ETV Bharat / bharat

ವಿಶ್ವ ಮಹಿಳಾ ದಿನ ವಿಶೇಷ: ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ 16 ಕಿಲೋ ಮೀಟರ್ ಕ್ರಮಿಸುವ ಶಿಕ್ಷಕಿ - ಕೇರಳದಲ್ಲಿ ವಾಸವಿರುವ ಶಿಕ್ಷಕಿ

2015ರಿಂದಲೂ ಶಿಕ್ಷಕಿಯೋರ್ವಳು ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡಲು ಪ್ರತಿದಿನ 16 ಕಿಲೋ ಮೀಟರ್ ನಡೆದೇ ಹೋಗ್ತಿದ್ದು,ಕಾಡು ಪ್ರಾಣಿಗಳ ಭಯದಲ್ಲೇ ಅಲ್ಲಿಂದ ವಾಪಸ್​ ಬರುತ್ತಾರೆ.

Mini teacher walks 16 km a day to teach 10 tribal children

author img

By

Published : Mar 7, 2022, 4:20 PM IST

ಕೋಯಿಕ್ಕೋಡ್​ (ಕೇರಳ): ಶಿಕ್ಷಣ ವಂಚಿತ ಬುಡಕಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಶಿಕ್ಷಕಿಯೋರ್ವರು ಪ್ರತಿದಿನ 16 ಕಿಲೋ ಮೀಟರ್ ನಡೆದು ಹೋಗಿ ಬರುತ್ತಿದ್ದಾರೆ.

ಕೋಯಿಕ್ಕೋಡ್​ದ ಅಂಬುಮಾಳದ ಬುಡಕಟ್ಟು ಕಾಲೋನಿಯಲ್ಲಿರುವ 20ಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಕಿ ಮಿನಿ ಪ್ರತಿದಿನ ಪಾಠ-ಪ್ರವಚನ ಮಾಡ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಭಯದಲ್ಲೇ ನಡೆದು ಸಾಗುವ ಇವರು ಸಂಜೆ ಮನೆಗೆ ವಾಪಸ್​ ಆಗುತ್ತಾರೆ.

ಕೋಝಿಕ್ಕೋಡ್ ಜಿಲ್ಲೆಯ ಚಾಲಿಯಾರ್ ಪಂಚಾಯತ್‌ನ ವೆಂಡತು ಪೊಯಿಲ್ ನಿವಾಸಿಯಾಗಿರುವ ಮಿನಿ, ಅಂಬುಮಾಲಾ ಸರ್ಕಾರಿ ಶಾಲೆಯಲ್ಲಿರುವ ಏಕೈಕ ಶಿಕ್ಷಕಿ. ಈ ಹಿಂದೆ ಅಲ್ಲಿ ಶಿಕ್ಷಕಿಯಾಗಿದ್ದವರು ರಾಜೀನಾಮೆ ನೀಡಿದಾಗ ಮಿನಿ ಅರೆ ಶಿಕ್ಷಕಿಯಾಗಿ ಶಾಲೆಗೆ ಸೇರಿಕೊಂಡರು.

2015ರಿಂದಲೂ ಪ್ರತಿದಿನ 16 ಕಿಲೋ ಮೀಟರ್​ ನಡೆದೇ ಹೋಗುತ್ತಿದ್ದು, ಮಿನಿ ಬುಡಕಟ್ಟು ಸಮುದಾಯದ ನೆಚ್ಚಿನ ಮಿನಿ ಶಿಕ್ಷಕಿಯಾಗಿದ್ದರು. ಇದರ ಜೊತೆಗೆ ಆದಿವಾಸಿಗಳಿಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡುವ ಸ್ವಯಂಸೇವಕಿಯೂ ಆದರು. ಆಧಾರ್​ ಕಾರ್ಡ್​, ಪಡಿತರ ಚೀಟಿ ಜೊತೆಗೆ ಅಲ್ಲಿನ ಸಮುದಾಯಕ್ಕೆ ಕೋವಿಡ್​​ ಲಸಿಕೆ ಹಾಕಿಸುವಲ್ಲಿಯೂ ಯಶಸ್ವಿಯಾದರು.

ಇದನ್ನೂ ಓದಿ: ಮಾರ್ಚ್​​ 18ರೊಳಗೆ ಪೆಟ್ರೋಲ್​​-ಡೀಸೆಲ್​ ಬೆಲೆಯಲ್ಲಿ 12 ರೂ ಏರಿಕೆ?

ಕಳೆದ ಐದು ತಿಂಗಳಿಂದ ಮಿನಿಗೆ ಸಂಬಳ ನೀಡಿಲ್ಲ. ಇಲ್ಲಿಗೆ ತೆರಳಲು ಸರಿಯಾದ ರಸ್ತೆ ಇಲ್ಲ. ಕಾಡು-ಪ್ರಾಣಿಗಳ ಕಾಟದ ಮಧ್ಯೆ ನಡೆದುಕೊಂಡೇ ಹೋಗುತ್ತಾರೆ. ಸಮುದಾಯದಲ್ಲಿ ವಾಸವಾಗಿರುವ 6ರಿಂದ 10 ವರ್ಷದ ಮಕ್ಕಳಿಗೆ ಶಿಕ್ಷಣ ನೀಡ್ತಿದ್ದು, ಅಲ್ಲಿನ ಮಕ್ಕಳ ಬಾಳಲ್ಲಿ ಬೆಳಕು ತರುವ ಕೆಲಸ ಮಾಡ್ತಿದ್ದಾರೆ.

ಈ ಬುಡಕಟ್ಟು ಸಮುದಾಯದಲ್ಲಿ ಒಟ್ಟು 25 ಕುಟುಂಬಗಳಿದ್ದು, 26 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಓರ್ವ ವಿದ್ಯಾರ್ಥಿ 12ನೇ ತರಗತಿ ವ್ಯಾಸಂಗ ಮಾಡ್ತಿದ್ದು, ಮತ್ತೋರ್ವ 11ನೇ ತರಗತಿ ಕಲಿಯುತ್ತಿದ್ದಾನೆ. ಉಳಿದ ವಿದ್ಯಾರ್ಥಿಗಳಿಗೆ ಮಿನಿ ಶಿಕ್ಷಣ ನೀಡ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.