ಕಾನ್ಪುರ್ ದೇಹತ್, ಉತ್ತರ ಪ್ರದೇಶ : ಎಲ್ಲಾ ಪಕ್ಷಗಳು ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ತೀವ್ರ ಕಸರತ್ತು ನಡೆಸುತ್ತಿವೆ. 2022ರಲ್ಲಿ ನಡೆಯುವ ಚುನಾವಣೆಗಳಿಗೆ ಮತದಾರರ ಓಲೈಕೆ ಆರಂಭವಾಗಿದೆ. ಸಾರ್ವಜನಿಕ ಸಭೆಗಳು ಕೂಡ ರಂಗೇರುತ್ತಿವೆ.
ಸಮಾಜವಾದಿ ಪಕ್ಷ ಮಂಗಳವಾರ ಸಾರ್ವಜನಿಕ ಕಾರ್ಯಕ್ರಮವೊಂದನ್ನು ನಡೆಸಿದೆ. ನೂರಾರು ಮಂದಿ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಿಕಂದರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾರಂಭದಲ್ಲಿ ಪಾಲ್ಗೊಂಡವರಿಗೆ ಸೀರೆ, ಊಟ ಹಾಗೂ 500 ರೂಪಾಯಿ ಹಣ ನೀಡುವುದಾಗಿ ಆಯೋಜಕರು ಹೇಳಿದ್ದರು. ಆದರೆ, ಅವರು ಏನೂ ಕೊಟ್ಟಿಲ್ಲ ಎಂದು ಕೆಲವು ಮಹಿಳೆಯರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಯೋಗಿ ಮತ್ತು ದೇಶದಲ್ಲಿ ಮೋದಿಯೇ ಒಳ್ಳೆಯ ಕೆಲಸ ಮಾಡುತ್ತಿದ್ದು, ಸಮಾಜವಾದಿ ಪಕ್ಷ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಮಹಿಳೆಯೊಂದಿಗೆ ಅನುಚಿತ ವರ್ತನೆ ಆರೋಪ: ವಕೀಲ ಅಮಾನತು