ETV Bharat / bharat

World Diabetes Day 2021: ಮಧುಮೇಹ ಆರೈಕೆಗೆ ಅವಕಾಶ ಈಗಲ್ಲವಾದರೆ ಮತ್ತೆ ಯಾವಾಗ? - ವಿಶ್ವ ಮಧುಮೇಹ ದಿನ 2021

ಮಧುಮೇದ ಕುರಿತು ಜಾಗೃತಿ ಮೂಡಿಸಲು ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನಾಗಿ (World Diabetes Day 2021) ಆಚರಿಸಲಾಗುತ್ತದೆ. 2021 ರಿಂದ 2023 ರವರೆಗೆ ವಿಶ್ವ ಮಧುಮೇಹ ದಿನದ ಸಾರಾಂಶವು 'ಮಧುಮೇಹ ಆರೈಕೆಗೆ ಅವಕಾಶ ಈಗಲ್ಲವಾದರೆ ಮತ್ತೆ ಯಾವಾಗ?' ಎಂಬುದಾಗಿದೆ..

World Diabetes Day 2021
ವಿಶ್ವ ಮಧುಮೇಹ ದಿನ
author img

By

Published : Nov 14, 2021, 7:14 AM IST

ಬೆಂಗಳೂರು : ಮಧುಮೇಹ ರೋಗವು (Diabetes) ಬಹು ಅಂಗಾಂಗಳನ್ನು ವ್ಯಾಪಿಸುವ ರೋಗ. ಇದು ಹೃದಯಾಘಾತ, ಮೂತ್ರಪಿಂಡದ ವೈಫಲ್ಯ, ಪಾರ್ಶ್ವವಾಯು, ಕುರುಡುತನ ಮತ್ತು ರಕ್ತಪರಿಚಲನೆಗೆ ಅಡಚಣೆಯಾಗಿ ಕಾಲುಗಳನ್ನು ತುಂಡರಿಸುವಂತಹ ದುಸ್ಥಿತಿಯನ್ನೂ ಉಂಟು ಮಾಡಬಲ್ಲದು.

ಹೀಗಾಗಿ, ಈ ಕುರಿತು ಜಾಗೃತಿ ಮೂಡಿಸಲು ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನಾಗಿ (World Diabetes Day 2021) ಆಚರಿಸಲಾಗುತ್ತದೆ. 2021ರಿಂದ 2023ರವರೆಗೆ ವಿಶ್ವ ಮಧುಮೇಹ ದಿನದ ಸಾರಾಂಶವು 'ಮಧುಮೇಹ ಆರೈಕೆಗೆ ಅವಕಾಶ ಈಗಲ್ಲವಾದರೆ ಮತ್ತೆ ಯಾವಾಗ?' ಎಂಬುದಾಗಿದೆ.

ಸಮತೋಲನ ಆಹಾರ, ದೈಹಿಕ ಚಟುವಟಿಕೆ ಮತ್ತು ತಂಬಾಕು ಸೇವನೆಯಿಂದ ದೂರವಿರುವುದರಿಂದ ಮಧುಮೇಹವನ್ನು ತಡೆಯಬಹುದು. ಇಲ್ಲವಾದರೆ ಮುಂದೂಡಬಹುದು. ಅಲ್ಲದೇ, ಮಧುಮೇಹವನ್ನು ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ನಿಯಂತ್ರಿಸಲು ಸಾಧ್ಯವಿದೆ. ತೊಡಕುಗಳು ಉಂಟಾಗುವುದನ್ನು ಮುಂದೂಡಬಹುದಾಗಿದೆ. ಇದನ್ನು ಸಾಧ್ಯವಾಗಿಸಲು ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ಮತ್ತು ಅಗತ್ಯ ಚಿಕಿತ್ಸೆಯನ್ನು ಪಡೆಯಬೇಕು.

ಅಂದಹಾಗೇ, ಮಿಲಿಯನ್​ಗಟ್ಟಲೆ ಮಧುಮೇಹಿಗಳಿಗೆ ಇನ್ನೂ ಸೂಕ್ತ ಆರೈಕೆ ಲಭ್ಯವಾಗುತ್ತಿಲ್ಲ. ಮಧುಮೇಹಿಗಳಿಗೆ ನಿರಂತರ ಗಮನಹರಿಸುವುದು ಮತ್ತು ಆರೈಕೆಯ ಅಗತ್ಯವಿರುತ್ತೆ. ಇಲ್ಲವಾದಲ್ಲಿ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆ ಇರುತ್ತೆ. ಎಲ್ಲಾ ಮಧುಮೇಹಿಗಳಿಗೆ ದೀರ್ಘಾವಧಿ ಚಿಕಿತ್ಸೆ, ತಂತ್ರಜ್ಞಾನದ ಸೌಲಭ್ಯ ಮತ್ತು ನಿರಂತರ ಆರೈಕೆಯನ್ನು ಯೋಜಿಸಲು ಸಮಯ ವ್ಯಯ ಮಾಡುವಂತಿಲ್ಲ.

ಹೀಗಾಗಿ, ಆರೋಗ್ಯ ಇಲಾಖೆಯು ಹಲವು ಯೋಜನೆಯನ್ನ ರೂಪಿಸಿಕೊಂಡಿದೆ. ಮಧುಮೇಹದಿಂದ ಬಾಧಿತರಾದವರಿಗೆ ಕೈಗೆಟುಕುವ ಮಟ್ಟದಲ್ಲಿ ಆರೈಕೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವುದು.‌ ನಿಯಮಿತವಾಗಿ ಪೂರ್ವಭಾವಿ ತಪಾಸಣೆ ಮಾಡುವ ಮೂಲಕ ಸಕಾಲದಲ್ಲಿ ರೋಗ ಪತ್ತೆ ಮಾಡಿ, ಕ್ಲಿಷ್ಟ ಪರಿಸ್ಥಿತಿ ಉಂಟಾಗದಂತೆ ಗಮನಹರಿಸುವುದು.

ಮಧುಮೇಹ ನಿಯಂತ್ರಣ ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯ ರೋಗಗಳು ಮತ್ತು ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮದ ಭಾಗವಾಗಿದೆ. ಈ ನಿಟ್ಟಿನಲ್ಲಿ 30ನೇ ವರ್ಷದಿಂದ 70ನೇ ವರ್ಷ ಅವಧಿಯಲ್ಲಿ ಅಸಾಂಕ್ರಾಮಿಕ ರೋಗಗಳಿಂದ ಸಂಭವಿಸುವ ಸಾವುಗಳನ್ನು 2030ನೇ ಇಸವಿಯ ಮೂರನೇ ಒಂದರಷ್ಟು ಇಳಿಸುವ ಗುರಿಯನ್ನ ಇಲಾಖೆ ಹೊಂದಿದೆ.

2010-2011ನೇ ಸಾಲಿನಿಂದ ಹಂತ ಹಂತವಾಗಿ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಕಾರ್ಯಕ್ರಮದ ಗುರಿ ಸಾಧಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾ ಆಸ್ಪತ್ರೆ ಮಟ್ಟದಲ್ಲಿ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕ್ಲಿನಿಕ್ (NCD Clinic)ಗಳನ್ನು ತೆರಯಲಾಗಿದೆ. ಈ ರೀತಿ 30 ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್​ಗಳು ಮತ್ತು ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ 347 ಸಿ.ಹೆಚ್.ಸಿ-ಎನ್.ಸಿ.ಡಿ ಕ್ಲಿನಿಕ್​ಗಳು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ಕಾರ್ಯನಿರ್ವಹಿಸುತ್ತಿವೆ.

ಇದಕ್ಕೆ ಫಲಾನುಭವಿಗಳು ಯಾರು?: 30 ಮತ್ತು 30 ವರ್ಷ ಮೇಲ್ಪಟ್ಟ ಎಲ್ಲರೂ ಈ ಕಾರ್ಯಕ್ರಮದ ಭಾಗವಾಗಿ ಪ್ರತಿ ವರ್ಷ ನಿಯಮಿತವಾಗಿ ಮಧುಮೇಹಕ್ಕೆ ಪೂರ್ವಭಾವಿ ತಪಾಸಣೆಗೆ ಒಳಪಡಬಹುದು. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಸ್ಥಳೀಯ ವೈದ್ಯರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.