ETV Bharat / bharat

ಮಹಿಳಾ ಹಾಕಿ ತಂಡಕ್ಕೆ ಸೋಲು: ಭಾವುಕರಾದ ಕ್ರೀಡಾಪಟುಗಳ ಕುಟುಂಬಸ್ಥರು - womens hockey team

ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಗ್ರೇಟ್​ ಬ್ರಿಟನ್ ವಿರುದ್ಧ ಹೋರಾಡಿ ಸೋಲು ಕಂಡಿದ್ದು, ಕ್ರೀಡಾಪಟುಗಳ ಕುಟುಂಬಸ್ಥರು ಮಾಹಿಳಾ ಹಾಕಿ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರೀಡಾಪಟುಗಳ ಕುಟುಂಬಸ್ಥರು
ಕ್ರೀಡಾಪಟುಗಳ ಕುಟುಂಬಸ್ಥರು
author img

By

Published : Aug 6, 2021, 10:42 AM IST

ಹರಿಯಾಣ: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕೆ ತೀವ್ರ ಸೆಣಸಾಟ ನಡೆಸಿ ಭಾರತದ ಮಹಿಳಾ ತಂಡ ನಿರ್ಗಮಿಸಿದ ಹಿನ್ನೆಲೆಯಲ್ಲಿ ಹಾಕಿ ಆಟಗಾರ್ತಿ ನೇಹಾ ಗೋಯಲ್ ಅವರ ತಾಯಿ ಭಾವುಕರಾದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ನೇಹಾ ಗೋಯಲ್ ತಾಯಿ, ಸೋಲು-ಗೆಲುವು ಆಟದ ಒಂದು ಭಾಗ. ಈಗ ನಮ್ಮ ತಂಡ ಸೋತಿರಬಹುದು ಆದರೆ ಮುಂದೊಂದು ದಿನ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಮಗಳ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • #Olympics | Hockey player Neha Goyal's mother gets emotional as the Indian women's team loses to Great Britain in the Bronze medal match

    Winning and losing is a part of the game. I am sure the team will win again, says her mother pic.twitter.com/JP5uT4KPBf

    — ANI (@ANI) August 6, 2021 " class="align-text-top noRightClick twitterSection" data=" ">

ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರ ತಂದೆ ಸಹ ಮಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮಹಿಳಾ ಹಾಕಿ ತಂಡವು ಭಾರತದ ಹೆಣ್ಣುಮಕ್ಕಳನ್ನು ಹುರಿದುಂಬಿಸುವಂತೆ ಮಾಡಿದೆ. ನಮ್ಮ ಕ್ರೀಡಾಪಟುಗಳು ಮಾಡಿದ ಪ್ರಯತ್ನಕ್ಕೆ ನಾವು ಯಾವಾಗಲೂ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ರಾಣಿ ಮನೆಗೆ ಹಿಂದಿರುಗಿದ ನಂತರ ಸಂತೋಷದಿಂದ ಸ್ವಾಗತಿಸಲಾಗುತ್ತದೆ ಎಂದರು.

  • It is not really a loss. It's a matter of pride for us to see our girls reach so far: Gurcharan Singh, brother of Gurjit Kaur who scored 2 goals in Indian Women Hockey Team's #TokyoOlympics Bronze medal match against Great Britain, today.

    India lost to Great Britain 3-4 pic.twitter.com/J0QdUMBHO8

ಗುರ್ಜಿತ್ ಕೌರ್ ಅವರ ಸಹೋದರ ಗುರ್ಚರಣ್ ಸಿಂಗ್ ಸಹ ಮಾಹಿಳಾ ಹಾಕಿ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಹುಡುಗಿಯರು ಇಲ್ಲಿಯವರೆಗೆ ತಲುಪುವುದನ್ನು ನೋಡುವುದು ನಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.