ETV Bharat / bharat

ಪೋರ್ನ್​ ಸೈಟ್​ ಅಲ್ಲ, ಟ್ವಿಟರ್​ನಲ್ಲಿ ಅಶ್ಲೀಲ ವಿಡಿಯೋ ಹಂಚಿಕೆ..ಮಹಿಳಾ ಆಯೋಗದ ದೂರು - ಮಹಿಳೆಯರ ಪೋರ್ನ್ ವಿಡಿಯೊ

ಪೋರ್ನ್​ ಸೈಟ್​ಗಳನ್ನೇ ಬ್ಯಾನ್​ ಮಾಡಬೇಕು ಎಂಬ ಕೂಗು ಒಂದೆಡೆಯಾದರೆ, ಟ್ವಿಟರ್​ನಲ್ಲಿ ಮಹಿಳೆಯರ ಅಶ್ಲೀಲ ಪೋಟೋಗಳನ್ನು ಹಂಚಿಕೊಳ್ಳುತ್ತಿರುವ ಆಘಾತಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ.

womens-commission-seeks-reply
ಟ್ವಿಟ್ಟರ್​ನಲ್ಲಿ ಅಶ್ಲೀಲ ವಿಡಿಯೋ ಹಂಚಿಕೆ
author img

By

Published : Sep 20, 2022, 11:02 PM IST

ನವದೆಹಲಿ: ಜಗತ್ತಿನಲ್ಲಿ ಅತ್ಯಧಿಕ ಬಳಕೆದಾರರುಳ್ಳ ಸಾಮಾಜಿಕ ಜಾಲತಾಣವಾದ ಟ್ವಿಟರ್​ನಲ್ಲಿ ಕೇವಲ 20 ರೂಪಾಯಿಗಾಗಿ ಹುಡುಗಿಯರ ಅಶ್ಲೀಲ ವಿಡಿಯೋಗಳನ್ನು ಹರಿಬಿಡುತ್ತಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ದೆಹಲಿ ಮಹಿಳಾ ಆಯೋಗ ಈ ಬಗ್ಗೆ ವರದಿ ನೀಡಲು ಕೋರಿ ದೆಹಲಿ ಪೊಲೀಸರು ಮತ್ತು ಟ್ವಿಟರ್​ಗೆ ನೋಟಿಸ್​ ನೀಡಿದೆ.

ಟ್ವಿಟರ್‌ನ ವಿವಿಧ ಖಾತೆಗಳಲ್ಲಿ ಕೇವಲ 20 ರೂಪಾಯಿಗೆ ಹುಡುಗಿಯರು ಮತ್ತು ಮಹಿಳೆಯರ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳನ್ನು ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್​ ಅವರೇ ಟ್ವೀಟ್​​ ಮಾಡಿ ದೂರಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ನೂರಾರು ಟ್ವಿಟರ್ ಖಾತೆಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರ ಪೋರ್ನ್ ವಿಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅಶ್ಲೀಲ ವಿಡಿಯೋಗಳನ್ನು 20 ರೂಪಾಯಿಯಿಂದ ವಿವಿಧ ಬೆಲೆಗಳಿಗೆ ಮಾರಾಟ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸಕ್ರಿಯ ಜಾಲ ಶಂಕೆ: ಅಶ್ಲೀಲ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದು ಯಾವುದೋ ಗ್ಯಾಂಗ್‌ನ ಕೈವಾಡವಾಗಿರುವ ಶಂಕೆ ವ್ಯಕ್ತಪಡಿಸಿದ ಮಲಿವಾಲ್, ವಿಡಿಯೋದಲ್ಲಿರುವ ಹುಡುಗಿಯರು, ಮಹಿಳೆಯರನ್ನು ಗುರುತಿಸುತ್ತಿದ್ದು ಅವರಿಂದ ದೂರು ಕೊಡಿಸಲಾಗುವುದು ಎಂದು ಹೇಳಿದರು.

ಫೋಟೋಗಳ ಮೇಲೆ ಬೆಲೆ ನಮೂದು: ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ, ಫೋಟೋಗಳ ಮೇಲೆ ದರ ಮತ್ತು ಸಂಪರ್ಕ ಸಂಖ್ಯೆಯನ್ನು ಬರೆಯಲಾಗಿದೆ. ವಿಡಿಯೋ ಬೇಕಾದಲ್ಲಿ ಪೇಟಿಎಂ, ಗೂಗಲ್​ ಪೇ ಮೂಲಕ ಹಣ ಸಂದಾಯ ಮಾಡಿದರೆ ವಿಡಿಯೋ ಕಳುಹಿಸುವುದಾಗಿ ಬರೆದುಕೊಂಡಿದ್ದಾರೆ.

ಓದಿ: ರಾತ್ರಿ ಊಟಕ್ಕೆಂದು ಬೇಯಿಸಿದ್ದ ಕುರಿ ಮಾಂಸ ತಿಂದ ನಾಯಿ: ಮಗಳಿಗೆ ಗುಂಡಿಕ್ಕಿ ಕೊಂದ ತಂದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.