂದು ವಿದೇಶಾಂಗ ಸಚಿವರು ಹೇಳಿದರು.

ಮೂರು ರಾಷ್ಟ್ರಗಳ ಪ್ರವಾಸದಿಂದ ಮರಳಿದ ಪ್ರಧಾನಿ ಮೋದಿ ಅವರನ್ನು ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸ್ವಾಗತಿಸಿದರು. ಮೋದಿ ಅವರನ್ನು ಉದ್ದೇಶಿಸಿ ನಡ್ಡಾ ಸಹ ಮಾತನಾಡಿ, ನಿಮ್ಮ ಆಡಳಿತದ ಮಾದರಿಯನ್ನು ಜಗತ್ತು ಮೆಚ್ಚುತ್ತದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಿಮ್ಮ ಆಟೋಗ್ರಾಫ್ ಕೇಳಿದರು. ಇದು ನಿಮ್ಮ ನಾಯಕತ್ವದಲ್ಲಿ ಜಗತ್ತು ಭಾರತವನ್ನು ಹೇಗೆ ನೋಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಡೆಹ್ರಾಡೂನ್‌ - ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಮುಂದುವರೆದು, ಪಪುವಾ ನ್ಯೂಗಿನಿ ಪ್ರಧಾನಿಯವರು ನಿಮ್ಮ ಪಾದಗಳನ್ನು ಸ್ಪರ್ಶಿಸಿದ ರೀತಿ ಅಲ್ಲಿ ನಿಮಗೆ ಎಷ್ಟು ಗೌರವವಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ಪ್ರಧಾನಿಯನ್ನು ಈ ರೀತಿ ಸ್ವಾಗತಿಸುತ್ತಿರುವುದನ್ನು ನೋಡಿದಾಗ ಭಾರತದ ಜನರು ಹೆಮ್ಮೆಪಡುತ್ತಾರೆ ಎಂದು ನಡ್ಡಾ ಹೇಳಿದರು. ಇದಕ್ಕೂ ಮುನ್ನ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ನಡ್ಡಾ ಮತ್ತು ಪಕ್ಷದ ನಾಯಕರು ಹೂವಿನ ಹಾರ ಬರ ಮಾಡಿಕೊಡರು.

ಅಲ್ಲದೇ, ನಡ್ಡಾ ಅವರೊಂದಿಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಸಚಿವೆ ಮೀನಾಕ್ಷಿ ಲೇಖಿ, ಮಾಜಿ ಕೇಂದ್ರ ಸಚಿವ ಹರ್ಷವರ್ಧನ್, ದೆಹಲಿ ಸಂಸದ ರಮೇಶ್ ವಿಧುರಿ, ಹನ್ಸ್​ರಾಜ್ ಹನ್ಸ್ ಮತ್ತು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್ವೀರ್ ಸಿಂಗ್ ಬಿಧುರಿ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಜೊತೆಗೆ ಪಾಲಂ ವಿಮಾನ ನಿಲ್ದಾಣದ ಹೊರಗೆ ಹೆಚ್ಚಿನ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಮೋದಿ ಅವರನ್ನು ಸ್ವಾಗತಿಸಲು ಜಮಾಯಿಸಿದ್ದರು.

ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನಾನು ವಿದೇಶಗಳಲ್ಲಿ ಭೇಟಿಯಾದ ಎಲ್ಲ ನಾಯಕರು, ಮಾತುಕತೆ ನಡೆಸಿದ ಮಹತ್ವದ ಗಣ್ಯ ವ್ಯಕ್ತಿಗಳು ಭಾರತ ಜಿ20 ಅಧ್ಯಕ್ಷ ಸ್ಥಾನ ಅಲಂಕರಿಸಿರುವುದಕ್ಕೆ ತುಂಬಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ದೇಶದ ಪ್ರತಿ ನಾಗರಿಕನಿಗೂ ಅಪಾರ ಹೆಮ್ಮೆ ತರುವ ಸಂಗತಿ. ದೇಶದ ಒಳಿತಿಗೋಸ್ಕರ ನಾನು ಸಮಯ ಬಳಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: 'ದೇಶದ ಒಳಿತಿಗೋಸ್ಕರ ಸಮಯ ಬಳಸಿದ್ದೇನೆ': 3 ದೇಶಗಳ ಪ್ರವಾಸದಿಂದ ಮರಳಿದ ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.