ETV Bharat / bharat

ಕೇವಲ 110 ಗಂಟೆ..  75 ಕಿ.ಮೀ ರಸ್ತೆ ನಿರ್ಮಾಣ: ವಿಶ್ವದಾಖಲೆಯ ಗುರಿ - fastest road construction

fastest road construction: ಮಹಾರಾಷ್ಟ್ರದ ಅಮರಾವತಿ - ಅಕೋಲಾ ರಸ್ತೆಯು, ಕತಾರ್‌ನ ಅತ್ಯಂತ ವೇಗದ ರಸ್ತೆ ನಿರ್ಮಾಣದ ವಿಶ್ವದಾಖಲೆಯನ್ನು ಮುರಿಯಲು ಸಜ್ಜಾಗಿದೆ. 75 ಕಿ.ಮೀ ರಸ್ತೆಯ ನಿರ್ಮಾಣವನ್ನು ಕೇವಲ 110 ಗಂಟೆಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿಯೇ 800 ನೌಕರರು ಮತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ecord will cover 75 km from Loni to Mana in 110 consecutive hours
110 ಗಂಟೆಯಲ್ಲಿ 75 ಕಿ.ಮೀ ರಸ್ತೆ ನಿರ್ಮಾಣ
author img

By

Published : Jun 3, 2022, 9:40 PM IST

ಅಮರಾವತಿ (ಮಹಾರಾಷ್ಟ್ರ): ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದ ಮಹಾರಾಷ್ಟ್ರದ ಅಮರಾವತಿ - ಅಕೋಲಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೇವಲ 110 ಗಂಟೆಗಳಲ್ಲಿ 75 ಕಿಲೋಮೀಟರ್ ರಸ್ತೆ ನಿರ್ಮಿಸಿ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆಯಲು ಅಧಿಕಾರಿಗಳು ಎಲ್ಲ ಪ್ರಯತ್ನ ನಡೆಸುತ್ತಿದ್ದಾರೆ. ಶುಕ್ರವಾರ (ಜೂನ್ 3) ಬೆಳಗ್ಗೆ 7 ಗಂಟೆಗೆ ಕಾಮಗಾರಿ ಆರಂಭಗೊಂಡಿದ್ದು, ಜೂನ್ 7ರ ಸಂಜೆಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದರೆ, ವಿಶ್ವದಾಖಲೆ ನಿರ್ಮಾಣವಾಗಲಿದೆ.

ಅಮರಾವತಿ - ಅಕೋಲಾ ರಸ್ತೆ ಕಳೆದ 10 ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿತ್ತು. ಈ ಹಿಂದೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಮೂರು ಕಂಪನಿಗಳಿಗೆ ವಹಿಸಲಾಗಿತ್ತು. ಆದರೆ, ಗುತ್ತಿಗೆದಾರರು ಕಾಮಗಾರಿ ಮಾಡಲು ವಿಳಂಬ ಮಾಡುತ್ತಿದ್ದರು. ಇದರಿಂದಾಗಿ ಜನರು ಅಮರಾವತಿಯಿಂದ ಅಕೋಲಾಗೆ ಹೋಗಲು ದರ್ಯಾಪುರ ರಸ್ತೆಯನ್ನು ಬಳಸುತ್ತಿದ್ದರು. ರಾಜ್ಯದ ಇತಿಹಾಸದಲ್ಲೇ ಅತ್ಯಂತ ಹದಗೆಟ್ಟ ರಸ್ತೆ ಎಂದೇ ಹೆಸರಾಗಿರುವ ಈ ರಸ್ತೆ ಇದೀಗ ದಾಖಲೆ ನಿರ್ಮಿಸಲು ಹೊರಟಿದೆ.

ಮಹಾರಾಷ್ಟ್ರದ ಅಮರಾವತಿ-ಅಕೋಲಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ

ನಾಲ್ಕು ಹಂತದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ಬುಲ್ಡಾನಾ ಜಿಲ್ಲೆಯ ಅಮರಾವತಿಯಿಂದ ಚಿಖಾಲಿ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 53ರಲ್ಲಿ ನಾಲ್ಕು ಹಂತಗಳಲ್ಲಿ ಕಾಮಗಾರಿ ಆರಂಭವಾಗಿದೆ. ಇದಕ್ಕೂ ಮುನ್ನ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ನಿರ್ಮಾಣ ವಿಳಂಬವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಿಗಮವು ಇನ್‌ಫ್ರಾಕಾನ್‌ಗೆ ರಸ್ತೆ ಕಾಮಗಾರಿಯನ್ನು ಹಸ್ತಾಂತರಿಸಿದೆ.

ಇದನ್ನೂ ಓದಿ: ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ - ಕೊಲೆ ಪ್ರಕರಣ: ತಂದೆ -ತಾಯಿಗೆ ಮರಣದಂಡನೆ

ಪ್ರಾಜೆಕ್ಟ್ ಮ್ಯಾನೇಜರ್, ಹೈವೇ ಇಂಜಿನಿಯರ್, ಕ್ವಾಲಿಟಿ ಇಂಜಿನಿಯರ್, ಸರ್ವೇಯರ್, ಸೇಫ್ಟಿ ಇಂಜಿನಿಯರ್ ಸೇರಿದಂತೆ ಒಟ್ಟು 800 ನೌಕರರು ಈ ಕೆಲಸ ಮಾಡುತ್ತಿದ್ದಾರೆ. ಈ ಹೆದ್ದಾರಿಯಲ್ಲಿರುವ ಮನ ಕ್ಯಾಂಪ್ ನಲ್ಲಿ ಆಡಳಿತ ಮಂಡಳಿ ವತಿಯಿಂದ ವಾರ್ ರೂಂ ನಿರ್ಮಿಸಲಾಗಿದೆ. ಇದು 4 ಹಾಟ್ ಮಿಕ್ಸರ್‌ಗಳು, 4 ಬಿಲ್ಡರ್‌ಗಳು, 1 ಮೊಬೈಲ್ ಫೀಡರ್, ಎಡಿಮಾ ರೋಲರ್, 166 ಹೈವ್ಸ್​​ ಮತ್ತು 2 ನ್ಯೂಮ್ಯಾಟಿಕ್ ಟೈರ್‌ಗಳನ್ನು ಹೊಂದಿದೆ. ರಾಜಪಥ್ ಇನ್ಫ್ರಾಕಾನ್ ಪ್ರೈ. ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಕದಂ ಮಾತನಾಡಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.