ETV Bharat / bharat

ವಿಶ್ವ ತಂಬಾಕುರಹಿತ ದಿನ: ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ.. ತಂಬಾಕು ತ್ಯಜಿಸಿ ಉತ್ತಮ ಬದುಕು ನಿಮ್ಮದಾಗಿಸಿ.. - ತಂಬಾಕು ತ್ಯಜಿಸಿ ವಿಜೇತರಾಗಿ

ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸ್ತುತ ಪರಿಸ್ಥಿತಿಯಲ್ಲಿ ಧೂಮಪಾನ ರೂಪದ ತಂಬಾಕು ಸೇವನೆ ಅನೇಕ ಉಸಿರಾಟದ ಸೋಂಕುಗಳಿಗೆ ಕಾರಣವಾಗುವುದು ಅಪಾಯಕಾರಿ ಅಂಶ ಎಂಬುದು ತಿಳಿದಿರುವುದೇ ಆಗಿದೆ ಮತ್ತು ಧೂಮಪಾನ ಉಸಿರಾಟದ ಕಾಯಿಲೆಗಳ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

no tobacco day
ವಿಶ್ವ ತಂಬಾಕು ರಹಿತ ದಿನ
author img

By

Published : May 31, 2021, 6:01 AM IST

ಬೆಂಗಳೂರು: ತಂಬಾಕು ಬಳಕೆಯ ಹಾನಿಕಾರಕ ಮತ್ತು ಮಾರಕ ಪರಿಣಾಮಗಳ ಕುರಿತು ಹಾಗೂ ಪರೋಕ್ಷ ಧೂಮಪಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಲ್ಲದೆ, ಯಾವುದೇ ರೂಪದಲ್ಲಿ ತಂಬಾಕು ಬಳಕೆಯನ್ನು ತಡೆಗಟ್ಟುವ ಪ್ರಯತ್ನಗಳಿಗೆ ಒಂದು ಉತ್ತಮ ಅವಕಾಶ ಒದಗಿಸುತ್ತಿದೆ.

ತಂಬಾಕು ಸೇವನೆಯು ಕ್ಯಾನ್ಸರ್​ನಿಂದ ಶುರುವಾಗಿ ವಿವಿಧ ದೀರ್ಘಕಾಲದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳವರೆಗೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.‌ ಹೀಗಾಗಿ ಈ ಕುರಿತು ಜಾಗೃತಿ ಮೂಡಿಸುವುದು ವಿಶ್ವ ತಂಬಾಕು ರಹಿತ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.‘‘ವಿಜೇತರಾಗಲು ತಂಬಾಕನ್ನು ತ್ಯಜಿಸಿ’’ ಎಂಬುದು ಪ್ರಸ್ತುತ, 2021ರ ಸಾಲಿನ ಘೋಷ-ವಾಕ್ಯವಾಗಿದೆ. ಈ ಅಭಿಯಾನವು ತಂಬಾಕು ನಿಯಂತ್ರಣದ ಹೊಣೆಹೊತ್ತಿರುವ, ವಿವಿಧ ಕ್ಷೇತ್ರಗಳ ಜನ, ಸಂಘಸಂಸ್ಥೆಗಳು ಮತ್ತು ಸರ್ಕಾರಗಳ ಗಮನವನ್ನು ಸೆಳೆದು ತಂಬಾಕು ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಲು ಪರಿಣಾಮಕಾರಿ ನೀತಿಗಳನ್ನು ರೂಪಿಸಿ ಜಾರಿಗೊಳಿಸುವ ಕ್ರಮಗಳನ್ನು ಕೈಗೊಳ್ಳುವತ್ತ ಒಂದು ಎಚ್ಚರಿಕೆಯ ಕರೆಗಂಟೆಯಾಗಿದೆ.

ಪ್ರತಿ ವರ್ಷ, ತಂಬಾಕು ಕನಿಷ್ಠ 8 ದಶಲಕ್ಷ ಜನರನ್ನು ಕೊಲ್ಲುತ್ತಿದೆ. ಲಕ್ಷಾಂತರ ಜನರು ಶ್ವಾಸಕೋಶದ ಕ್ಯಾನ್ಸರ್, ಕ್ಷಯ, ಆಸ್ತಮಾ ಅಥವಾ ತಂಬಾಕಿನಿಂದ ಉಂಟಾಗುವ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದಾರೆ. 2017ರಲ್ಲಿ, ತಂಬಾಕು 3.3 ದಶಲಕ್ಷ ತಂಬಾಕು ಬಳಕೆದಾರರನ್ನು ಬಲಿತೆಗೆದುಕೊಂಡಿತು. ಇಂತಹವರ ಧೂಮಪಾನದಿಂದ ಪರೋಕ್ಷ ಧೂಮಪಾನಕ್ಕೆ ಒಳಗಾದವರಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಉಂಟಾಗುತ್ತಿವೆ. ಧೂಮಪಾನದ ಹೊಗೆಯಿಂದ ಉಸಿರಾಟದ ಸೋಂಕಿನಿಂದಾಗಿ, ವಾರ್ಷಿಕವಾಗಿ, 5 ವರ್ಷದೊಳಗಿನ 60,000ಕ್ಕೂ ಹೆಚ್ಚು ಮಕ್ಕಳು ಸಾಯುತ್ತಿದ್ದಾರೆ. ಸೋಂಕಿನಿಂದ ಬುದುಕುಳಿದವರು ತಮ್ಮ ಪ್ರೌಢಾವಸ್ಥೆ ತಲುಪುವ ಜೀವಿತಾವಧಿಯಲ್ಲಿ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗೆ (ಸಿಒಪಿಡಿ) ತುತ್ತಾಗುವ ಸಾಧ್ಯತೆಯಿದೆ.

ಭಾರತೀಯ ಉಪಖಂಡದಲ್ಲಿ ತಂಬಾಕು ಬಳಕೆ ಶತಮಾನಗಳಷ್ಟು ಹಳೆಯದು, ತಂಬಾಕು ಜಗಿಯುವುದು ಮತ್ತು ಧೂಮಪಾನ ಮಾಡುವುದು ಎಂಬುವು ಎರಡು ಪ್ರಮುಖ ತಂಬಾಕು ಬಳಕೆಯ ವಿಧಾನಗಳು. ತಂಬಾಕು ಬಳಕೆಯಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ದೇಶವಾದರೆ, ತಂಬಾಕು ಉತ್ಪಾದನೆಯಲ್ಲಿ ನಮ್ಮದು ವಿಶ್ವದ ಮೂರನೇ ಅತಿ ದೊಡ್ಡ ದೇಶವಾಗಿದೆ. ಪುರುಷರಲ್ಲಿ ಒಟ್ಟಾರೆ ತಂಬಾಕು ಬಳಕೆಯ ಪ್ರಮಾಣ ಶೇ.48ರಷ್ಟು ಮತ್ತು ಮಹಿಳೆಯರಲ್ಲಿ ಶೇ.20ರಷ್ಟು ಆಗಿದೆ.ಭಾರತದಲ್ಲಿ ಶೇ.35ಕ್ಕಿಂತ ಹೆಚ್ಚು ವಯಸ್ಕರು (274.5 ದಶಲಕ್ಷ) ತಂಬಾಕು ಬಳಸುತ್ತಾರೆ ಎಂದು ದತ್ತಾಂಶಗಳು ತೋರಿಸುತ್ತಿವೆ. ಇವರಲ್ಲಿ 163.7 ದಶಲಕ್ಷ ಜನರು ಮಾತ್ರ ಧೂಮಪಾನಕ್ಕೆ ಹೊರತಾದ ರೀತಿಯಲ್ಲಿ ತಂಬಾಕನ್ನು ಸೇವಿಸುತ್ತಾರೆ. 68.9 ದಶಲಕ್ಷ ಜನರು ಕೇವಲ ಧೂಮಪಾನಿಗಳಾಗಿದ್ದರೆ, 42.3 ದಶಲಕ್ಷ ಜನರು ಧೂಮಪಾನ ಮತ್ತು ಇತರೆ ರೂಪದಲ್ಲಿ ತಂಬಾಕಿನ ಸೇವನೆ ಮಾಡುವವರಾಗಿದ್ದಾರೆ. 15 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ಜನಸಂಖ್ಯೆಯ ಶೇ.30ಕ್ಕಿಂತ ಹೆಚ್ಚು ಜನರು ಹಲವು ರೀತಿಯಲ್ಲಿ ತಂಬಾಕನ್ನು ಬಳಸುತ್ತಾರೆ. ಇದರಲ್ಲಿ 13-15 ವರ್ಷ ವಯಸ್ಸಿನ ಮಕ್ಕಳ ಪ್ರಮಾಣವು ಶೇ.14.6ರಷ್ಟು ಇದೆ. ಧೂಮಪಾನಿಗಳಲ್ಲದ, ಆದರೆ, ತಂಬಾಕು ಜಗಿಯುವ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಧೂಮಪಾನ ರೂಪದ ತಂಬಾಕು ಬಳಕೆ ಹೆಚ್ಚು. ಸಿಗರೇಟ್‍ಗಿಂತ ಬೀಡಿಗಳ ಸೇವನೆಯೇ ಹೆಚ್ಚು.

ತಂಬಾಕು ಸೇವನೆಯಿಂದ ಯಾವೆಲ್ಲ ಅಂಗಗಳಿಗೆ ಹಾನಿ

ತಂಬಾಕು ಬಳಕೆಯು ದೇಹದ ಪ್ರತಿಯೊಂದು ಪ್ರಮುಖ ಅಂಗಗಳು ಮತ್ತು ಇತರೆ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಇದು ಕಾಯಿಲೆಯನ್ನು ಉಲ್ಬಣಗೊಳಿಸುತ್ತದೆ ಹಾಗೂ ಅಕಾಲಿಕ ಸಾವಿಗೆ ಕಾರಣವಾಗುತ್ತದೆ. ಯಾವುದೇ ರೂಪದಲ್ಲಿ ತಂಬಾಕು ಸೇವನೆಯು ಬಾಯಿ, ಗಂಟಲು, ಧ್ವನಿಪೆಟ್ಟಿಗೆ, ಮೆದುಳು, ಅನ್ನನಾಳ, ಶ್ವಾಸಕೋಶ, ಪಿತ್ತಕೋಶ, ಮೂತ್ರಪಿಂಡ ಮತ್ತು ಸ್ತನ ಸೇರಿದಂತೆ ದೇಹದ ವಿವಿಧ ಅಂಗಗಳ ಕ್ಯಾನ್ಸರ್​ಗೆ ಕಾರಣವಾಗಬಹುದು.

ತಂಬಾಕು ಸೇವನೆಯು ಹೃದಯ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಪಾಶ್ರ್ವವಾಯು, ಕುರುಡುತನ, ಹಲ್ಲು ಮತ್ತು ಒಸಡು ಕಾಯಿಲೆಗಳು ಮುಂತಾದ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಮ್ಮ ದೇಶದಲ್ಲಿ, ಎಲ್ಲಾ ಕ್ಯಾನ್ಸರ್‍ಗಳ ಪೈಕಿ, ಪುರುಷರ ಕ್ಯಾನ್ಸರ್ ಸುಮಾರು ಶೇ.45ರಷ್ಟು, ಮಹಿಳೆಯರ ಕ್ಯಾನ್ಸರ್ ಸುಮಾರು ಶೇ.20ರಷ್ಟು ಮತ್ತು ಶೇ.80ಕ್ಕಿಂತ ಹೆಚ್ಚು ಬಾಯಿಯ ಕ್ಯಾನ್ಸರ್ ಪ್ರಕರಣಗಳು ನೇರವಾಗಿ ತಂಬಾಕು ಬಳಕೆಗೆ ಸಂಬಂಧಿಸಿದ್ದಾಗಿವೆ.

ಕಿದ್ವಾಯಿಯಲ್ಲಿ ಪ್ರತಿವರ್ಷ 3,000ಕ್ಕೂ ಹೆಚ್ಚು ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳು

ಬೆಂಗಳೂರು ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಾವಣೆಯ ಪ್ರಕಾರ ತಂಬಾಕು ಸಂಬಂಧಿತ ಕ್ಯಾನ್ಸರ್ ರೋಗಿಗಳ ಸರಾಸರಿ ವಯೋಮಾನ ಹೊಂದಾಣಿಕೆಯ ಪ್ರಮಾಣವು ಒಂದು ಲಕ್ಷ ಪುರುಷರಲ್ಲಿ 40 ಮತ್ತು ಒಂದು ಲಕ್ಷ ಮಹಿಳೆಯರಲ್ಲಿ 21 ಆಗಿದೆ. ಕಿದ್ವಾಯಿ ಸಂಸ್ಥೆಯಲ್ಲಿ ಪ್ರತಿವರ್ಷ 3,000ಕ್ಕೂ ಹೆಚ್ಚು ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳಲ್ಲಿ ಹೆಚ್ಚಿನ ರೋಗಿಗಳು ರೋಗದ ಉಲ್ಬಣಾವಸ್ಥೆಯಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿಕಿತ್ಸೆಯು ಕಷ್ಟಕರ ಮತ್ತು ಹೆಚ್ಚು ಫಲದಾಯಕವಾಗುವುದಿಲ್ಲ ಅಂತ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರಾದ ಡಾ ರಾಮಚಂದ್ರ ಮಾಹಿತಿ ನೀಡಿದ್ದಾರೆ.

ತಂಬಾಕು ಸಂಬಂಧಿತ ಕ್ಯಾನ್ಸರ್​ಗಳು/ ಇತರೆ ರೋಗಗಳು ಪ್ರಾಥಮಿಕವಾಗಿ ತಡೆಗಟ್ಟಬಹುದು ಎಂಬುದು ತಿಳಿದ ವಿಷಯವೇ.‌ ಆದರೆ ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಕಾಯಿಲೆಗಳ ನಿಯಂತ್ರಣಕ್ಕಾಗಿ ಕಾರ್ಯನೀತಿಗಳು ಮತ್ತು ಕಾರ್ಯತಂತ್ರಗಳ ರೂಪದಲ್ಲಿ ಯೋಜಿತ ಪ್ರಯತ್ನಗಳು ಆಗಬೇಕಾದುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ತೆರಿಗೆ ಹೇರಿಕೆ, ಜಾಹೀರಾತು ನಿಷೇಧ, ಹೊಗೆ ಮುಕ್ತಗೊಳಿಸಲು ಕಾರ್ಯನೀತಿಗಳು ಮತ್ತು ತಂಬಾಕು ಉದ್ಯಮದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ರಕ್ಷಣೆ ಸೇರಿದಂತೆ ಹೆಚ್ಚುತ್ತಿರುವ ಪರಿಣಾಮಕಾರಿ ತಂಬಾಕು ನಿಯಂತ್ರಣ ನೀತಿಗಳ ಅನುಷ್ಠಾನವನ್ನು ಬೆಂಬಲಿಸಲು ವಿಶ್ವ ಆರೋಗ್ಯ ಸಂಸ್ಥೆಯು ಒಂದು ಪಾರಂಪರಿಕ ಕಾರ್ಯಚೌಕಟ್ಟಿನೊಳಗೆ ವಿವರವಾದ ಮಾರ್ಗದರ್ಶನವನ್ನು ನೀಡುತ್ತಿದೆ. ಆದರೆ, ವಿಶ್ವದ ಹೆಚ್ಚಿನ ಭಾಗಗಳಲ್ಲಿ, ಈ ಮಾರ್ಗದರ್ಶೀ ಸೂತ್ರಗಳನ್ನು ಪರಿಣಾಮಕಾರೀ ಶಾಸನಗಳನ್ನಾಗಿ ರೂಪಿಸುವುದು ಬಹಳ ದೂರವೇ ಉಳಿದಿದೆ.

ಜಗಿಯುವ ತಂಬಾಕನ್ನು ಭಾರತ ಸರ್ಕಾರವು ನಿಷೇಧಿಸಿದ್ದರೂ, ಇದನ್ನು ದೇಶಾದ್ಯಂತ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ. ಯುವಕರು ಈ ರೀತಿಯ ತಂಬಾಕಿಗೆ ಬಲಿಯಾಗುತ್ತಿದ್ದಾರೆ ಮತ್ತು ಇದು ಕಾನೂನುಬಾಹಿರ ಹಾಗೂ ಇದರಿಂದ ಸರ್ಕಾರಕ್ಕೆ ಯಾವುದೇ ಆದಾಯವಿಲ್ಲ.

ಧೂಮಪಾನಿಗಳಿಗೆ ಕೋವಿಡ್-19 ಸೋಂಕಿನಿಂದ ತೀವ್ರ ಹಾನಿ

ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸ್ತುತ ಪರಿಸ್ಥಿತಿಯಲ್ಲಿ ಧೂಮಪಾನ ರೂಪದ ತಂಬಾಕು ಸೇವನೆ ಅನೇಕ ಉಸಿರಾಟದ ಸೋಂಕುಗಳಿಗೆ ಕಾರಣವಾಗುವುದು ಅಪಾಯಕಾರಿ ಅಂಶ ಎಂಬುದು ತಿಳಿದಿರುವುದೇ ಆಗಿದೆ ಮತ್ತು ಧೂಮಪಾನ ಉಸಿರಾಟದ ಕಾಯಿಲೆಗಳ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. 2020ರ ಏಪ್ರಿಲ್ 29ರಂದು ವಿಶ್ವ ಆರೋಗ್ಯ ಸಂಸ್ಥೆಯು ನಡೆಸಿದ ಸಾರ್ವಜನಿಕ ಆರೋಗ್ಯ ತಜ್ಞರ ಅಧ್ಯಯನಗಳ ಪರಿಶೀಲನೆಯ ಪ್ರಕಾರ, ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಧೂಮಪಾನಿಗಳಿಗೆ ಕೋವಿಡ್-19 ತೀವ್ರವಾಗಿ ಉಂಟಾಗುವ ಸಾಧ್ಯತೆಯಿದೆ ಎಂದು ಕಂಡುಬಂದಿದೆ.

ಕೋವಿಡ್-19 ಸಾಂಕ್ರಾಮಿಕ ರೋಗವಾಗಿದ್ದು ಅದು ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ಆಕ್ರಮಣ ನಡೆಸುತ್ತದೆ. ಧೂಮಪಾನವು ಶ್ವಾಸಕೋಶದ ಕಾರ್ಯವನ್ನು ಕುಂಠಿತಗೊಳಿಸುತ್ತದೆ. ಇದರಿಂದ ಕೊರೊನಾ ವೈರಸ್ ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಡಲು ದೇಹಕ್ಕೆ ಕಷ್ಟಕರವಾಗುತ್ತದೆ. ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್, ಉಸಿರಾಟದ ಕಾಯಿಲೆ ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಉಂಟಾಗಲು ತಂಬಾಕು ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದೆ. ಇಂತಹ ಕಾಯಿಲೆಗಳು ಈಗಾಗಲೇ ಇರುವವರಿಗೆ ಕೋವಿಡ್-19 ಸೋಂಕು ತಗುಲಿದರೆ, ಅವರ ಅನಾರೋಗ್ಯವು ಮತ್ತಷ್ಟು ತೀವ್ರವಾಗುವ ಅಪಾಯವಿದೆ.

ಧೂಮಪಾನಿಗಳು ಕೋವಿಡ್-19ರಿಂದಾಗಿ ರೋಗತೀವ್ರತೆಗೆ ಒಳಗಾಗುವ ಮತ್ತು ಸಾವಿಗೆ ತುತ್ತಾಗುವ ಅಪಾಯ ಹೆಚ್ಚಾಗಿದೆ ಎಂದು ಸಂಶೋಧನಾ ಅಧ್ಯಯನಗಳು ದೃಢಪಡಿಸಿವೆ. ತಂಬಾಕು ಬಳಕೆ, ನಿಕೋಟಿನ್ ಬಳಕೆ ಮತ್ತು ಕೋವಿಡ್-19 ನಡುವಿನ ಸಂಬಂಧವನ್ನು ಪರಿಶೀಲಿಸುವ ಸಂಶೋಧನೆ ಸೇರಿದಂತೆ ಹೊಸ ಸಂಶೋಧನೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿದೆ. ತಂಬಾಕು ಅಥವಾ ನಿಕೋಟಿನ್ ಕೋವಿಡ್-19ರ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದು ದೃಢಪಪಟ್ಟಿಲ್ಲ. ಇಂತಹ ವಾದಗಳ ಕುರಿತು ಎಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧಕರು, ವಿಜ್ಞಾನಿಗಳು ವಿನಂತಿಸಿದ್ದಾರೆ. ಕೋವಿಡ್-19ಅನ್ನು ತಡೆಗಟ್ಟುವಲ್ಲಿ ಅಥವಾ ಚಿಕಿತ್ಸೆಯಲ್ಲಿ ತಂಬಾಕು ಅಥವಾ ನಿಕೋಟಿನ್ ಇವುಗಳ ಪರಸ್ಪರ ಸಂಬಂಧ ಇರುವ ಕುರಿತಾದ ಸಾಕಷ್ಟು ಪುರಾವೆಗಳು ಇಲ್ಲ.

ಇನ್ನು, ಕಿದ್ವಾಯಿ ಸ್ಮಾರಕ ಸಂಸ್ಥೆಯು ತನ್ನ ಸಮುದಾಯ ಗಂಥಿಶಾಸ್ತ್ರ ವಿಭಾಗದ ಮೂಲಕ ಜನಜಾಗೃತಿ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ನಡೆಸುತ್ತಿದೆ. 'ಕಿದ್ವಾಯಿ ನಡಿಗೆ ಗ್ರಾಮಗಳ ಕಡೆಗೆ' ಎಂಬ ಘೋಷವಾಕ್ಯದೊಂದಿಗೆ ಸಂಸ್ಥೆಯು ರಾಜ್ಯದ ವಿವಿಧ ಭಾಗಗಳಲ್ಲಿ ಮಾಸಿಕ ಸರಾಸರಿ 6-7 ಕ್ಯಾನ್ಸರ್ ಪತ್ತೆ ಶಿಬಿರಗಳನ್ನು ನಡೆಸುತ್ತಿದೆ. ಈ ಶಿಬಿರಗಳಲ್ಲಿ ಮೂರು ಪ್ರಮುಖ ಕ್ಯಾನ್ಸರ್ ರೋಗಗಳಾದ ಗರ್ಭಗೊರಳಿನ ಕ್ಯಾನ್ಸರ್, ಸ್ತನಕ್ಯಾನ್ಸರ್ ಮತ್ತು ಬಾಯಿ ಕ್ಯಾನ್ಸರ್ ಇವುಗಳ ತಡೆಗಟ್ಟುವಿಕೆ ಮತ್ತು ಆರಂಭಿಕಪತ್ತೆ ಕುರಿತಾದ ಜನಜಾಗೃತಿಗಾಗಿ ನಮ್ಮ ಸಂಸ್ಥೆಯ ತಜ್ಞರಿಂದ ಉಪನ್ಯಾಸಗಳನ್ನು ನಡೆಸಲಾಗುತ್ತಿದೆ. ಶ್ವಾಸಕೋಶದ ಸೋಂಕು ಅಥವಾ ತೀವ್ರ ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಕೋವಿಡ್-19 ತಪಾಸಣೆ ಅತ್ಯಗತ್ಯ. ಇಂತಹ ತೊಂದರೆ ಈಗಾಗಲೇ ಇರುವವರಿಗೆ ಕೋವಿಡ್-19 ಸೋಂಕು ತಗುಲುವ ಸಂಭವ ಹೆಚ್ಚಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.