ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತ ಟೊಂಕ ಕಟ್ಟಿ ನಿಂತಿದ್ದು, ಈಗಾಗಲೇ ದೇಶದಲ್ಲಿ ಎರಡನೇ ಹಂತದ ಕೋವಿಡ್ ವ್ಯಾಕ್ಸಿನ್ ನೀಡುವ ಅಭಿಯಾನ ಆರಂಭಗೊಂಡಿದೆ. ಇದರ ಮಧ್ಯೆ ಭಾರತ ವಿವಿಧ ರಾಷ್ಟ್ರಗಳಿಗೆ ಲಸಿಕೆ ರವಾನೆ ಮಾಡಿ ಮೆಚ್ಚುಗೆಗೆ ಪಾತ್ರವಾಗಿದೆ.
-
Made in India COVID-19 vaccines reach Canada pic.twitter.com/8qivY8wbGL
— ANI (@ANI) March 4, 2021 " class="align-text-top noRightClick twitterSection" data="
">Made in India COVID-19 vaccines reach Canada pic.twitter.com/8qivY8wbGL
— ANI (@ANI) March 4, 2021Made in India COVID-19 vaccines reach Canada pic.twitter.com/8qivY8wbGL
— ANI (@ANI) March 4, 2021
ದೇಶದಲ್ಲಿ ಕೋವಿಡ್ ವ್ಯಾಕ್ಸಿನ್ ಅಭಿವೃದ್ಧಿಯಾಗಲು ಶುರುವಾದಾಗಿನಿಂದಲೂ ಇಲ್ಲಿಯವರೆಗೆ ಒಟ್ಟು 47 ದೇಶಗಳಿಗೆ ಲಸಿಕೆ ರವಾನೆ ಮಾಡಿದ್ದು, ಅದಕ್ಕಾಗಿ ವಿಶ್ವದ ನಾಯಕರು ನಮೋಗೆ ಧನ್ಯವಾದ ಹೇಳಿದ್ದಾರೆ.
ಇಲ್ಲಿಯವರೆಗೆ 4.64 ಕೋಟಿ ಭಾರತದಲ್ಲಿ ಅಭಿವೃದ್ಧಿಗೊಂಡಿರುವ ಕೋವಿಡ್-19 ವ್ಯಾಕ್ಸಿನ್ ಡೋಸ್ 47 ದೇಶಗಳಿಗೆ ರವಾನೆಯಾಗಿದೆ. ಇಂದು ಕೂಡ ಕೆನಡಾ,ಲೆಸೊಥೊ, ಹನಾ, ರುವಾಂಡಾ, ಸೆನೆಗಲ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಸೇರಿದಂತೆ ಅನೇಕ ದೇಶಗಳಿಗೆ ಲಸಿಕೆ ಕಳುಹಿಸಲಾಗಿದೆ. ಭಾರತ 71.25 ಲಕ್ಷ ಡೋಸ್ ಉಚಿತವಾಗಿ ಹಾಗೂ 3.93 ಕೋಟಿ ಡೋಸ್ ಮಾರಾಟ ಮಾಡಿದ್ದು, ಎಲ್ಲ ದೇಶಗಳಿಂದಲೂ ಭಾರತಕ್ಕೆ ಅಭಿನಂದನೆ ಸಲ್ಲಿಕೆ ಮಾಡಿವೆ.
-
Consignment of Made in India Covid19 vaccines airlifted for Ghana, Rwanda, Senegal, Democratic Republic of Congo, and Côte d'Ivoire: Anurag Srivastava, Spokesperson, Ministry of External Affairs pic.twitter.com/tQimKYn281
— ANI (@ANI) March 4, 2021 " class="align-text-top noRightClick twitterSection" data="
">Consignment of Made in India Covid19 vaccines airlifted for Ghana, Rwanda, Senegal, Democratic Republic of Congo, and Côte d'Ivoire: Anurag Srivastava, Spokesperson, Ministry of External Affairs pic.twitter.com/tQimKYn281
— ANI (@ANI) March 4, 2021Consignment of Made in India Covid19 vaccines airlifted for Ghana, Rwanda, Senegal, Democratic Republic of Congo, and Côte d'Ivoire: Anurag Srivastava, Spokesperson, Ministry of External Affairs pic.twitter.com/tQimKYn281
— ANI (@ANI) March 4, 2021
ಭಾರತದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಅಂಟಿಗುವಾ, ಬಾರ್ಬುಡಾ ಪ್ರಧಾನಿ ಗ್ಯಾಸ್ಟನ್ ಬ್ರೌನ್, ಬೇರೆ ಯಾವುದೇ ನಾಯಕರಿಗೆ ಹೋಲಿಕೆ ಮಾಡಿದಾಗ ಪಿಎಂ ಮೋದಿ ಜಾಗತಿಕವಾಗಿ ದಯೆ, ಪರಾನುಭೂತಿಯ ನಾಯಕರಾಗಿದ್ದಾರೆ ಎಂದಿದ್ದು, ಕಳೆದ 100 ವರ್ಷಗಳಲ್ಲಿ ನಾವು ಕಂಡ ಅತ್ಯಂತ ಗಮನಾರ್ಹ ಉಪಕಾರಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಇತರ ಜತೆಗೆ ಬಾರ್ಬಡೋಸ್, ಕೆನಡಾ, ಬ್ರೆಜಿಲ್, ಮೆಕ್ಸಿಕೊ ಮತ್ತು ಅರ್ಜೆಂಟೀನಾ ಭಾರತಕ್ಕೆ ಧನ್ಯವಾದ ಅರ್ಪಿಸಿವೆ.
-
Thank you PM @miaamormottley. Special friendship between our nations has always helped us bridge geographic distances. #VaccineMaitri is proud to support vaccination efforts of Barbados and other CARICOM countries. https://t.co/8w3KytQpqu
— Narendra Modi (@narendramodi) March 4, 2021 " class="align-text-top noRightClick twitterSection" data="
">Thank you PM @miaamormottley. Special friendship between our nations has always helped us bridge geographic distances. #VaccineMaitri is proud to support vaccination efforts of Barbados and other CARICOM countries. https://t.co/8w3KytQpqu
— Narendra Modi (@narendramodi) March 4, 2021Thank you PM @miaamormottley. Special friendship between our nations has always helped us bridge geographic distances. #VaccineMaitri is proud to support vaccination efforts of Barbados and other CARICOM countries. https://t.co/8w3KytQpqu
— Narendra Modi (@narendramodi) March 4, 2021
ಆಫ್ರಿಕಾ, ಘಾನಾ, ಕಾಂಗೋ, ಅಂಗೋಲಾ, ನೈಜೀರಿಯಾ, ಕೀನ್ಯಾ, ಲೆಸೊಥೊ, ರುವಾಂಡಾ ಸುಡಾನ್ ಕೂಡ ಭಾರತದಿಂದ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದು, ಅಫ್ಘಾನಿಸ್ತಾನ, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ ಕೂಡ ಭಾರತ ನಿರ್ಮಿತ ಲಸಿಕೆ ಪಡೆದು, ಅಲ್ಲಿನ ಜನರಿಗೆ ನೀಡುತ್ತಿವೆ.