ನವದೆಹಲಿ: ಭಾರತೀಯ ಮಹಿಳಾ ಕುಸ್ತಿಪಟು ನಿಶಾ ದಹಿಯಾ (21) ಮತ್ತು ಆಕೆಯ ಸಹೋದರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆಂಬ ಸುದ್ದಿ ನಿನ್ನೆ ಎಲ್ಲೆಡೆ ಹಬ್ಬಿತ್ತು. ಈ ಸುದ್ದಿಯ ನಂತರ ವಿಡಿಯೋ ತುಣುಕು ಹರಿಬಿಟ್ಟು, ನನ್ನ ಮೇಲೆ ಯಾವುದೇ ರೀತಿಯ ಗುಂಡಿನ ದಾಳಿ ನಡೆದಿಲ್ಲ. ನಾನು ಜೀವಂತವಾಗಿದ್ದೇನೆ ಎಂದು ನಿಶಾ ದಹಿಯಾ ಸ್ಪಷ್ಟನೆ ನೀಡಿದ್ದರು.
ಇದರ ಬೆನ್ನಲ್ಲೇ ಇಂದು ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ (ಮಹಿಳಾ ವಿಭಾಗ)ನಲ್ಲಿ ನಿಶಾ (Nisha Dahiya wins Gold) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಸ್ತಿ ಚಾಂಪಿಯನ್ಶಿಪ್ (Women's National Wrestling C'ship)ನಲ್ಲಿ ರೈಲ್ವೇ ಪರ ಕಣಕ್ಕಿಳಿದಿದ್ದ ನಿಶಾ 65 ಕೆ.ಜಿ ವಿಭಾಗದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಸತತವಾಗಿ ಎರಡನೇ ವರ್ಷವೂ ಚಿನ್ನದ ಪದಕ ಗೆದ್ದಿರುವ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: 'ನಾನವಳಲ್ಲ...'ಹರಿಯಾಣದ ಹತ್ಯೆ ಸುದ್ದಿಗೆ ನಿಶಾ ದಹಿಯಾ ಸ್ಪಷ್ಟನೆ ಹೀಗಿದೆ..