ಹೈದರಾಬಾದ್: 2021ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮೆಚ್ಚುಗೆ ಪಡೆದ ಪುರುಷ/ಮಹಿಳೆಯರ ಪಟ್ಟಿ ಇದೀಗ ರಿಲೀಸ್ ಆಗಿದೆ. ಅಂತಾರಾಷ್ಟ್ರೀಯ ಸಮೀಕ್ಷೆವೊಂದರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ 8ನೇ ಸ್ಥಾನ ಪಡೆಕೊಂಡಿದ್ದು, ಅನೇಕ ದಿಗ್ಗಜ ಸೆಲಿಬ್ರಿಟಿಗಳನ್ನ ಹಿಂದಿಕ್ಕಿದ್ದಾರೆ.
ಪಟ್ಟಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೊದಲನೇ ಸ್ಥಾನ ಪಡೆದುಕೊಂಡಿದ್ದು, ಉದ್ಯಮಿ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.
-
World's Most Admired Men 2021 (1-10)
— YouGov America (@YouGovAmerica) December 14, 2021 " class="align-text-top noRightClick twitterSection" data="
1. Barack Obama 🇺🇸
2. Bill Gates 🇺🇸
3. Xi Jinping 🇨🇳
4. Cristiano Ronaldo 🇵🇹
5. Jackie Chan 🇨🇳
6. Elon Musk 🇿🇦
7. Lionel Messi 🇦🇷
8. Narendra Modi 🇮🇳
9. Vladimir Putin 🇷🇺
10. Jack Ma 🇨🇳https://t.co/aBRU8YhnJV pic.twitter.com/htWTGoharj
">World's Most Admired Men 2021 (1-10)
— YouGov America (@YouGovAmerica) December 14, 2021
1. Barack Obama 🇺🇸
2. Bill Gates 🇺🇸
3. Xi Jinping 🇨🇳
4. Cristiano Ronaldo 🇵🇹
5. Jackie Chan 🇨🇳
6. Elon Musk 🇿🇦
7. Lionel Messi 🇦🇷
8. Narendra Modi 🇮🇳
9. Vladimir Putin 🇷🇺
10. Jack Ma 🇨🇳https://t.co/aBRU8YhnJV pic.twitter.com/htWTGoharjWorld's Most Admired Men 2021 (1-10)
— YouGov America (@YouGovAmerica) December 14, 2021
1. Barack Obama 🇺🇸
2. Bill Gates 🇺🇸
3. Xi Jinping 🇨🇳
4. Cristiano Ronaldo 🇵🇹
5. Jackie Chan 🇨🇳
6. Elon Musk 🇿🇦
7. Lionel Messi 🇦🇷
8. Narendra Modi 🇮🇳
9. Vladimir Putin 🇷🇺
10. Jack Ma 🇨🇳https://t.co/aBRU8YhnJV pic.twitter.com/htWTGoharj
ಮ್ಯಾಂಚೆಸ್ಟರ್ ಯುನೈಟೆಡ್ನ ಕ್ರಿಸ್ಟಿಯಾನೋ ರೊನಾಲ್ಡೊ ಕೂಡ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 12ನೇ ಸ್ಥಾನದಲ್ಲಿದ್ದು, ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬಿಡನ್ 20ನೇ ಸ್ಥಾನದಲ್ಲಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ 17ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.ನಟ ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಕೂಡ 20ರ ಪಟ್ಟಿಯಲ್ಲಿದ್ದಾರೆ. ಬ್ರಿಟಿಷ್ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು ಅದಕ್ಕಾಗಿ 38 ದೇಶಗಳ 42,000 ಕ್ಕಿಂತಲೂ ಅಧಿಕ ಜನರನ್ನ ಸಮೀಕ್ಷೆಗೊಳಪಡಿಸಿದೆ.
ಇದನ್ನೂ ಓದಿರಿ: ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಹರಾಜು... ಬರೋಬ್ಬರಿ 44 ಲಕ್ಷ ರೂ. ನೀಡಿ ಬಿಡ್ ಗೆದ್ದ ವ್ಯಕ್ತಿ!
ಟಾಪ್ 10ರಲ್ಲಿ ಕಾಣಿಸಿಕೊಂಡಿರುವ ದಿಗ್ಗಜರು
- ಬರಾಕ್ ಒಬಾಮಾ(ಅಮೆರಿಕದ ಮಾಜಿ ಅಧ್ಯಕ್ಷ)
- ಬಿಲ್ ಗೇಟ್ಸ್(ಉದ್ಯಮಿ)
- ಕ್ಸಿ ಜಿನ್ ಪಿಂಗ್(ಚೀನಾ ಅಧ್ಯಕ್ಷ)
- ಕ್ರಿಸ್ಟಿಯಾನೋ ರೊನಾಲ್ಡ್(ಫುಟ್ಬಾಲ್ ಆಟಗಾರ)
- ಎಲೋನ್ ಮಸ್ಕ್ (ತೆಸ್ಲಾ ಮೋಟರ್ ಸಿಇಒ)
- ಲಿಯೊನೆಲ್ ಮೆಸ್ಸಿ(ಫುಟ್ಬಾಲ್ ಆಟಗಾರ)
- ನರೇಂದ್ರ ಮೋದಿ(ಭಾರತದ ಪ್ರಧಾನಿ)
- ವಾಡ್ಲಿಮೀರ್ ಪುಟಿನ್(ರಷ್ಯಾ ಅಧ್ಯಕ್ಷ)
- ಜಾಕ್ ಮಾ(ಚೀನಾ ಉದ್ಯಮಿ)
ಮಹಿಳೆಯರ ಪಟ್ಟಿಯಲ್ಲಿ ಯಾರೆಲ್ಲ?
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಚೆಲ್ ಒಬಾಮಾ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ನಟಿ ಪ್ರಿಯಾಂಕಾ ಚೋಪ್ರಾ 10ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ 11ನೇ ಸ್ಥಾನ, ನಟಿ ಐಶ್ವರ್ಯಾ ರೈ 13 ಹಾಗೂ ಉದ್ಯಮಿ ಸುಧಾಮೂರ್ತಿ 14ನೇ ಸ್ಥಾನದಲ್ಲಿದ್ದಾರೆ.