ನವ ದೆಹಲಿ: ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಹೆಚ್ಐವಿ (ಮಾನವ ಇಮ್ಯುನೊ ಡಿಫಿಷಿಯೆನ್ಸಿ ವೈರಸ್) ಯೊಂದಿಗೆ ವಾಸಿಸುವ 38 ಮಿಲಿಯನ್ ಜನರನ್ನು ಬೆಂಬಲಿಸಲು ಮತ್ತು ಏಡ್ಸ್ (ಸ್ವಾಧೀನಪಡಿಸಿಕೊಂಡ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್)ಗೆ ತಮ್ಮ ಜೀವನವನ್ನು ಕಳೆದುಕೊಂಡವರನ್ನು ನೆನಪಿಟ್ಟುಕೊಳ್ಳಲು ನಾವು ಈ ದಿನವನ್ನು ಆಚರಿಸುತ್ತೇವೆ. ಈ ದಿನವು ಜನರು ಮತ್ತು ಖಾಸಗಿ ಪಾಲುದಾರರಿಗೆ ಸಾಂಕ್ರಾಮಿಕದ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಪಂಚದಾದ್ಯಂತ HIV/AIDS ತಡೆಗಟ್ಟುವಿಕೆ, ಆರೈಕೆ ಮತ್ತು ಚಿಕಿತ್ಸೆಯಲ್ಲಿ ಸುಧಾರಣೆಯನ್ನು ಉತ್ತೇಜಿಸಲು ಒಂದು ಅವಕಾಶವಾಗಿದೆ. ಈ ಮಹತ್ವದ ದಿನದಂದು ಹೆಚ್ಐವಿ/ಏಡ್ಸ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳನ್ನು ನೆನಪಿಸಿಕೊಳ್ಳುವುದಾದರೆ...
ಫ್ರೆಡ್ಡಿ ಮರ್ಕ್ಯುರಿ: ಇವರು ಬ್ರಿಟಿಷ್ ಗಾಯನ ಮತ್ತು ಗೀತರಚನೆಕಾರರಲ್ಲಿ ಸಾಕಷ್ಟು ಹೆಸರು ಮಾಡಿದವರು. ರಾಕ್ ಬ್ಯಾಂಡ್ ಕ್ವೀನ್‌ನ ಪ್ರಮುಖ ಗಾಯಕರಾಗಿ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದವರು. ರಾಕ್ ಸಂಗೀತದ ಇತಿಹಾಸದಲ್ಲಿ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಫ್ರೆಡ್ಡಿ ಏಡ್ಸ್ ವಿರುದ್ಧದ ಹೋರಾಟದಲ್ಲಿ ಸೋತವರು. ಕೇವಲ 45 ವರ್ಷದವರಾಗಿದ್ದಾಗ ಮಾರಕ ರೋಗ ಏಡ್ಸ್ಗೆ ತುತ್ತಾಗಿದ್ದ ಅವರು 31 ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದವರು. ಏಡ್ಸ್ ರೋಗ ಕಾಣಿಸಿಕೊಂಡ ಬಳಿಕವೂ ಎಷ್ಟೋ ದಿನಗಳ ಕಾಲ ಅವರು ಅದನ್ನು ರಹಸ್ಯವಾಗಿಟ್ಟಿದ್ದರು. ನವೆಂಬರ್ 24, 1991 ರಂದು ಅವರ ಅಕಾಲಿಕ ಮರಣದ ಕೆಲವೇ ಗಂಟೆಗಳ ಮುನ್ನ ತಮಗೆ ಏಡ್ಸ್ ರೋಗ ಇರುವುದಾಗಿ ಬಹಿರಂಗಪಡಿಸಿದ್ದರು.
ನನಗೆ ಹೆಚ್ಐವಿ ಪಾಸಿಟಿವ್ ಬಂದಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಏಡ್ಸ್ ರೋಗ ನನ್ನನ್ನು ಬದುಕಲು ಬಿಡುತ್ತಿಲ್ಲ. ಇದೀಗ ಅದರ ಬಗ್ಗೆ ಹೇಳಿಕೊಳ್ಳುವ ಕಾಲ ಬಂದಿದೆ. ನನ್ನ ಸುತ್ತಮುತ್ತಲಿನವರ ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ ಈ ಮಾಹಿತಿಯನ್ನು ಇಷ್ಟುದಿನಗಳ ಕಾಲ ಖಾಸಗಿಯಾಗಿ ಇಡುವುದು ಸೂಕ್ತವಾಗಿತ್ತು. ಆದರೆ, ಇದೀಗ ಪ್ರಪಂಚದಾದ್ಯಂತ ಇರುವ ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸತ್ಯವನ್ನು ತಿಳಿದುಕೊಳ್ಳುವ ಸಮಯ ಬಂದಿದೆ. ಈ ಭಯಾನಕ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಎಲ್ಲರೂ ನನ್ನೊಂದಿಗೆ ಸೇರಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕೊನೆಯ ಘಳಿಗೆಯಲ್ಲಿ ತಮ್ಮ ನೋವು ತೋಡಿಕೊಂಡಿದ್ದರು. HIV ಇರುವುದಾಗಿ ಬಹಿರಂಗವಾಗಿ ಹೇಳಿಕೊಂಡ ಸೆಲೆಬ್ರಿಟಿಗಳಲ್ಲಿ ಫ್ರೆಡ್ಡಿ ಮರ್ಕ್ಯುರಿ ಮೊದಲಿಗರು.
ಮ್ಯಾಜಿಕ್ ಜಾನ್ಸನ್: ಜಾನ್ಸನ್ ಒಬ್ಬ ಅಮೆರಿಕನ್ ಮಾಜಿ ವೃತ್ತಿಪರ ಬ್ಯಾಸ್ಕೆಟ್‌ಬಾಲ್ ಆಟಗಾರ. ಇವರು ಕೂಡ ತಮಗೆ ಗೊತ್ತಾಗದೇ ಈ ರೋಗಕ್ಕೆ ತುತ್ತಾದವರು. ತೀರಾ ಚರ್ಚೆಯಾಗುತ್ತಿದ್ದ ಸಮಯದಲ್ಲಿ ತಮಗೆ ಹೆಚ್ಐವಿ ಇದೆ ಎಂದು ಘೋಷಿಸುವ ಮೂಲಕ ಎಲ್ಲರನ್ನು ದಿಗ್ಭ್ರಮೆಗೊಳಿಸಿದರು. ಸದ್ಯ ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿರುವ ಅವರು ಹೆಚ್ಐವಿ ಮತ್ತು ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. 1991 ರಲ್ಲಿ HIV ಸೋಂಕಿಗೆ ಒಳಗಾಗುತ್ತಿದ್ದಂತೆ ಬ್ಯಾಸ್ಕೆಟ್ಬಾಲ್ನಿಂದ ಥಟ್ಟನೆ ನಿವೃತ್ತಿ ತೆಗೆದುಕೊಂಡರು. ಸದೃಢ ಕಾಯ ಹೊಂದಿದ್ದರಿಂದ ಮತ್ತೆ ವೃತ್ತಿಗೆ ಮರಳಿದರು. 36ನೇ ವಯಸ್ಸಿನಲ್ಲಿ ಮೂರನೇ ಮತ್ತು ಅಂತಿಮ ಬಾರಿಗೆ ನಿವೃತ್ತರಾಗುವ ಮೂಲಕ ಸುದ್ದಿಯಾದರು.
ಚಾಲೀ ಶೀನ್: ಅಮೆರಿಕನ್ ನಟರಾಗಿರುವ ಚಾಲೀ ಶೀನ್ ಅವರ ಮೂಲ ಹೆಸರು ಕಾರ್ಲೋಸ್ ಇರ್ವಿನ್ ಎಸ್ಟೇವೆಜ್. ಹಿರಿಕಿರಿ ಪರದೆಯಲ್ಲಿ ಹೆಸರು ಮಾಡಿದ್ದ ಚಾಲೀ ಶೀನ್ 2010ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು. ವೈಯಕ್ತಿಕ ಮತ್ತು ಖಾಸಗಿ ಜೀವನದಿಂದ ಶೀನ್ ಸಾಕಷ್ಟು ಸುದ್ದಿಯಾದವರು. ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆ ಸೇರಿದಂತೆ ವೈವಾಹಿಕ ಸಮಸ್ಯೆಗಳು ಹಾಗೂ ಕೌಟುಂಬಿಕ ಹಿಂಸೆಯ ಆರೋಪಗಳು ಒಳಗೊಂಡಂತೆ ಅವರ ಮೇಲೆ ಹಲವು ಆರೋಪಗಳಿವೆ. ಇದರ ಮಧ್ಯೆ ನವೆಂಬರ್ 17, 2015 ರಂದು ತಮಗೆ HIV ಪಾಸಿಟಿವ್ ಇದೆ ಎಂದು ಸಾರ್ವಜನಿಕವಾಗಿ ಬಹಿರಂಗಪಡಿಸುವ ಮೂಲಕ ಅಚ್ಚರಿಗೆ ಕಾರಣರಾದರು.
ಬಿಲ್ಲಿ ಪೋರ್ಟರ್: ಮಹಾಮಾರಿ ಹೆಚ್ಐವಿಯಿಂದ ಇವರ ಕೂಡ ಈ ರೋಗಕ್ಕೆ ತುತ್ತಾದವರು. ಅಮೆರಿಕನ್ ನಟ, ಗಾಯಕ, ಬರಹಗಾರ ಮತ್ತು ನಿರ್ದೇಶಕರಲ್ಲಿ ಒಬ್ಬರಾಗಿರುವ ಬಿಲ್ಲಿ 2021 ರಲ್ಲಿ ತಮಗೆ ಹೆಚ್ಐವಿ ಪಾಸಿಟಿವ್ ಇರುವುದಾಗಿ ಬಹಿರಂಗಪಡಿಸಿದರು. ಮೌನದಿಂದ ಮತ್ತು ಅವಮಾನದಿಂದ ತನ್ನನ್ನು ತಾನು ಮುಕ್ತಗೊಳಿಸಲು ಆಶಿಸುತ್ತಿರುವುದರಿಂದ ಇದೀಗ ಹೆಚ್ಐವಿ ಇರುವುದನ್ನು ಬಹಿರಂಗಪಡಿಸಲು ನಿರ್ಧರಿಸಿದ್ದೇನೆ ಎಂದು ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. 2019 ರಲ್ಲಿ ಎಮ್ಮಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದ ಅವರು ಪಾತ್ರಕ್ಕಾಗಿ ತಮ್ಮ ಲಿಂಗವನ್ನೇ ಬದಲಿಸಿಕೊಂಡರು. ಅಲ್ಲಿಂದ ಹೆಚ್ಐವಿ ಬಗ್ಗೆ ಮುಕ್ತವಾಗಿ ಮಾತನಾಡಲಾಂಭಿಸಿದ ಬಿಲ್ಲಿ ಇದರ ಬಗ್ಗೆ ಅರಿವು ಸಹ ಮೂಡಿಸುತ್ತಿದ್ದಾರೆ. ಸದ್ಯ ಅವರು ಅವಳಾಗಿದ್ದಾರೆ.
ಗ್ರೆಗ್ ಲೌಗಾನಿಸ್: ಅಮೆರಿಕನ್ ಒಲಂಪಿಕ್ ಡೈವರ್ ಆದ ಗ್ರೆಗ್ ಲೌಗಾನಿಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಇತಿಹಾಸ ಬರೆದವರು. ಅತ್ಯುತ್ತಮ ಅಮೆರಿಕನ್ ಡೈವರ್ ಮತ್ತು ಈ ಇತಿಹಾಸದ ಶ್ರೇಷ್ಠ ಡೈವರ್ ಎಂದು ನಾಮಾಂಕಿತರಾದವರು. ಆದರೆ, 1988ರ ಸಿಯೋಲ್ ಒಲಿಂಪಿಕ್ಸ್‌ಗೆ ಆರು ತಿಂಗಳ ಮೊದಲು ತಮಗೆ HIV ಪಾಸಿಟಿವ್ ಇರುವುದು ಗೊತ್ತಾಯಿತು. 1995 ರಲ್ಲಿ ತಮ್ಮ ಆತ್ಮಚರಿತ್ರೆ ಬ್ರೇಕಿಂಗ್ ದಿ ಸರ್ಫೇಸ್ ಬಿಡುಗಡೆಯ ಸಮಯದಲ್ಲಿ HIV-ಪಾಸಿಟಿವ್ ಇರುವುದಾಗಿ ಘೋಷಿಸಿದರು. ಸಲಿಂಗಕಾಮಿಯಾಗಿ ಪರಿವರ್ತನೆಯಾದ ಅವರು 1995ರ ಸಂದರ್ಶನದಲ್ಲಿ HIV-ಪಾಸಿಟಿವ್ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದರು. ಇವರಷ್ಟೇ ಅಲ್ಲದೇ ಇನ್ನೂ ಅನೇಕ ಸೆಲೆಬ್ರಿಟಿಗಳು HIV/AIDS ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ವೈದ್ಯರಾಗಿ ನೇಮಕಗೊಂಡು ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು